ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇದೇ ಡಿಸಂಬರ್ 12 ರಂದು 69 ನೇ ವರ್ಷವನ್ನು ಪೂರೈಸಲಿದ್ದು  ಅದಕ್ಕೂ ಮುನ್ನವೇ ಬರ್ತಡೇ ಆಚರಿಸಿಕೊಂಡಿದ್ದಾರೆ. 

ಕ್ಯಾಲೆಂಡರ್ ಪ್ರಕಾರ ಡಿಸಂಬರ್ 12 ಆದರೂ ತಿಥಿ ಪ್ರಕಾರ ಡಿಸಂಬರ್ 2. ಹಾಗಾಗಿ ಸಂಪ್ರದಾಯದ ಪ್ರಕಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 

 

ರಜನಿಕಾಂತ್ ಸದ್ಯ 'ದರ್ಬಾರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ನಯನತಾರಾ ಲೀಡಿಂಗ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  25 ವರ್ಷಗಳ ನಂತರ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.