ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ 'ರಾಧೆ ಶ್ಯಾಮ್' ಚಿತ್ರದ 'ಸಂಚಾರಿ' ಹಾಡಿನ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 

ಟಾಲಿವುಡ್‌ (Tollywood) ಹ್ಯಾಂಡ್ಸಮ್ ಹೀರೋ, ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ಅಭಿನಯದ ಬಹು ನಿರೀಕ್ಷಿತ 'ರಾಧೆ ಶ್ಯಾಮ್' (Radhe Shyam) ಚಿತ್ರದ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು! 'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ನಲ್ಲಿ ಪ್ರಭಾಸ್ ಪರಿಚಯದ ಟೀಸರ್‌ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಇದೀಗ ನಟ ಪ್ರಭಾಸ್ ಚಿತ್ರದ ಹಾಡಿನ ಬಿಡುಗಡೆ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ನಟ ಪ್ರಭಾಸ್ 'ಸಾಹೋ' (Saaho) ಚಿತ್ರದ ನಂತರ 'ರಾಧೆ ಶ್ಯಾಮ್' ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ 'ಸಂಚಾರಿ' (Sanchari) ಹಾಡಿನ ಬಿಡುಗಡೆ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. 'ಈ ಹಾಡಿನ ಮೂಲಕ ವಿಕ್ರಮಾದಿತ್ಯನೊಂದಿಗೆ ಬೆರಗುಗೊಳಿಸುವ ಪ್ರಯಾಣವನ್ನು ಪಡೆಯಲು ಸಿದ್ಧರಾಗಿ ಹಾಗೂ ಡಿಸೆಂಬರ್ 16 ರಂದು ಪೂರ್ಣ ಹಾಡು ನಿಮ್ಮ ಮುಂದೆ ಬರಲಿದೆ ಎಂದು ಬರೆದುಕೊಂಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗುವ ಪೋಸ್ಟರ್‌ಗಳನ್ನು ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಹಾಡಿನ ಟೀಸರ್ (Teaser) ಲಿಂಕ್‌ನ್ನು ಶೇರ್ ಮಾಡಿಕೊಂಡಿದ್ದಾರೆ.

Radhe Shyam: 'ಸೋಚ್ಲಿಯಾ' ಹಾಡಿನ ವಿಡಿಯೋ ಝಲಕ್ ಹಂಚಿಕೊಂಡ ನಟ ಪ್ರಭಾಸ್

ಟೀಸರ್‌ನಲ್ಲಿ ಪ್ರಭಾಸ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಒಂದೊಂದು ದೃಶ್ಯಗಳು ಶ್ರೀಮಂತವಾಗಿ ಮೂಡಿಬಂದಿದೆ. 'ಸಂಚಾರಿ' ಹಾಡಿನಲ್ಲಿ ಪ್ರಭಾಸ್ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ರೊಮ್ಯಾಂಟಿಕ್ ಸಾಂಗ್ 'ಆಶಿಕಿ ಆ ಗಯಿ' (Ashiqui aa gayi) ಹಾಗೂ 'ಸೋಚ್ಲಿಯಾ' (Soch Liya) ಎಂಬ ಹೃದಯ ಸ್ಪರ್ಶಿಸುವ ಹಿಂದಿ ಸಾಂಗ್ ಬಿಡುಗಡೆಯಾಗಿತ್ತು. ಮನೋಜ್ ಮುಂತಶಿರ್ (Manoj Muntashir) ಹಾಡಿಗೆ ಸಾಹಿತ್ಯ ಬರೆದಿದ್ದರು. ಮಿಥೂನ್ (Mithoon) ಸಂಗೀತ ಸಂಯೋಜನೆಯ ಜೊತೆಗೆ ಅರ್ಜಿತ್ ಸಿಂಗ್ (Arijit Singh) ಅವರೊಂದಿಗೆ ಹಾಡನ್ನು ಕೂಡ ಹಾಡಿದ್ದರು.

View post on Instagram


ರೆಟ್ರೋ ಕಾಲದ ಲವ್ ಸ್ಟೋರಿಯನ್ನು ಹೊಂದಿರುವ 'ರಾಧೆ ಶ್ಯಾಮ್‌'ನ ಈ ಹಾಡಿನ ವಿಡಿಯೋ ಸಹ ಬಹಳ ಸುಂದರವಾಗಿದ್ದು, ಯೂರೋಪಿನ ಅಂದವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಣ ಮಾಡಲಾಗಿದೆ. ಅಲ್ಲದೇ ಚಿತ್ರದ ರೊಮ್ಯಾಂಟಿಕ್ ಸಾಂಗ್ 'ಆಶಿಕಿ ಆ ಗಯಿ' ಎಂಬ ಹಾಡು ಬಿಡುಗಡೆಯಾಗಿದ್ದು, ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಂತೂ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದರು. 'ರಾಧೆ ಶ್ಯಾಮ್' ಚಿತ್ರದ ಮೋಷನ್ ಪೋಸ್ಟರ್, ಟೀಸರ್‌ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಚಿತ್ರದ ಟೀಸರ್ ವಿಕ್ರಮಾದಿತ್ಯನನ್ನು ಪ್ರತಿಯೊಬ್ಬರ ಭೂತ ಮತ್ತು ಭವಿಷ್ಯವನ್ನು ತಿಳಿದಿರುವ ಕೆಲವು ವಿಲಕ್ಷಣ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿ ಎಂದು ತೋರಿಸಿದೆ.

'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ ರಿವೀಲ್

'ರಾಧೆ ಶ್ಯಾಮ್' ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ (Radha Krishna Kumar) ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಪೂಜಾ ಹೆಗ್ಡೆ ಪ್ರೇರಣಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಟಲಿ, ಜಾರ್ಜಿಯಾ, ಫ್ರಾನ್ಸ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಪ್ರಭಾಸ್ ವಿಕ್ರಮಾದಿತ್ಯ ಎಂಬ ಹಸ್ತಸಾಮುದ್ರಿಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು 1970ರ ಯುರೋಪ್ ಹಿನ್ನಲೆಯಲ್ಲಿದೆ ಎಂದು ಹೇಳಲಾಗುತ್ತದೆ. ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರವು 2022ರ ಜನವರಿ 14ರಂದು ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

YouTube video player