ಬಾಲಿವುಡ್‌ ನಟ ಅಮೀರ್‌ ಖಾನ್‌ ಬಳಿಕ ತ್ರೀ ಈಡಿಯಟ್‌ ಚಿತ್ರದ ಇನ್ನೊಬ್ಬ ನಟ ಆರ್‌. ಮಾಧವನ್‌ ಕೂಡ ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿದ್ದಾರೆ.

ಮಾಧವನ್‌ ಅವರು ಇತ್ತೀಚೆಗಷ್ಟೇ ಭೋಪಾಲ್‌ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಮ್ರಿಕಿ ಪಂಡಿತ್‌ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು.

. ಬಾಲಿವುಡ್ ನಟ ಅಮೀರ್ ಖಾನ್‌ಗೆ ಕೊರೋನಾ ಪಾಸಿಟಿವ್

ಇದರ ಬೆನ್ನಲ್ಲೇ ಮಾಧವನ್‌ ಸೋಂಕಿಗೆ ತುತ್ತಾಗಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಮಾಷೆಯ ಪೋಸ್ಟ್‌ವೊಂದನ್ನು ಹಾಕಿರುವ ಮಾಧವನ್‌, ‘ರಾಂಚೋ ಬಳಿಕ ಫರ್ಹಾನ್‌ಗೂ ವೈರಸ್‌ ಬೆನ್ನು ಬಿದ್ದಿದೆ.

ರಾಜುಗೆ ವೈರಸ್‌ ತಗುಲದಿರಲಿ ಎಂದು ಆಶಿಸುತ್ತೇನೆ. ಶೀಘ್ರದಲ್ಲೇ ಎಲ್ಲವೂ ಸರಿ ಆಗಲಿದೆ’ ಎಂದು ಹೇಳಿದ್ದಾರೆ. ಇದೀಗ ಮಾಧವನ್‌ಗೆ ಕೊರೋನಾ ಬಂದಿದ್ದು ಸೋಷಿಯಲ್ ಮೀಡಿಯಾ ತುಂಬ ತ್ರೀ ಈಡಿಯಡ್ಸ್ ಮೆಮ್ಸ್ ಹರಿದಾಡುತ್ತಿದೆ.