Asianet Suvarna News Asianet Suvarna News

ಬೇರೆ ನಟಿಯರ ಸ್ತನದ ಗಾತ್ರ ದೊಡ್ಡದಿದೆ ಎಂದು ನಾನು ರಿಜೆಕ್ಟ್ ಆಗುತ್ತಿದ್ದೆ; ಬಿಟೌನ್‌ನ ಕರಾಳಮುಖ ಬಿಚ್ಚಿಟ್ಟ ನಟಿ ರಾಧಿಕಾ

ಬಾಲಿವುಡ್ ನಟಿ ರಾಧಿಕಾ ಆಪ್ಟೆ(Radhika Apte) ಸದ್ಯ ಒಟಿಟಿ (OTT)ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಒಟಿಟಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ರಾಧಿಕಾ ಅವರನ್ನು ನೆಟ್‌ಫ್ಲಿಕ್ಸ್ ಹುಡುಗಿ ಎಂದು ಕರೆಯಲಾಗುತ್ತಿದೆ ಹಾರ್ಡ್ ವರ್ಕರ್ ಆಗಿರುವ ನಟಿ ರಾಧಿಕಾ ಅಂಧಾಧುನ್ ಮತ್ತು ಲಸ್ಟ್ ಸ್ಟೋರಿ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದರೂ ಸಹ ತನ್ನ ದೇಹದ ಕಾರಣಕ್ಕೆ ಅನೇಕ ಸಿನಿಮಾಗಳಿಂದ ರಿಜೆಕ್ಟ್ ಆಗಿರುವುದಾಗಿ ಬಹಿರಂಗ ಪಡಿಸಿದ್ದಾರೆ. 

Radhika Apte reveals Dark Side Of Bollywood she got rejected from films as other actress had bigger breasts sgk
Author
Bengaluru, First Published Jun 13, 2022, 12:46 PM IST

ಬಾಲಿವುಡ್ ನಟಿ ರಾಧಿಕಾ ಆಪ್ಟೆ(Radhika Apte) ಸದ್ಯ ಒಟಿಟಿ (OTT)ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಒಟಿಟಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ರಾಧಿಕಾ ಅವರನ್ನು ನೆಟ್‌ಫ್ಲಿಕ್ಸ್ ಹುಡುಗಿ ಎಂದು ಕರೆಯಲಾಗುತ್ತಿದೆ. ಒಟಿಟಿಯ ಅನೇಕ ಪ್ರಾಜೆಕ್ಟ್‌ಗಳಲ್ಲಿ ರಾಧಿಕಾ ನಟಿಸುತ್ತಿದ್ದಾರೆ. ಹಾರ್ಡ್ ವರ್ಕರ್ ಆಗಿರುವ ನಟಿ ರಾಧಿಕಾ ಅಂಧಾಧುನ್ ಮತ್ತು ಲಸ್ಟ್ ಸ್ಟೋರಿ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದರೂ ಸಹ ತನ್ನ ದೇಹದ ಕಾರಣಕ್ಕೆ ಅನೇಕ ಸಿನಿಮಾಗಳಿಂದ ರಿಜೆಕ್ಟ್ ಆಗಿರುವುದಾಗಿ ಬಹಿರಂಗ ಪಡಿಸಿದ್ದಾರೆ. 

ನಟಿ ರಾಧಿಕಾ ನಟನೆಯ ಅನೇಕ ಸಿನಿಮಾಗಳು ವಿವಾಧಕ್ಕೆ ಗುರಿಯಾಗಿದ್ದವು. ಆದರೂ ತನ್ನ ಪಾತ್ರಗಳಿಗೆ 100 ಪರ್ಸೆಂಟ್ ಶ್ರಮ ಹಾಕಿ ಸಿನಿಮಾ ಮಾಡುತ್ತಾರೆ. ಸುದೀರ್ಘ ವೃತ್ತಿ ಜೀವನ ಹೊಂದಿರುವ ನಟಿ ರಾಧಿಕಾ ಸಿನಿಮಾರಂಗದಲ್ಲಿ 17 ವರ್ಷ ಪೂರೈಸಿದ್ದಾರೆ. ಅತ್ಯಂತ ಪ್ರತಿಭಾವಂತ ನಟಿ ರಾಧಿಕಾ ಎಂಥಹದೆ ಪಾತ್ರವಾರೂ ಲೀಲಾಜಾಲವಾಗಿ ನಟಿಸುತ್ತಾರೆ. ಆದರೂ ಇತ್ತೀಚಿಗೆ ಅನೇಕ ಸಿನಿಮಾಗಳಿಂದ ರಿಜೆಕ್ಟ್ ಆಗುತ್ತಿರುವ ಹಿಂದಿನ ಕಾರಣ ರಿವೀಲ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. 

ವೀಸಾ ಪಡೆಯೋಕೆ ಮದುವೆಯಾದ್ರು ನಟಿ ರಾಧಿಕಾ ಆಪ್ಟೆ!

ಬೇರೆ ನಟಿಯರು ದೊಡ್ಡ ಗಾತ್ರದ ಸ್ತನ ಮತ್ತು ತುಟಿ ಹೊಂದಿರುವ ಕಾರಣಕ್ಕೆ ತಾನು ಸಿನಿಮಾಗಳಿಂದ ರಿಜೆಕ್ಟ್ ಆಗುತ್ತಿದ್ದೀನಿ ಎನ್ನುವ ಶಾಕಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ರಾಧಿಕಾ ಮಿಡ್ ಡೇಗೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. 'ಇತ್ತೀಚಿಗೆ ನಾನು ಸಿನಿಮಾಗಳಿಂದ ರೆಜೆಕ್ಟ್ ಆಗುತ್ತಿದ್ದೀನಿ, ಬೇರೆ ನಟಿಯರಿಗೆ ದೊಡ್ಡ ಗಾತ್ರದ ಸ್ತನ ಮತ್ತು ತುಟಿ ಇರುವ ಕಾರಣ ನಾನು ತಿರಸ್ಕರಿಸ್ಪಟ್ಟಿದ್ದೀನಿ. ಹೆಚ್ಚು ಸೆಕ್ಸಿಯಾಗಿ ಕಾಣುವವರು ಹೆಚ್ಚು ಸೇಲ್ ಆಗತ್ತಾರೆ ಅಂತ ನನಗೆ ಒಬ್ಬರು ಹೇಳಿದರು. ಆದರೆ ಹೆಚ್ಚು ಮಹಿಳೆಯರು ಇದ್ದರೇ  ಅನೇಕ ವಿಚಾರಗಳು ಬದಲಾಗುತ್ತವೆ ಎಂದು ಹೇಳಿದ್ದಾರೆ. 

ನ್ಯೂಡ್‌ ವಿಡಿಯೋ ಲೀಕ್: ಬಾಯಿಬಿಟ್ಟ ರಾಧಿಕಾ ಆಪ್ಟೆ!

ಇನ್ನು ಫಿಲ್ಮ್ ಕಂಪಾನಿಯನ್ ಜೊತೆ ಮಾತನಾಡಿಗ ರಾಧಿಕಾ ಪ್ಲಾಸ್ಟಿಕ್ ಸರ್ಜರಿಯಿಂದ ಹೇಗೆ ಒತ್ತಡಕ್ಕೆ ಒಳಗಾಗಿದ್ದರು ಎನ್ನುವುದನ್ನ ಬಹಿರಂಗ ಪಡಿಸಿದ್ದಾರೆ. 'ಈ ಒತ್ತಡ ಮೊದಲೇ ಇತ್ತು. ವೃತ್ತಿ ಜೀವನದ ಪ್ರಾರಂಭದಲ್ಲಿ ನನ್ನ ದೇಹ ಮತ್ತು ಮುಖದ ಮೇಲೆ ಸಾಕಷ್ಟು ಕೆಲಸ ಮಾಡಲು ಹೇಳಿದರು. ನಾನು ನಡೆಸಿದ ಮೊದಲ ಸಭೆಯಲ್ಲಿ ನನ್ನ ಮೂಗಿನ ಬಗ್ಗೆ ಹೇಳಿದರು. ಎರಡನೇ ಮೀಟಿಂಗ್‌ನಲ್ಲಿ ನನ್ನ ಸ್ತನದ ಗಾತ್ರ ಹೆಚ್ಚಿಸುವಂತೆ ಹೇಳಿದರು. ನಂತರ ನನ್ನ ಕಾಲುಗಳ ಬಗ್ಗೆ ಹೇಳಿದರು. ನನ್ನ ಕೂದಲಿಗೆ ಬಣ್ಣ ಹಚ್ಚಲು ನನಗೆ 30 ವರ್ಷಗಳು ಬೇಕಾಯಿತು. ಇದರಿಂದ ನಾನು ಒತ್ತಡಕ್ಕೆ ಒಳಗಾಗಿಲ್ಲ. ಆದರೆ ನಾನು ಕೋಪಗೊಂಡಿದ್ದೇನೆ. ಇವೆಲ್ಲವೂ ನನ್ನ ದೇಹವನ್ನು ಇನ್ನಷ್ಟು ಪ್ರೀತಿಸಲು ನನಗೆ ಸಹಾಯ ಮಾಡಿತು. ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ' ಂದು ರಾಧಿಕಾ ಚಿತ್ರರಂಗದಲ್ಲಿ ನಟಿಮಣಿಯರಿಗೆ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಒತ್ತಡ ಹೇರುತ್ತಾರೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. 

ರಾಧಿಕಾ ಸದ್ಯ ಸೈಕಾಲಾಜಿಕಲ್ ಥ್ರಿಲ್ಲರ್ ಫರೆನ್ಸಿಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ೀ ಸಿನಿಮಾದಲ್ಲಿ ರಾಧಿಕಾ ಜೊತೆ ವಿಕ್ರಾಂತ್ ಮಾಸಿ  ನಟಿಸಿದ್ದಾರೆ. ಒಟಿಟಿಯಲ್ಲಿ ಹೆಚ್ಚು ಬ್ಯುಸಿಯಾಗಿರುವ ರಾಧಿಕಾ ಅನೇಕ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ.  

        

Follow Us:
Download App:
  • android
  • ios