ದೆಹಲಿ(ಏ.06) 3 ಇಡಿಯಟ್ಸ್ ಖ್ಯಾತಿಯ ಆರ್ ಮಾಧವನ್ ತಮ್ಮ ಮುಂದಿನ ಚಿತ್ರ ʼರಾಕೆಟರಿ: ದಿ ನಂಬಿ ಇಫೆಕ್ಟ್ ಚಿತ್ರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಆರ್ ಮಾಧವನ್ ಮೊದಲನೇ ಬಾರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದು ವಿಜ್ಞಾನಿಯೊಬ್ಬರ ಜೀವನಾಧಾರಿತ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಬಗ್ಗೆ ಆರ್ ಮಾಧವನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಜ್ಞಾನಿ ನಂಬಿ ನಾರಾಯಣ್ ಜೊತೆ ಪ್ರಧಾನಿ ಮಂತ್ರಿಯವರನ್ನು ಭೇಟಿಮಾಡಿದ ಆರ್ ಮಾಧವನ್ “ ಪ್ರಧಾನಮಂತ್ರಿಯವರ ಪ್ರತಿಕ್ರಿಯೆ ಖುಷಿ ತಂದಿದೆ. ಪ್ರಧಾನಿಯವರಿಗೆ ನಂಬೀಜಿಯವರಿಗಾದ ತೊಂದರೆಗಳ ಬಗ್ಗೆ ಕಾಳಜಿ ಇದೆʼ ಎಂದು ಹೇಳಿದ್ದಾರೆ.

ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಕೊರೋನಾ ಪಾಸಿಟಿವ್!

ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಆರ್ ಮಾಧವನ್ ಹಂಚಿಕೊಂಡಿರುವ ಚಿತ್ರದಲ್ಲಿ ಪ್ರಧಾನಿ ಮೋದಿ, ವಿಜ್ಞಾನಿ ನಂಬಿ ನಾರಾಯಣ್ ಮತ್ತು ಆರ್ ಮಾಧವನ್ ಸಾಮಾಜಿಕ ಅಂತರವನ್ನು ಕಾಪಾಡುತ್ತ ಮಾತುಕತೆಯಲ್ಲಿ ನಿರತರಾಗಿರುವುದು ಕಾಣಬಹುದು. ಈ ಬಗ್ಗೆ ಆರ್ ಮಾಧವನ್ ಟ್ವೀಟ್ ಕೂಡ ಮಾಡಿದ್ದಾರೆ.

ಆರ್ ಮಾಧವನ್ರ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ʼ ತಮ್ಮನ್ನು (ಆರ್ ಮಾಧವನ್) ಮತ್ತು ಮೇಧಾವಿ ನಂಬಿ ನಾರಾಯಣ್ರನ್ನು ಭೇಟಿ ಮಾಡಿದ್ದು ಸಂತಸವಾಗಿದೆ. ಈ ಚಿತ್ರವು ಮಹತ್ವದ ವಿಷಯವೊಂದನ್ನು ಬಿಂಬಿಸುತ್ತದೆ. ಈ ವಿಷಯದ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿಯಬೇಕಿದೆ. ನಮ್ಮ ತಂತ್ರಜ್ಞರು ಮತ್ತು ವಿಜ್ಞಾನಗಳು ದೇಶಕ್ಕಾಗಿ ಹಲವಾರು ತ್ಯಾಗಗಳನ್ನು ಮಾಡಿದ್ದಾರೆ. ಈ ತ್ಯಾಗಗಳ ನಿದರ್ಶನಗಳನ್ನು ನಾನು ಈ ಚಿತ್ರದಲ್ಲಿ ಕಂಡಿದ್ದೇನೆʼ ಎಂದು ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by R. Madhavan (@actormaddy)

ರಾಕೆಟರಿ: ದಿ ನಂಬಿ ಇಫೆಕ್ಟ್ ಚಿತ್ರದ ಟ್ರೆಲರ್ ಕೂಡ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ  5 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳು ಬಂದಿವೆ. ಚಿತ್ರದಲ್ಲಿ ಆರ್ ಮಾಧವನ್ ರ ನಟನೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ,  ಚಿತ್ರದಲ್ಲಿ ಬಾಲಿವುದ್ ಬಾದ್ಷಾ ಶಾರುಖ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು  ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಾಜಿ ವಿಜ್ಞಾನಿ ಮತ್ತು ಬಾಹ್ಯಾಕಾಶ ಇಂಜಿನಿಯರ್ ಆಗಿದ್ದ ನಂಬಿ ನಾರಾಯಣ್ರ ಜೀವನಾಧಾರಿತವಾಗಿದೆ.

ಅಮೀರ್‌ ಖಾನ್‌ ಬಳಿಕ ನಟ ಮಾಧವನ್‌ಗೂ ಕೊರೋನಾ ಸೋಂಕು

ಚಿತ್ರದಲ್ಲಿ ನಟಿಸುವುದರ ಜೊತೆಗೆ ಆರ್ ಮಾಧವನ್ ಚಿತ್ರದ ನಿರ್ದೇಶನ, ನಿರ್ಮಾಣ ಮಾಡಿದ್ದಾರಲ್ಲದೇ ಚಿತ್ರಕಥೆಯನ್ನು ಕೂಡ ಸ್ವತ: ಬರೆದಿದ್ದಾರೆ.  ಇತ್ತಿಚಿಗೆ ಆರ್ ಮಾಧವನ್ರಿಗೆ ಕೊರೊನಾ ಸೋಂಕು ದೃಡಪಟ್ಟಿತ್ತು. ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಮತ್ತು ಮಳಯಾಳಂ ಸೇರಿದಂತೆ ಆರು ಭಾಷೆಗಳಲ್ಲಿ ರಾಕೆಟರಿ: ದಿ ನಂಬಿ ಇಫೆಕ್ಟ್ ಚಿತ್ರವು ಏಕಕಾಲಕ್ಕೆ ಬಿಡುಗಡೆಯಾಗಲಿದೆ.