Asianet Suvarna News Asianet Suvarna News

Pushpa 2 ರಶ್ಮಿಕಾ ಮಂದಣ್ಣಗೆ ಗೇಟ್‌ಪಾಸ್‌ ಕೊಟ್ಟ ಅಲ್ಲು ಅರ್ಜುನ್; ಸಾಯಿ ಪಲ್ಲವಿ ಎಂಟ್ರಿ ನೆಟ್ಟಿಗರು ಖುಷ್

ಪುಷ್ಪ 2 ಚಿತ್ರದಲ್ಲಿ ಸಾಯಿ ಪಲ್ಲವಿಗೆ ವಿಶೇಷ ಪಾತ್ರ. ಕೊನೆಗೂ ರಶ್ಮಿಕಾ ಮಂದಣ್ಣಗೆ ಕೋಕ್‌ ಕೊಟ್ಟ ಚಿತ್ರತಂಡ?

Actress Sai pallavi to act in Allu Arjun Pushpa 2 film as sister vcs
Author
First Published Dec 22, 2022, 2:45 PM IST

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಪುಷ್ಪ 1 ಸಿನಿಮಾ ವಿಶ್ವಾದ್ಯಂತ ಸೂಪರ್ ಹಿಟ್ ಆದ ಬೆನ್ನಲ್ಲೇ ಪುಷ್ಪ 2 ಸಿನಿಮಾ ಶೂಟಿಂಗ್ ಆರಂಭವಾಗಿತ್ತು. ಎರಡನೇ ಭಾಗಕ್ಕೂ ಅಲ್ಲು ಅರ್ಜುನ್ ನಾಯಕರಾಗಿ ಮಿಂಚಲಿದ್ದಾರೆ ಆದರೆ ನಾಯಕಿ ಪಾತ್ರಕ್ಕೆ ಯಾರು ಅನ್ನೋ ಗೊಂದಲ ಹೆಚ್ಚಿತ್ತು. ಚಿತ್ರತಂಡಕ್ಕಿಂತ ಹೆಚ್ಚು ಚರ್ಚೆ ಆಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಏಕೆಂದರೆ ರಶ್ಮಿಕಾ ಮಂದಣ್ಣ ವಿರುದ್ಧ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡಿದೆ. 

ಹೌದು! ಅಲ್ಲು ಅರ್ಜುನ್‌ ನಟನೆಯ ಬ್ಲಾಕ್‌ ಬಸ್ಟರ್‌ ಚಿತ್ರ ಪುಷ್ಪದ 2ನೇ ಭಾಗದಲ್ಲಿ ಪ್ರಮುಖ ಪಾತ್ರವೊಂದಕ್ಕಾಗಿ ನಟಿ ಸಾಯಿ ಪಲ್ಲವಿ ಅವರೊಂದಿಗೆ ಚಿತ್ರ ನಿರ್ಮಾಪಕರು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಪುಷ್ಪಾದಲ್ಲಿ ಶ್ರೀವಲ್ಲಿ ಪಾತ್ರ ಮಾಡಿ ಮನೆಮಾತಾದ ರಶ್ಮಿಕಾ ಮಂದಣ್ಣ ಅವರನ್ನು ಪುಷ್ಪಾ-2 ಚಿತ್ರದಿಂದ ತೆಗೆದು ಹಾಕಲಾಗುತ್ತಿದೆ ಎಂಬ ಗುಸುಗುಸು ಹರಿದಾಡುತ್ತಿದೆ. 

ಪಲ್ಲವಿ ಪಾತ್ರವೇನು?

ಸಾಯಿಪಲ್ಲವಿ ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್‌ ಸಹೋದರಿ ಪಾತ್ರ ನಿರ್ವಹಿಸಲಿದ್ದಾರೆ. ಅವರು ಚಿತ್ರದಲ್ಲಿ ಬುಡಕಟ್ಟು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಸಾಯಿಪಲ್ಲವಿ ಈ ಆಫರ್‌ ತಿರಸ್ಕರಿಸಿದರೆ ತಮಿಳು ನಟಿ ಐಶ್ವರ್ಯಾ ರಾಜೇಶ್‌ ಅವರನ್ನು ಈ ಪಾತ್ರಕ್ಕಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರದ ಬಗ್ಗೆ ಸಾಯಿ ಪಲ್ಲವಿ ಅಥವಾ ಐಶ್ವರ್ಯಾ ರಾಜೇಶ್ ರಿಯಾಕ್ಟ್‌ ಮಾಡಿಲ್ಲ. 

Actress Sai pallavi to act in Allu Arjun Pushpa 2 film as sister vcs

ಯಾಕೆ ರಶ್ಮಿಕಾ ಬೇಡ?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ತೆಲುಗು-ತಮಿಳು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಂತೆ ಬಾಲಿವುಡ್‌ ಕಡೆ ಹಾರುತ್ತಾರೆ. ಈ ನಡುವೆ ಕನ್ನಡ ಚಿತ್ರರಂಗಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಅಲ್ಲದೆ ಕನ್ನಡ ಭಾಷೆನೇ ಗೊತ್ತಿಲ್ಲ ಎನ್ನುವ ರೀತಿ ಮಾತನಾಡುತ್ತಾರೆ. ಇದರಿಂದ ಕನ್ನಡಿಗರು ಬೇಸರಗೊಂಡು ರಶ್ಮಿಕಾರನ್ನು Bycott ಮಾಡಬೇಕು ಎಂದು ಶುರು ಮಾಡಿಕೊಂಡಿದ್ದರು. 

ಯಾವ ಸಿನಿಮಾ ಮೂಲಕ ಜರ್ನಿ ಶುರು ಮಾಡಿದ್ದರೂ ಆ ನಿರ್ಮಾಣ ಸಂಸ್ಥೆ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿರುವುದು ಶೆಟ್ರು ಗ್ಯಾಂಗ್‌ಗೆ ಬೇಸರವಾಗಿದೆ. ಶೆಟ್ರು ಗ್ಯಾಂಗ್ ಮಾತ್ರವಲ್ಲ ಕನ್ನಡಿಗರಿಗೆ ಬೇಸರವಾಗಿದೆ. ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ಎಂದು ಹೆಸರಿಟ್ಟವರು ನಾವು ಆದರೆ ನಮ್ಮನ್ನು ಲೆಕ್ಕ ಮಾಡದೆ ಕೊಬ್ಬು ತೋರಿಸುತ್ತಿರುವುದು ಸರಿ ಅಲ್ಲ ಎನ್ನುತ್ತಾರೆ ಫ್ಯಾನ್ಸ್‌. ಇಷ್ಟೆ ಅಲ್ಲ ಕನ್ನಡ ಸಿನಿಮಾ ಮತ್ತೆ ಮಾಡಲ್ವಾ ಎಂದು ಪ್ರಶ್ನೆ ಮಾಡಿದ್ದಾಗ ನನಗೆ ಕನ್ನಡ ಸಿನಿಮಾ ಮಾಡಲು ಸದ್ಯಕ್ಕೆ ಸಮಯವಿಲ್ಲ ತುಂಬಾ ಬ್ಯುಸಿಯಾಗಿದ್ದೀನಿ ಎಂದಿದ್ದರು. 

Pushpa 2; ಅಲ್ಲು ಅರ್ಜುನ್ ಸಿನಿಮಾಗೆ ವಿದೇಶಿ ವಿಲನ್ ಎಂಟ್ರಿ; ನಿರೀಕ್ಷೆ ಹೆಚ್ಚಿಸಿದ ಸುಕುಮಾರ್

ಬಿ-ಟೌನ್‌ ಪಲ್ಲವಿ ಎಂಟ್ರಿ?

ಸಾಯಿ ಪಲ್ಲವಿ ಬಾಲಿವುಡ್ ಕಡೆ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ನಲ್ಲಿ ರಾಮಾಯಣದ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಎರಡು ವರ್ಷಗಳಿಂದ ಕೇಳಿ ಬರುತ್ತಿದ್ದು ಇದೀಗ ಮತ್ತೇ ಸುದ್ದಿಯಾಗುತ್ತಿದೆ. ರಾಮಾಯಣ ಮೂಲಕ ಸಾಯಿ ಪಲ್ಲವಿ ಬಾಲಿವುಡ್ ಕಡೆ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸೀತೆ ಪಾತ್ರಕ್ಕೆ ಈಗಾಗಲೇ ಅನೇಕ ಹೆಸರು ಕೇಳಿಬಂದಿದತ್ತು. ದೀಪಿಕಾ ಪಡಕೋಣೆ, ಕರೀನಾ ಕಪೂರ್ ಸೇರಿದಂತೆ ಅನೇಕ ಜನರ ಹೆಸರು ಕೇಳಿಬಂದಿತ್ತು. ಇದೀಗ ಸಾಯಿ ಪಲ್ಲವಿ ಹೆಸರು ವೈರಲ್ ಆಗಿದೆ. ಅಂದಹಾಗೆ ರಾಮಾಯಣ ಸಿನಿಮಾದಲ್ಲಿ ಹೃತಿಕ್ ರೋಷನ್ ರಾವಣನಾಗಿ ನಟಿಸಲಿದ್ದಾರೆ, ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios