ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ಮಾಡಬೇಕೆನ್ನುವ ವಿಶೇಷ ಅಭಿಮಾನಿಯ ಕನಸು ಕೊನೆಗೂ ನನಸಾಗಿದೆ. 

 

ಪಲಕ್ಕಾಡ್‌ನ ವಿಶೇಷ ಕಲಾವಿದ ಪ್ರಣವ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ. ಹುಟ್ಟುವಾಗಲೇ ಇವರಿಗೆ ಕೈಗಳಿಲ್ಲ.  ಬಹಳ ಸಮಯದಿಂದ ರಜನಿಕಾಂತ್‌ರನ್ನು ಭೇಟಿ ಮಾಡಬೇಕೆಂದುಕೊಂಡಿದ್ದರು. ಕೊನೆಗೆ ಅವರ ಕನಸು ನನಸಾಗಿದೆ. ಚೆನ್ನೈನಲ್ಲಿರುವ ರಜನಿ ನಿವಾಸದಲ್ಲಿ ಭೇಟಿ ಮಾಡಿ ಕಾಲಿನಲ್ಲೇ ಸೆಲ್ಫಿ ತೆಗೆದುಕೊಂಡರು. ಜೊತೆಗೆ ತಾವೇ ಬಿಡಿಸಿದ ರಜನಿ ಫೋಟೋವನ್ನು ಕೊಟ್ಟಿದ್ಧಾರೆ. ಅಭಿಮಾನಿಯ ಪ್ರೀತಿ ಕಂಡು ರಜನಿ ಫುಲ್ ಖುಷ್ ಆಗಿದ್ದು ಅವರ ಕಾಲು ಹಿಡಿದು ಕೃತಜ್ಞತೆ ಸಲ್ಲಿಸಿದ್ದಾರೆ. 

ಬರ್ತಡೇ ಸಂಭ್ರಮದಲ್ಲಿ ಅಭಿಮಾನಿಗಳು; ವಾರಕ್ಕೂ ಮೊದಲೇ ಸೆಲಬ್ರೇಟ್ ಮಾಡಿದ ರಜನಿಕಾಂತ್

ಪ್ರಣವ್ ಕೆಲ ದಿನಗಳ ಹಿಂದೆ ಕೇರಳ ಸಿಎಂ ಪಿನರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಸೆಲ್ಫಿ ತೆಗೆದುಕೊಂಡಿದ್ದರು.  ಆ ಫೋಟೋಗಳು ವೈರಲ್ ಆಗಿತ್ತು.