Asianet Suvarna News Asianet Suvarna News

Radhe Shyam: ಪ್ರಭಾಸ್-ಪೂಜಾ ಹೆಗ್ಡೆ ಜೋಡಿಯ ಹೃದಯ ಸ್ಪರ್ಶಿ 'ಸೋಚ್ಲಿಯಾ' ಹಾಡು ರಿಲೀಸ್

ಟಾಲಿವುಡ್‌ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರದ 'ಸೋಚ್ಲಿಯಾ' ಎಂಬ ಹೃದಯ ಸ್ಪರ್ಶಿಸುವ ಹಾಡು ಟಿ-ಸಿರೀಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

radhe shyam Soch Liya song out starrer prabhas pooja hegde gvd
Author
Bangalore, First Published Dec 8, 2021, 9:01 PM IST

'ಪ್ಯಾನ್ ಇಂಡಿಯಾ ಸ್ಟಾರ್‌' ಪ್ರಭಾಸ್‌ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' (Radhe Shyam) ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. 'ಸೋಚ್ಲಿಯಾ' (Soch Liya) ಎಂಬ ಹೃದಯ ಸ್ಪರ್ಶಿಸುವ ಹಿಂದಿ ಸಾಂಗ್ ಟಿ-ಸಿರೀಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಮನೋಜ್ ಮುಂತಶಿರ್ (Manoj Muntashir) ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಮಿಥೂನ್ (Mithoon) ಸಂಗೀತ ಸಂಯೋಜನೆಯ ಜೊತೆಗೆ ಅರ್ಜಿತ್ ಸಿಂಗ್ (Arijit Singh) ಅವರೊಂದಿಗೆ ಹಾಡನ್ನು ಕೂಡ ಹಾಡಿದ್ದಾರೆ. 

ರೆಟ್ರೋ ಕಾಲದ ಲವ್ ಸ್ಟೋರಿಯನ್ನು ಹೊಂದಿರುವ 'ರಾಧೆ ಶ್ಯಾಮ್‌'ನ ಈ ಹಾಡಿನ ವಿಡಿಯೋ ಸಹ ಬಹಳ ಸುಂದರವಾಗಿದ್ದು, ಯೂರೋಪಿನ ಅಂದವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಣ ಮಾಡಲಾಗಿದೆ. ಇತ್ತೀಚೆಗೆ ಚಿತ್ರದ ರೊಮ್ಯಾಂಟಿಕ್ ಸಾಂಗ್ 'ಆಶಿಕಿ ಆ ಗಯಿ' (Ashiqui aa gayi) ಎಂಬ ಹಾಡು ಬಿಡುಗಡೆಯಾಗಿದ್ದು, ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಂತೂ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಿನಿಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ನಾನು ಪ್ರೀತಿಗಾಗಿ ಸಾಯುವವನಲ್ಲ, ನಾನು ಫ್ಲರ್ಟ್ ಮಾಡಲು ಬಯಸುತ್ತೇನೆ ಎಂದು ಪ್ರಭಾಸ್ ಹೇಳುವುದನ್ನು ಹಾಡಿನಲ್ಲಿ ಕೇಳಬಹುದು. 

Radhe Shyam: ಸಿನಿಪ್ರಿಯರ ಮನಗೆದ್ದ ಪ್ರಭಾಸ್-ಪೂಜಾ ಹೆಗ್ಡೆ ರೊಮ್ಯಾಂಟಿಕ್ ಸಾಂಗ್

'ರಾಧೆ ಶ್ಯಾಮ್' ಚಿತ್ರದ ಮೋಷನ್ ಪೋಸ್ಟರ್, ಟೀಸರ್‌ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಚಿತ್ರದ ಟೀಸರ್ ವಿಕ್ರಮಾದಿತ್ಯನನ್ನು ಪ್ರತಿಯೊಬ್ಬರ ಭೂತ ಮತ್ತು ಭವಿಷ್ಯವನ್ನು ತಿಳಿದಿರುವ ಕೆಲವು ವಿಲಕ್ಷಣ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿ ಎಂದು ತೋರಿಸಿದೆ. 'ನಾನು ದೇವರಲ್ಲ, ಆದರೆ ನಾನು ನಿಮ್ಮಲ್ಲಿ ಒಬ್ಬನಲ್ಲ' ಎಂದು ಪ್ರಭಾಸ್ ಟೀಸರ್‌ನಲ್ಲಿ ಹೇಳಿದ್ದಾರೆ. ರೊಮ್ಯಾಂಟಿಕ್​ ಕಥಾ ಹೊಂದಿರುವ 'ರಾಧೆ ಶ್ಯಾಮ್' ಚಿತ್ರಕ್ಕೆ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜನೆ, ಮನೋಜ್ ಪರಮಹಂಸ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ. 

'ರಾಧೆ ಶ್ಯಾಮ್' ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ (Radha Krishna Kumar) ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಪೂಜಾ ಹೆಗ್ಡೆ ಇತ್ತೀಚೆಗೆ ಚಿತ್ರದ ಡಬ್ಬಿಂಗ್‌ನ್ನು ಪೂರ್ಣಗೊಳಿಸಿದ್ದಾರೆ, ಇದರಲ್ಲಿ ಅವರು ಪ್ರೇರಣಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಟಲಿ, ಜಾರ್ಜಿಯಾ, ಫ್ರಾನ್ಸ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಪ್ರಭಾಸ್ ವಿಕ್ರಮಾದಿತ್ಯ ಎಂಬ ಹಸ್ತಸಾಮುದ್ರಿಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು 1970ರ ಯುರೋಪ್ ಹಿನ್ನಲೆಯಲ್ಲಿದೆ ಎಂದು ಹೇಳಲಾಗುತ್ತದೆ. ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರವು 2022ರ ಜನವರಿ 14ರಂದು ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ ರಿವೀಲ್

ಇನ್ನು ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಸಲಾರ್' (Salaar) ಚಿತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ.  ಶ್ರುತಿ ಹಾಸನ್ (Shruti Haasan) ಪ್ರಭಾಸ್‌ಗೆ ಜೋಡಿಯಾಗಿದ್ದು, ಜಗಪತಿ ಬಾಬು (Jagapati Babu) ಈ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಹಾಗೂ ಓಂ ರಾವುತ್ (Om Raut)​ ನಿರ್ದೇಶನದ 'ಆದಿಪುರುಷ್​' ((Adipurush) ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ರಾವಣನಾಗಿ ಬಾಲಿವುಡ್ ನಟ ಸೈಫ್​ ಅಲಿ ಖಾನ್ (Saif Ali Khan)​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ದೊಡ್ಡ ಸಂಭಾವನೆಯನ್ನು ಪಡೆದಿದ್ದು, 60 ದಿನಗಳ ಕಾಲ್​ಶೀಟ್​ ನೀಡಿದ್ದಾರೆ ಎನ್ನಲಾಗಿದೆ.
 

Follow Us:
Download App:
  • android
  • ios