ಆಗಸ್ಟ್ 14 ರಂದು ತೆರೆ ಕಾಣಲಿರುವ, ರಜನೀಕಾಂತ್​, ಉಪೇಂದ್ರ ಸೇರಿದಂತೆ ಹಲವು ಸೂಪರ್​ಸ್ಟಾರ್​ಗಳ ತಂಡವೇ ಇರುವ ಕೂಲಿ ಚಿತ್ರದ ಸ್ಟೋರಿ ಆನ್​ಲೈನ್​ನಲ್ಲಿ ಲೀಕ್​ ಆಗಿದೆ. ಏನಿದು ಸ್ಟೋರಿ? 

ಕೆಲವು ಸೂಪರ್​ಸ್ಟಾರ್​ ಸೇರಿದಂತೆ ಬಹುದೊಡ್ಡ ಸ್ಟಾರ್​ಗಳನ್ನು ಒಳಗೊಂಡಿರುವ ಚಿತ್ರ ಕೂಲಿ. ಕನ್ನಡ ಸೇರಿ 5 ಭಾಷೆಗಳಲ್ಲಿ ಡಬ್ ಆಗುತ್ತಿರುವ ಕೂಲಿಯಲ್ಲಿ ರಜನಿಕಾಂತ್, ಉಪೇಂದ್ರ ಸೇರಿದಂತೆ ಘಟಾನುಘಟಿ ಸ್ಟಾರ್​ಗಳು ನಟಿಸಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶಿಸಿರುವ, ಸನ್ ಪಿಕ್ಚರ್ಸ್ ನಿರ್ಮಾಣದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಈ ಸಿನಿಮಾ ಬರುವ ಆಗಸ್ಟ್ 14 ರಂದು ತೆರೆ ಕಾಣಲಿದೆ. ಅಂದಾಜು 350 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಆಗಿರುವ ಈ ಚಿತ್ರದಲ್ಲಿ ರಜನಿಕಾಂತ್, ಉಪೇಂದ್ರ ಹೊರತುಪಡಿಸಿ, ನಾಗಾರ್ಜುನ, ಆಮೀರ್ ಖಾನ್ ಅವರೂ ಇದ್ದಾರೆ. ಇದಾಗಲೇ ಅನಿರುದ್ದ್ ರವಿಚಂದರ್ ಸಂಗೀತದಲ್ಲಿ ಸಿನಿಮಾ ಸಾಂಗ್ಸ್ ಸದ್ದು ಮಾಡುತ್ತಿದೆ. ಈಗಾಗಲೇ ಓಟಿಟಿ ರೈಟ್ಸ್, ಥ್ರಿಯೇಟ್ರಿಕಲ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿ ದಾಖಲೆ ಬರೆದಿದೆ. ಭಾರೀ ಮೊತ್ತಕ್ಕೆ ಕರ್ನಾಟಕ ವಿತರಣೆ ಹಕ್ಕು ಬಿಕರಿಯಾಗಿದ್ದು ದೊಡ್ಡ ಮಟ್ಟದಲ್ಲಿ ಇಲ್ಲಿ ಕೂಡ ಸಿನಿಮಾ ತೆರೆಗೆ ಬರಲಿದೆ. ವಿದೇಶಗಳಲ್ಲಿ ಈಗಾಗಲೇ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಆದರೆ, ಇದರ ನಡುವೆಯೇ ಸಿನಿಮಾದ ಕಥೆಯೂ ಆನ್​ಲೈನ್​ನಲ್ಲಿ ಲೀಕ್​ ಆಗಿರುವುದಾಗಿ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಲೀಕ್​ ಎನ್ನುವುದು ಸಿನಿಮಾ ತಂಡಕ್ಕೆ ಬಹುದೊಡ್ಡ ತಲೆನೋವಾಗಿಬಿಟ್ಟಿದೆ. ಕೆಲವೊಮ್ಮೆ ಸಿನಿಮಾವೇ ಲೀಕ್​ ಆಗುವುದೂ ಇದೆ. ಆದರೆ ಇದೀಗ ಕೂಲಿ ಚಿತ್ರದ ಕಥೆ ಲೀಕ್​ ಆಗಿರುವುದಾಗಿ ಹೇಳಲಾಗುತ್ತಿದೆ. ಏಕೆಂದರೆ, ಈ ಸಿನಿಮಾ ಸಿಕ್ಕಾಪಟ್ಟೆ ಹೈಪ್​ ಕ್ರಿಯೇ ಮಾಡಿದ್ದು, ಪೋಸ್ಟರ್, ಟೀಸರ್, ಸಾಂಗ್ಸ್ ಎಲ್ಲವೂ ಹಿಟ್ ಆಗಿದೆ. ಆದರೆ ಸಿನಿಮಾದ ಕಥೆ ಏನು ಎನ್ನುವ ಬಗ್ಗೆ ಇದುವರೆಗೂ ಚಿತ್ರ ತಂಡವು ಬಾಯಿ ಬಿಟ್ಟಿಲ್ಲ. ಆದರೆ ಇದರ ನಡುವೆಯೇ ಕಥೆ ಲೀಕ್​ ಆಗಿದೆ ಎನ್ನಲಾಗುತ್ತಿದೆ.

ಸದ್ಯ ಲೀಕ್​ ಆಗಿದೆ ಎನ್ನಲಾದ ಈ ಸ್ಟೋರಿಯಲ್ಲಿ, ಈ ಚಿತ್ರವು ರಜನಿಕಾಂತ್ ಅವರನ್ನು ಒಂದು ಕಾಲದಲ್ಲಿ ಪ್ರಬಲವಾದ ಚಿನ್ನದ ಕಳ್ಳಸಾಗಣೆದಾರ ದೇವ ಎಂದು ತೋರಿಸುತ್ತದೆ. ಆತನಿಗೆ ವಯಸ್ಸಾಗಿರುತ್ತದೆ ಮತ್ತು ತನ್ನ ಹಳೆಯ ಗ್ಯಾಂಗ್ ಅನ್ನು ಮರಳಿ ತರಲು ಬಯಸುತ್ತಾನೆ. ಹಳೆಯ ಚಿನ್ನದ ಕೈಗಡಿಯಾರಗಳ ಒಳಗೆ ಮರೆಮಾಡಲಾಗಿರುವ ಕದ್ದ ತಂತ್ರಜ್ಞಾನವನ್ನು ಬಳಸಿಕೊಂಡು ಅವನು ಹೀಗೆ ಮಾಡಲು ಕಾರ್ಯಪ್ರವೃತ್ತನಾಗಿರುತ್ತಾನೆ ಎನ್ನಲಾಗಿದೆ. ಈ ಕೈಗಡಿಯಾರಗಳು ಅವನ ಹಳೆಯ ತಂಡವನ್ನು ಮತ್ತೆ ಒಟ್ಟುಗೂಡಿಸಲು ಸಹಾಯ ಮಾಡುತ್ತವೆ. ಆದರೆ ಅವನ ಯೋಜನೆ ನಿರೀಕ್ಷೆಯಂತೆ ನಡೆಯುವುದಿಲ್ಲ. ಪುನರಾಗಮನವಾಗಿ ಪ್ರಾರಂಭವಾಗುವ ವಿಷಯಗಳು ಹೆಚ್ಚು ದೊಡ್ಡದಾಗಿ ಬದಲಾಗುತ್ತವೆ. ಹೊಸ ಭೂಗತ ಲೋಕವು ಅಂತಿಮವಾಗಿ ಅಪರಾಧ, ದುರಾಸೆಯಿಂದ ಕೂಡಿರುವುದಾಗಿ ಕಂಡುಬರುತ್ತದೆ.

ಅಷ್ಟಕ್ಕೂ, ಇನ್ನು ಚಿತ್ರದ ಟೀಸರ್, ಪೋಸ್ಟರ್‌ಗಳಲ್ಲಿ ರಜನಿಕಾಂತ್ ಚಿನ್ನದ ಕೈಗಡಿಯಾರಗಳನ್ನು ಹಿಡಿದುಕೊಂಡಿರುವುದನ್ನು ನೋಡಬಹುದು. ಇದನ್ನು ನೋಡಿದರೆ, ದೇವಾ ಅರ್ಥಾತ್​ ರಜನಿಕಾಂತ್ ಮಾಫಿಯಾ ಗ್ಯಾಂಗ್ ಸದಸ್ಯ ಕಲೀಶಾ ಆಗಿ ಉಪೇಂದ್ರ ನಟಿಸಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ನಾಗಾರ್ಜುನ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ ಎಂದು ನಿರ್ದೇಶಕ ಲೋಕೇಶ್ ಕನಕರಾಜ್ ಇದಾಗಲೇ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಶ್ರುತಿ ಹಾಸನ್, ಸತ್ಯರಾಜ್ ಮತ್ತು ಶೌಬಿನ್ ಶಾಹಿರ್ ಕೂಡ ಇದ್ದಾರೆ. ಇದು ರಜನಿಕಾಂತ್ ಅವರೊಂದಿಗಿನ ಚಲನಚಿತ್ರ ನಿರ್ಮಾಪಕರ ಮೊದಲ ಯೋಜನೆಯಾಗಿದೆ.