ಪ್ರಭಾಸ್ ನಟನೆಯ ಓಂ ರಾವುತ್ ನಿರ್ದೇಶನದ ಆದಿಪುರುಷ್ ಚಿತ್ರಕ್ಕೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಬೆಂಬಲಕ್ಕೆ ನಿಂತಿದೆ.

ತೆಲುಗು ಸ್ಟಾರ್ ಪ್ರಭಾಸ್ ನಟನೆಯ, ಓಂ ರಾವುತ್ ನಿರ್ದೇಶನದ ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಟೀಸರ್ ನಲ್ಲಿ ರಾವಣ ಪಾತ್ರ, ಕಳಪೆ ವಿಎಫ್‌ಎಕ್ಸ್ ಸೇರಿದಂತೆ ಅನೇಕ ವಿಚಾರಗಳಿಂದ ಆದಿರುಪುಷ್ ಟ್ರೋಲ್ ಆಗುತ್ತಿದೆ. ಅಲ್ಲದೇ ಓಂ ರಾವುತ್ ವಿರುದ್ಧ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಆದಿಪುರುಷ್ ಬೆಂಬಲಕ್ಕೆ ನಿಂತಿದೆ. ಚಿತ್ರದ ಟೀಸರ್ ನೋಡಿ ಬಿಜೆಪಿಯ ಅನೇಕ ಮುಖಂಡರು ಆಕ್ರೋಶ ಹೊರಹಾಕಿದ್ದರು. ಇದೀಗ ತಿರುಗೇಟು ನೀಡಿರುವ ಎಂಎನ್‌ಎಸ್ ನಾಯಕ ಅಮೇಯಾ ಕೋಪ್ಕರ್, ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂಬ ಬಿಜೆಪಿ ನಾಯಕರ ಬೆದರಿಕೆಯನ್ನು ಖಂಡಿಸಿದರು. 

ಬಿಜೆಪಿ ನಾಯಕರು ನಿಜ ಜೀವನದಲ್ಲಿ ರಾವಣನನ್ನು ನೋಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. 'ಅವರು ತಮ್ಮ ಜೇಬಿನಲ್ಲಿ ರಾವಣ ಫೋಟೋ ಹಿಡಿದು ಓಡಾಡುತ್ತಿದ್ದಾರಾ? ನೀವು ನಿರ್ದೇಶಕರಿಗೆ ಸ್ವಾತಂತ್ರ್ಯ ನೀಡಬೇಕು. ಸ್ವಾತಂತ್ರ್ಯ ನೀಡುವುದು ಎಂದರೆ ದೇವಿ ಮತ್ತು ದೇವತೆಗಳನ್ನು ಅಗೌರವಗೊಳಿಸುವುದು ಎಂದರ್ಥವಲ್ಲ. ನಾನು ಈ ವಿವಾದವನ್ನು ವಿರೋಧಿಸುತ್ತೇನೆ ಮತ್ತು ನಮ್ಮ MNS ಸಿನಿಮಾಗೆ ಸಂಪೂರ್ಣವಾದ ಬೆಂಬಲ ನೀಡುತ್ತದೆ' ಎಂದು ಅಮೇಯಾ ಕೋಪ್ಕರ್ ಹೇಳಿದರು. 

ಓಂ ರಾವತ್ ನಿಜವಾದ ಹಿಂದುತ್ವವಾದಿ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಹೇಳಿದರು. 'ಟೀಸರ್ ನೋಡಿದ ನಂತರ ಮತ್ತು ನಿಮ್ಮ ಕೊಳಕು ರಾಜಕೀಯಕ್ಕಾಗಿ ನೀವು ಈ ಚಿತ್ರವನ್ನು ನಿಲ್ಲಿಸುತ್ತಿದ್ದೀರಿ, ರಾಜಕೀಯವನ್ನು ಮೀರಿ ಯೋಚಿಸಬೇಕು. MNS ಈ ರೀತಿಯ ಕೊಳಕು ರಾಜಕೀಯವನ್ನು ಒಪ್ಪಿಕೊಳ್ಳುವುದಿಲ್ಲ. ಎಂಎನ್‌ಎಸ್ ಹಿಂದೂ, ಮುಸ್ಲಿಂ ಎಲ್ಲ ಧರ್ಮವನ್ನು ಬೆಂಬಲಿಸುತ್ತದೆ. ನಮಗೆ ಯಾವುದೇ ಭೇದವಿಲ್ಲ. ಮೊದಲು ಈ ಸಿನಿಮಾ ನೋಡಿ ನಂತರ ನಿರ್ಧಾರ ತೆಗೆದುಕೊಳ್ಳಿ, ಟೀಸರ್ ನೋಡಿ ಮಾತ್ರ ಇದು ಸರಿಯೋ ತಪ್ಪೋ ಎಂದು ನಿರ್ಧರಿಸಲು ಸಾಧ್ಯವಿಲ್ಲ' ಎಂದು ಹೇಳಿದರು. 

Adipurush Trolled: ಆದಿಪುರುಷ್ ವಿರುದ್ಧ ಭುಗಿಲೆದ್ದ ಭಾರತ: ಚಿತ್ರತಂಡ ಎಡವಿದ್ದೆಲ್ಲಿ?

ಟ್ರೋಲ್‌ಗೆ ಒಂ ರಾವುತ್ ಪ್ರತಿಕ್ರಿಯೆ

ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಓಂ ರಾವುತ್, ನನಗೆ ನಿರಾಸೆಯಾಗಿದ್ದು ನಿಜ. ಆಶ್ಚರ್ಯವೇನಿಲ್ಲ, ಯಾಕೆಂದರೆ ಈ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಬೇಕು, ದೊಡ್ಡ ಮಾಧ್ಯಮಕ್ಕಾಗಿ ನಿರ್ಮಿಸಲಾಗಿದೆ. ಇದನ್ನು ಮೊಬೈಲ್ ಫೋನ್‌ನಲ್ಲಿ ನೋಡಲು ಮಾಡಿಲ್ಲ. ನಾನು ಇದನ್ನು ಯೂಟ್ಯೂಬ್‌ಗಾಗಿ ಮಾಡಿಲ್ಲ' ಎಂದು ಹೇಳಿದರು. 

'ಆದಿಪುರುಷ್' ದೊಡ್ಡ ಪರದೆಗಾಗಿ ಮಾಡಿದ್ದು; ಟ್ರೋಲಿಗರಿಗೆ ನಿರ್ದೇಶಕ ಓಂ ರಾವುತ್ ತಿರುಗೇಟು

ಆದಿಪುರುಷ್ ಬಗ್ಗೆ

ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್ ನಟಿಸಿದ್ರೆ, ಸೀತೆಯಾಗಿ ಬಾಲಿವುಡ್ ನಟಿ ಕೃತಿ ಸನೊನ್ ಕಾಣಿಸಿಕೊಂಡಿದ್ದಾರೆ. ರಾವಣ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಹಿಂದಿ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಅಂದಹಾಗೆ ಆದಿಪುರುಷ್ ಮುಂದಿನ ವರ್ಷ ಜನವರಿ 12ರಂದು ಸಿನಿಮಾ ರಿಲೀಸ್ ಆಗಲಿದೆ.