Asianet Suvarna News Asianet Suvarna News

Radhe Shyam: ಪರಮಹಂಸ ಪಾತ್ರಕ್ಕೆ ಬಣ್ಣ ಹಚ್ಚಿದ ಹಿರಿಯ ನಟ ಕೃಷ್ಣಂ ರಾಜು

ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರದಲ್ಲಿ ಕೃಷ್ಣಂರಾಜು ಅವರು ಋಷಿ ಪರಮಹಂಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಚಿತ್ರತಂಡ ಅವರ ಪೋಸ್ಟರ್‌ನ್ನು ರಿಲೀಸ್ ಮಾಡಿದೆ.

radhe shyam movie krishnam raju paramahamsa poster released starrer prabhas gvd
Author
Bangalore, First Published Dec 20, 2021, 9:17 PM IST
  • Facebook
  • Twitter
  • Whatsapp

'ಪ್ಯಾನ್ ಇಂಡಿಯಾ ಸ್ಟಾರ್‌' ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' (Radhe Shyam) ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಚಿತ್ರತಂಡವು ಚಿತ್ರದ ಸಾಲು ಸಾಲು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಹುಟ್ಟುಹಾಕಿದೆ. ಈ ಮಧ್ಯೆ ಚಿತ್ರತಂಡ ಹಿರಿಯ ನಟ ಕೃಷ್ಣಂರಾಜು (Krishnam Raju) ಅವರ ಲುಕ್‌ನ್ನು ಬಿಡುಗಡೆ ಮಾಡಿದೆ. ಹೌದು! 'ರಾಧೆ ಶ್ಯಾಮ್' ಚಿತ್ರದಲ್ಲಿ ಕೃಷ್ಣಂರಾಜು ಅವರು ಋಷಿ ಪರಮಹಂಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಚಿತ್ರತಂಡ ಅವರ ಪೋಸ್ಟರ್‌ನ್ನು (Poster) ರಿಲೀಸ್ ಮಾಡಿದೆ.

ಕೃಷ್ಣಂರಾಜು ಅವರು ಪರಮಹಂಸ ಪಾತ್ರಕ್ಕಾಗಿ ಸುಮಾರು ಒಂದು ವರ್ಷ ಗಡ್ಡ ಬಿಟ್ಟಿದ್ದಾರೆ. ಕೃಷ್ಣಂರಾಜು ಕೊನೆಯದಾಗಿ 2015ರಲ್ಲಿ ತೆರೆಕಂಡ ಅನುಷ್ಕಾ ಶೆಟ್ಟಿ ಅಭಿನಯದ 'ರುದ್ರಮದೇವಿ' ಚಿತ್ರದಲ್ಲಿ ಗಣಪತಿ ಪಾತ್ರದಲ್ಲಿ  ಕಾಣಿಸಿಕೊಂಡಿದ್ದು, ಇದೀಗ ಸುಮಾರು ವರ್ಷಗಳ ಗ್ಯಾಪ್ ನಂತರ 'ರಾಧೆ ಶ್ಯಾಮ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣಂರಾಜು ಅವರ ಬಗ್ಗೆ ನಟ ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ, 'ನನ್ನ ಚಿಕ್ಕಪ್ಪ, ಲೆಜೆಂಡರಿ ರೆಬೆಲ್ ಸ್ಟಾರ್ ಡಾ.ಯು.ವಿ.ಕೃಷ್ಣಂರಾಜು ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದು ಯಾವುದೇ ಗೌರವಕ್ಕಿಂತ ಕಡಿಮೆಯಿಲ್ಲ. 'ರಾಧೆ ಶ್ಯಾಮ್' ಚಿತ್ರದಲ್ಲಿ ಪರಮಹಂಸ ಪಾತ್ರದ ಫಸ್ಟ್‌ಲುಕ್‌ ಎಂದು ಬರೆದುಕೊಂಡು ಪೋಸ್ಟರನ್ನು ಹಂಚಿಕೊಂಡಿದ್ದಾರೆ. ಕೃಷ್ಣಂ ರಾಜು ಅವರು ಈ ಹಿಂದೆ ಪ್ರಭಾಸ್ ಜೊತೆ 'ಬಿಲ್ಲಾ' ಮತ್ತು 'ರೆಬೆಲ್' ಚಿತ್ರಗಳಲ್ಲಿ ನಟಿಸಿದ್ದಾರೆ. 

Radhe Shyam: ಸಂಚಾರಿ ಹಾಡಿನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡ ವಿಕ್ರಮಾದಿತ್ಯ

ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ನಲ್ಲಿ ಪ್ರಭಾಸ್ ಪರಿಚಯದ ಟೀಸರ್‌ (Teaser) ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟೀಸರ್​, ಪೋಸ್ಟರ್​ಗಳಲ್ಲಿ ಪ್ರಭಾಸ್​ ಅವರು ಲವರ್​ ಬಾಯ್​ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾ ತುಂಬ ಡಿಫರೆಂಟ್​ ಆಗಿ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹಾಗೂ ನಟ ಪ್ರಭಾಸ್ 'ಸಾಹೋ' (Saaho) ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದು, ಈ ಎಲ್ಲ ಕಾರಣಗಳಿಂದಾಗಿ 'ರಾಧೆ ಶ್ಯಾಮ್' ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಮುಖ್ಯವಾಗಿ ಈ ಚಿತ್ರದಲ್ಲಿ ಪ್ರಭಾಸ್ ತಾಯಿಯಾಗಿ ಭಾಗ್ಯಶ್ರೀ (Bhagyashree) ನಟಿಸುತ್ತಿದ್ದಾರೆ.

radhe shyam movie krishnam raju paramahamsa poster released starrer prabhas gvd

'ರಾಧೆ ಶ್ಯಾಮ್' ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ (Radha Krishna Kumar) ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಪೂಜಾ ಹೆಗ್ಡೆ ಪ್ರೇರಣಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಟಲಿ, ಜಾರ್ಜಿಯಾ, ಫ್ರಾನ್ಸ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಪ್ರಭಾಸ್ ವಿಕ್ರಮಾದಿತ್ಯ ಎಂಬ ಹಸ್ತಸಾಮುದ್ರಿಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು 1970ರ ಯುರೋಪ್ ಹಿನ್ನಲೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. 

Radhe Shyam: ಪ್ರಭಾಸ್-ಪೂಜಾ ಹೆಗ್ಡೆ ಜೋಡಿಯ ಹೃದಯ ಸ್ಪರ್ಶಿ 'ಸೋಚ್ಲಿಯಾ' ಹಾಡು ರಿಲೀಸ್

ರೆಟ್ರೋ ಕಾಲದ ಲವ್ ಸ್ಟೋರಿಯನ್ನು ಹೊಂದಿರುವ 'ರಾಧೆ ಶ್ಯಾಮ್‌'ನ ಈ ಹಾಡಿನ ವಿಡಿಯೋ ಸಹ ಬಹಳ ಸುಂದರವಾಗಿದ್ದು, ಯೂರೋಪಿನ ಅಂದವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಣ ಮಾಡಲಾಗಿದೆ. ಅಲ್ಲದೇ ಚಿತ್ರದ ರೊಮ್ಯಾಂಟಿಕ್ ಸಾಂಗ್ 'ಆಶಿಕಿ ಆ ಗಯಿ' ಎಂಬ ಹಾಡು ಬಿಡುಗಡೆಯಾಗಿದ್ದು, ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಂತೂ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದರು. ಚಿತ್ರದ ಟೀಸರ್ ವಿಕ್ರಮಾದಿತ್ಯನನ್ನು ಪ್ರತಿಯೊಬ್ಬರ ಭೂತ ಮತ್ತು ಭವಿಷ್ಯವನ್ನು ತಿಳಿದಿರುವ ಕೆಲವು ವಿಲಕ್ಷಣ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿ ಎಂದು ತೋರಿಸಿದೆ. 'ರಾಧೆ ಶ್ಯಾಮ್‌' ಚಿತ್ರವು 2022ರ ಜನವರಿ 14ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
 

 
 
 
 
 
 
 
 
 
 
 
 
 
 
 

A post shared by Prabhas (@actorprabhas)

Follow Us:
Download App:
  • android
  • ios