Asianet Suvarna News Asianet Suvarna News

ರಷ್ಯದಲ್ಲಿಯೂ ಚಿಂದಿ ಉಡಾಯಿಸಿದ 'ಪುಷ್ಪ: ದಿ ರೈಸ್' ಗಳಿಸಿದ್ದೆಷ್ಟು ಗೊತ್ತಾ?

ಭಾರತದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸಿದ ಚಿತ್ರ 'ಪುಷ್ಪ- ದಿ ರೈಸ್​' ರಷ್ಯದಲ್ಲಿಯೂ ಬಿಡುಗಡೆಯಾಗಿದ್ದು, ಅಲ್ಲಿ ಗಳಿಸಿದ್ದೆಷ್ಟು?
 

Pushpa The Rise becomes highest grossing south film in Russia
Author
First Published Jan 4, 2023, 4:28 PM IST

2021 ರ ಡಿಸೆಂಬರ್​ ತಿಂಗಳಿನಲ್ಲಿ  ತೆರೆಗೆ ಬಂದಿದ್ದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ: ದಿ ರೈಸ್' ಭಾರತದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಸುಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ: ದಿ ರೈಸ್' (Pushpa: The Rise ) ಪ್ರಸ್ತುತ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಇಲ್ಲಿಯೂ ಮುನ್ನಡೆ ಕಾಯ್ದುಕೊಂಡಿದೆ. 

ಈ ಚಲನಚಿತ್ರದ ಸಂಭಾಷಣೆಗಳು, ಹಾಡುಗಳು ಅದರಲ್ಲಿಯೂ  ಶ್ರೀವಲ್ಲಿ (Shreevalli) ಹಾಡು ಸಾಮಾಜಿಕ ಜಾಲತಾಣದಲ್ಲಿಯೂ ಚಿಂದಿ ಉಡಾಯಿಸಿದೆ. ಈ ಹಾಡಿಗೆ ರೀಲ್ಸ್​ ಮಾಡದವರೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಇದು ಸೌಂಡ್​ ಮಾಡಿದ್ದು, ಈಗಲೂ ಇದರ ಕ್ರೇಜ್​ ನಿಂತಿಲ್ಲ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಈ ಹಾಡಿಗೆ ರೀಲ್ಸ್​ ಮಾಡಲಾಗುತ್ತಿದ್ದು, ಅವು ವೈರಲ್​ (Viral) ಆಗುತ್ತಿವೆ.

Pushpa 2 ರಶ್ಮಿಕಾ ಮಂದಣ್ಣಗೆ ಗೇಟ್‌ಪಾಸ್‌ ಕೊಟ್ಟ ಅಲ್ಲು ಅರ್ಜುನ್; ಸಾಯಿ ಪಲ್ಲವಿ ಎಂಟ್ರಿ ನೆಟ್ಟಿಗರು ಖುಷ್

ಈಗ ಈ ಚಿತ್ರ ರಷ್ಯದಲ್ಲಿಯೂ ಸಕತ್​ ಸೌಂಡ್​ ಮಾಡುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ರಷ್ಯದಲ್ಲಿಯೂ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ.

'ಪುಷ್ಪ: ದಿ ರೈಸ್' ಡಿಸೆಂಬರ್ 8 ರಂದು ರಷ್ಯಾದಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೊಂಡು ತಿಂಗಳಾಗುತ್ತಾ ಬಂದರೂ ಅಲ್ಲಿ 774 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರನ್ ಆಗುತ್ತಿವೆ. ಈ ಚಲನಚಿತ್ರವು ರಷ್ಯಾದ (Russia) ಗಲ್ಲಾಪೆಟ್ಟಿಗೆಯಲ್ಲಿ 25 ದಿನಗಳಲ್ಲಿ 10 ಮಿಲಿಯನ್ ರೂಬಲ್‌ಗಳನ್ನು ಗಳಿಸಿದೆ ಎನ್ನಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ ಸುಮಾರು 13 ಕೋಟಿ ರೂಪಾಯಿಗಳನ್ನು ಇದು ಗಳಿಸಿದೆ.
 ಬಾಹುಬಲಿ-2 ಅನ್ನು ಹಿಂದಿಕ್ಕಿ ರಷ್ಯಾದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತೀಯ ಚಲನಚಿತ್ರ (Indian Film) ಎನಿಸಿಕೊಂಡಿದೆ.

'ಬೇಶರಂ ರಂಗ್'​ಗೆ ಭಾರಿ ಟ್ವಿಸ್ಟ್: ಕಳಚಿ ಹೋಗುತ್ತಾ ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ?

ಪುಷ್ಪ: ದಿ ರೈಸ್​ ಚಿತ್ರವನ್ನು  ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇದು ಆಂಧ್ರಪ್ರದೇಶ ರಾಜ್ಯದ ಶೇಷಾಚಲಂ ಬೆಟ್ಟಗಳಲ್ಲಿ ಮಾತ್ರ ಬೆಳೆಯುವ ಅಪರೂಪದ ಮರವಾದ ಕೆಂಪು ಚಂದನವನ್ನು ಕಳ್ಳಸಾಗಣೆ ಮಾಡುವ ಗ್ಯಾಂಗ್‌ ಕುರಿತು ಕಥೆಯನ್ನು ಹೊಂದಿದೆ. ಇದು ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಕೆಲಸಗಾರ ಅರ್ಜುನ್​ನ ಸುತ್ತಲೂ ಹೆಣೆದಿರುವ ಕಥೆ. ಸಿನಿಮಾದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನದ ಸ್ಮಗ್ಲರ್ (Smuggler) ಆಗಿ ಕಾಣಿಸಿಕೊಂಡಿದ್ದಾರೆ. ಎರಡನೇ ಭಾಗದಲ್ಲಿ ಅದೇ ಲುಕ್ ಅನ್ನು ಕೆಲವು ಬದಲಾವಣೆಗಳೊಂದಿಗೆ ಮುಂದುವರಿಸಲಾಗುತ್ತದೆ. 

ಈ ಚಿತ್ರ ಬಿಡುಗಡೆಯಾದ ನಂತರ, ಭಾರತದಲ್ಲಿ ಸುಮಾರು 490 ಕೋಟಿ ರೂ. ಗಳಿಕೆ ಮಾಡಿದೆ. ಈ ಚಿತ್ರಕ್ಕಾಗಿ ಅಲ್ಲು ಅರ್ಜುನ್ (Allu Arjun) 125 ಕೋಟಿ ವರೆಗೆ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
 
ಪುಷ್ಪ-1ರ  ಉತ್ಸಾಹದಲ್ಲೀಗ ಪುಷ್ಪ-2 ಕೂಡ ತೆರೆ ಮೇಲೆ ಬರಲಿದೆ. ಜನವರಿ ಮೂರನೇ ವಾರದಿಂದ ಪುಷ್ಪ 2 ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ.  ಅಲ್ಲು ಅರ್ಜುನ್ ಬ್ಯಾಂಕಾಕ್‌ನಲ್ಲಿ ಬೃಹತ್ ಸೆಟ್‌ಗಳಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.  

ಬ್ಯಾಂಕಾಕ್​ನಲ್ಲಿ ಒಂದು ತಿಂಗಳು  ಶೂಟಿಂಗ್ ನಡೆಸಲು ತಯಾರಿ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಶೇ.40ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ. ಬ್ಯಾಂಕಾಕ್ ನ ದಟ್ಟ ಅರಣ್ಯದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. 'ಪುಷ್ಪ 2' ಸಿನಿಮಾದಲ್ಲಿ ರೋಚಕ ಫೈಟಿಂಗ್ ಸೀನ್ ಕೂಡ ಇದೆ. ಸಿಂಹದ ಕಾದಾಟದ ದೃಶ್ಯವನ್ನು ಸುಕುಮಾರ್ ಒಂದು ರೇಂಜ್ ನಲ್ಲಿ ಡಿಸೈನ್ ಮಾಡಿದ್ದಾರೆ. ಈ ಒಂದು ದೃಶ್ಯದ ಚಿತ್ರೀಕರಣಕ್ಕಾಗಿ ಚಿತ್ರತಂಡ ಥಾಯ್ಲೆಂಡ್‌ಗೆ ತೆರಳಲಿದೆ ಎಂದು ಹೇಳಲಾಗುತ್ತಿದೆ. 
ಇಷ್ಟೇ ಅಲ್ಲದೇ, ಈ ಸಿನಿಮಾದ ಹಾಡುಗಳು 2022ರಲ್ಲಿ  ಅತೀ ಹೆಚ್ಚು ವೀಕ್ಷಣೆ ಕಂಡ ಹಾಡುಗಳ ಲಿಸ್ಟ್‌ನಲ್ಲಿ ಟಾಪ್ ಸ್ಥಾನ ಪಡೆದುಕೊಂಡಿವೆ. ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಶ್ರೀವಲ್ಲಿ ಹಾಡು ಯೂಟ್ಯೂಬ್​ನಲ್ಲಿ ಮೊದಲ ಸ್ಥಾನದಲ್ಲಿದೆ. ಈ ಚಿತ್ರದ  'ಶ್ರೀವಲ್ಲಿ', 'ಸಾಮಿ ಸಾಮಿ'  ಹಾಗೂ 'ಊ ಅಂಟಾವ ಮಾವ' ಹಾಡುಗಳು ಟಾಪ್ ಲಿಸ್ಟ್‌ನಲ್ಲಿ ಇವೆ. 

Follow Us:
Download App:
  • android
  • ios