ನವದೆಹಲಿ[ಜ.05]: ಚಿತ್ರವೊಂದು 100 ಕೋಟಿ ರು. ಕ್ಲಬ್‌ ಸೇರುವುದೇ ಅಪರೂಪ. ಅಂಥದ್ದರಲ್ಲಿ ತಮಿಳು ನಟ ವಿಜಯ ಅವರ ಮುಂದಿನ ಚಿತ್ರಕ್ಕಾಗಿ ಸನ್‌ ಪಿಕ್ಚ​ರ್‍ಸ್ ಸಂಸ್ಥೆ 100 ಕೋಟಿ ರು. ಸಂಭಾವನೆ ನೀಡುತ್ತಿದೆ ಎಂದು ವರದಿಯೊಂದು ಹೇಳಿದೆ. ಈ ಮೂಲಕ ಸೂಪರ್‌ ಸ್ಟಾರ್‌ ರಜನೀಕಾಂತ್‌ ಅವರನ್ನು ಹಿಂದಿಕ್ಕಿ, ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ತಮಿಳು ನಟ ಎಂಬ ಖ್ಯಾತಿ ವಿಜಯ್‌ ಪಾಲಾಗಿದೆ ಎಂಬುದು ಸಂಚಲನಕ್ಕೆ ಕಾರಣವಾಗಿದೆ.

ರಜನೀಕಾಂತ್‌ ತಮ್ಮ ಮುಂಬರುವ ದರ್ಬಾರ್‌ ಚಿತ್ರಕ್ಕಾಗಿ 90 ಕೋಟಿ ರು. ಸಂಭಾವನೆ ಪಡೆದುಕೊಂಡಿದ್ದು, ಇದುವರೆಗಿನ ಗರಿಷ್ಠ ಮೊತ್ತ ಎನಿಸಿಕೊಂಡಿದೆ. ಹೆಸರಿಡದ ಮುಂದಿನ ಸಿನಿಮಾಕ್ಕಾಗಿ ಸನ್‌ ಚಿತ್ರ ಸಂಸ್ಥೆ ಈಗಾಗಲೇ ವಿಜಯ್‌ಗೆ 50 ಕೋಟಿ ರು. ಮುಂಗಡ ಪಾವತಿ ಮಾಡಿದೆ. ಈ ಸಿನಿಮಾವನ್ನು ವೆಟ್ರಿಮಾರನ್‌ ಅವರು ನಿರ್ದೇಶಿಸುವ ಸಾಧ್ಯತೆ ಇದೆ. 2019ರಲ್ಲಿ ಬಿಡುಗಡೆಯಾದ ವಿಜಯ್‌ ಅಭಿಯನಯದ ಬಿಗಿಲ್‌ ಸಿನಿಮಾ 300 ಕೋಟಿ ರು. ಗಳಿಸಿತ್ತು.

ವಿಜಯ್‌ ಅಭಿನಯದ ಸರ್ಕಾರ್‌ ಚಿತ್ರಕ್ಕೂ ಸನ್‌ ಪಿಕ್ಚರ್‌ ಹಣ ಹೂಡಿತ್ತು. ಇದೀಗ ಸನ್‌ ಪಿಕ್ಚರ್‌ ಬ್ಯಾನರ್‌ ಅಡಿ ನಿರ್ಮಾಣ ಆಗುತ್ತಿರುವ ‘ಮಾಸ್ಟರ್‌’ ಚಿತ್ರಕ್ಕೆ ವಿಜಯ್‌ 100 ಕೋಟಿ ರು. ಸಂಭಾವನೆ ಪಡೆಯಲಿದ್ದಾರೆ. ಈಗಾಗಲೇ ಮುಂಗಡವಾಗಿ 50 ಕೋಟಿ ರು. ಚೆಕ್‌ ಅನ್ನು ಸನ್‌ ಪಿಕ್ಚ​ರ್‍ಸ್ ಪಾವತಿಸಿದೆ. ಈ ಚಿತ್ರ 2020ರ ದೀಪಾವಳಿ ವೇಳೆಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಈ ಮುನ್ನ ರಜನೀಕಾಂತ್‌ ತಮ್ಮ ಮುಂಬರುವ ದರ್ಬಾರ್‌ ಚಿತ್ರಕ್ಕಾಗಿ 90 ಕೋಟಿ ರು. ಸಂಭಾವನೆ ಪಡೆದುಕೊಂಡಿದ್ದು, ಇದುವರೆಗಿನ ಗರಿಷ್ಠ ಮೊತ್ತ ಎನಿಸಿಕೊಂಡಿದೆ.