ಟಾಲಿವುಡ್‌ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

'ರಾಧೆ ಶ್ಯಾಮ್' (Radhe Shyam) ಟಾಲಿವುಡ್‌ (Tollywood) ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ ಸಿನಿಮಾ. ಚಿತ್ರದ ಮೋಷನ್ ಪೋಸ್ಟರ್, ಟೀಸರ್‌ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಇತ್ತೀಚೆಗೆ ಚಿತ್ರದ ರೊಮ್ಯಾಂಟಿಕ್ ಸಾಂಗ್ 'ಆಶಿಕಿ ಆ ಗಯಿ'(Ashiqui aa gayi) ಎಂಬ ಹಾಡು ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿದೆ. ನಾನು ಪ್ರೀತಿಗಾಗಿ ಸಾಯುವವನಲ್ಲ, ನಾನು ಫ್ಲರ್ಟ್ ಮಾಡಲು ಬಯಸುತ್ತೇನೆ ಎಂದು ಪ್ರಭಾಸ್ ಹೇಳುವುದನ್ನು ಹಾಡಿನಲ್ಲಿ ಕೇಳಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಈ ಬಗ್ಗೆ ನಟ ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 'ರಾಧೆ ಶ್ಯಾಮ್' ಚಿತ್ರದ ಎರಡನೇ ಹಿಂದಿ 'ಸೋಚ್ಲಿಯಾ' (SochLiya) ಹಾಡಿನ ಒಂದು ಝಲಕ್ ಇಲ್ಲಿದೆ. ಡಿಸೆಂಬರ್ 8 ರಂದು ಪೂರ್ಣ ಹಾಡು ಬಿಡುಗಡೆಯಾಗಲಿದೆ ಎಂದು ಕ್ಯಾಪ್ಷನ್ ಬರೆದು ಸಾಂಗ್‌ನ ತುಣುಕೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹಾಡಿಗೆ ಮನೋಜ್ ಮುಂತಶಿರ್ ಅವರ ಸಾಹಿತ್ಯವಿದ್ದು, ಮಿಥೂನ್ ಸಂಗೀತ ಸಂಯೋಜನೆಯ ಜೊತೆಗೆ ಅರ್ಜಿತ್ ಸಿಂಗ್ ಅವರೊಂದಿಗೆ ಟ್ರ್ಯಾಕ್ ಅನ್ನು ಕೂಡ ಹಾಡಿದ್ದಾರೆ.

Radhe Shyam: ಸಿನಿಪ್ರಿಯರ ಮನಗೆದ್ದ ಪ್ರಭಾಸ್-ಪೂಜಾ ಹೆಗ್ಡೆ ರೊಮ್ಯಾಂಟಿಕ್ ಸಾಂಗ್

'ರಾಧೆ ಶ್ಯಾಮ್' ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಕಥೆ ಬರೆದು ಆಕ್ಷನ್ ಕಟ್, ಪೂಜಾ ಹೆಗ್ಡೆ ಇತ್ತೀಚೆಗೆ ಚಿತ್ರದ ಡಬ್ಬಿಂಗ್‌ನ್ನು ಪೂರ್ಣಗೊಳಿಸಿದ್ದಾರೆ, ಇದರಲ್ಲಿ ಅವರು ಪ್ರೇರಣಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಟಲಿ, ಜಾರ್ಜಿಯಾ, ಫ್ರಾನ್ಸ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಪ್ರಭಾಸ್ ವಿಕ್ರಮಾದಿತ್ಯ ಎಂಬ ಹಸ್ತಸಾಮುದ್ರಿಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು 1970ರ ಯುರೋಪ್ ಹಿನ್ನಲೆಯಲ್ಲಿದೆ ಎಂದು ಹೇಳಲಾಗುತ್ತದೆ. ಚಿತ್ರದ ಟೀಸರ್ ವಿಕ್ರಮಾದಿತ್ಯನನ್ನು ಪ್ರತಿಯೊಬ್ಬರ ಭೂತ ಮತ್ತು ಭವಿಷ್ಯವನ್ನು ತಿಳಿದಿರುವ ಕೆಲವು ವಿಲಕ್ಷಣ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿ ಎಂದು ತೋರಿಸಿದೆ. 'ನಾನು ದೇವರಲ್ಲ, ಆದರೆ ನಾನು ನಿಮ್ಮಲ್ಲಿ ಒಬ್ಬನಲ್ಲ' ಎಂದು ಪ್ರಭಾಸ್ ಟೀಸರ್‌ನಲ್ಲಿ ಹೇಳಿದ್ದಾರೆ.

ರೊಮ್ಯಾಂಟಿಕ್​ ಕಥಾ ಹೊಂದಿರುವ 'ರಾಧೆ ಶ್ಯಾಮ್' ಚಿತ್ರಕ್ಕೆ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜನೆ, ಮನೋಜ್ ಪರಮಹಂಸ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ. ಸಚಿನ್ ಖೇಡೇಕರ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರವು 2022ರ ಜನವರಿ 14ರಂದು ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

Love Anthem Song: 'ರಾಧೆ ಶ್ಯಾಮ್' ಚಿತ್ರದ ಹಾಡಿನ ಬಗ್ಗೆ ನಟ ಪ್ರಭಾಸ್ ಪೋಸ್ಟ್

ಇನ್ನು ಪ್ರಭಾಸ್, ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಸಲಾರ್' (Salaar) ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರುತಿ ಹಾಸನ್ (Shruti Haasan) ಪ್ರಭಾಸ್‌ಗೆ ಜೋಡಿಯಾಗಿದ್ದು, ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ವಿಲನ್‌ ಆಗಿ ಮಿಂಚುತ್ತಿರುವ ಜಗಪತಿ ಬಾಬು (Jagapati Babu) ಈ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಮತ್ತು ಚಿತ್ರದಲ್ಲಿರುವ ಸ್ಪೆಷಲ್ ಹಾಡಿಗೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ (Katrina Kaif) ಹೆಜ್ಜೆ ಹಾಕುತ್ತಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ.

View post on Instagram