ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟ ಜೋರಾಗುತ್ತಿದೆ. ಆಮೀರ್ ಖಾನ್, ಸಚಿನ್ ತೆಂಡೂಲ್ಕರ್, ರಣಬೀರ್ ಕಪೂರ್ ನಂತರ ಇದೀಗ ಟು ಸ್ಟೇಟ್ಸ್ ನಟಿ ಆಲಿಯಾ ಭಟ್‌ಗೂ ಕೊರೋನಾ ಸೋಂಕು ದೃಢಪಟ್ಟಿದೆ. ಗುರುವಾರ ತಡರಾತ್ರಿ ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿರುವ ಆಲಿಯಾ 'ನನಗೆ ಕೊರೋನಾ ಸೋಂಕು ದೃಢಪಟ್ಟಿದೆ.  ಹಾಗಾಗಿ ಹೋಮ್ ಕ್ವಾರೆಂಟೈನ್ ಆಗಿದ್ದೇನೆ. ನನ್ನ ವೈದ್ಯರ ಸಲಹೆಯಂತೆ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಆಲಿಯಾ ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದರು.

ನಟ ರಣಬೀರ್ ಕಪೂರ್‌ಗೆ ಕೊರೋನಾ ಪಾಸಿಟಿವ್, ಮನೆಯಲ್ಲಿಯೇ ಕ್ವಾರಂಟೈನ್! 

ಮಾರ್ಚ್ ಆರಂಭದಲ್ಲಿ ನೀರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರಿಗೂ ಕೂಡ ಕೊರೋನಾ ಸೋಂಕು ದೃಢಪಟ್ಟು ಕೆಲವು ವಾರಗಳಲ್ಲಿಯೇ ಗುಣಮುಖರಾಗಿದ್ದರು. ಆಲಿಯಾ ಭಟ್ ಬಾಯ್‌ಫ್ರೆಂಡ್‌ ರಣಬೀರ್ ಕಪೂರ್‌ಗೂ ಕೂಡ ಕಳೆದ ತಿಂಗಳು ಕೊರೋನಾ ಸೋಂಕು ದೃಢಪಟ್ಟಿತ್ತು. ರಣಬೀರ್‌ಗೆ ಕೊರೊನಾ ದೃಢಪಟ್ಟ ನಂತರ ಆಲಿಯಾ ಕೂಡ ಐಸೋಲೆಟ್ ಆಗಿದ್ದರು. ಆದರೆ ಅವರಿಗೆ ಆಗ ಪರೀಕ್ಷಿಸಿದಾಗ ಕೊರೋನಾ ನೆಗೆಟಿವ್ ಬಂದಿತ್ತು. ಇದಾದ ನಂತರ ಮಾರ್ಚ್ 11 ರಂದು 'ನನಗೆ ಕೊರೋನಾ ಸೋಂಕು ದೃಢಪಟ್ಟಿಲ್ಲ. ನಿಮ್ಮ ಹಾರೈಕೆಯ ಮೆಸೆಜ್‌ಗಳನ್ನು ಓದಿದ್ದೇನೆ. ನನ್ನ ವೈದ್ಯರ ಸಲಹೆ ಪಡೆದು, ಈಗ ಮತ್ತೆ ಕೆಲಸಕ್ಕೆ ಹಾಜರಾಗಿದ್ದೇನೆ,” ಎಂದು ಹೇಳಿದ್ದರು. ಇದಾದ 20 ದಿನಗಳ ನಂತರ ಆಲಿಯಾ ಭಟ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಇತ್ತೀಚಿಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಮಿಲಿಂದ್, ಆರ್ ಮಾಧವನ್, ಅಮಿರ್ ಖಾನ್, ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್, ರೋಹಿತ್ ಸರಾಫ್, ಮನೋಜ್ ವಾಜಪೇಯಿ ಸೇರಿದಂತೆ ಇತರಿಗೆ ಕೊರೋನಾ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಕೂಡ ಜಾರಿ ಮಾಡಲಾಗಿದೆ.

ಅಮೀರ್‌ ಖಾನ್‌ ಬಳಿಕ ನಟ ಮಾಧವನ್‌ಗೂ ಕೊರೋನಾ ಸೋಂಕು 

ಅಯಾಣ್ ಮುಖರ್ಜಿಯವರ ಸಿನಿಮಾ 'ಬ್ರಹ್ಮಾಸ್ತ್ರ'ದಲ್ಲಿ ಆಲಿಯಾ ರಣಬೀರ್ ಕಪೂರ್ ಜೊತೆಯಾಗಿ ನಟಿಸಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಾಥೀಯಾವಾಡಿ', ಎಸ್ಎಸ್ ರಾಜಮೌಳಿಯವರ 'ಆರ್‌ಆರ್‌ಆರ್‌'(RRR) ಚಿತ್ರದಲ್ಲೂ ಆಲಿಯಾ ಕಾಣಿಸಿಕೊಳ್ಳಲ್ಲಿದ್ದಾರೆ. ಆಲಿಯಾ ಭಟ್ ಆದಷ್ಟು ಬೇಗ ಗುಣಮುಖರಾಗಿ, ಪರದೆ ಮೇಲೆ ಕಾಣಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಆಶಯ.