Pushpa Success Party: ಪುಷ್ಪಾ ಸೆಟ್ ಬಾಯ್ಸ್‌ಗೆ ಬಂಪರ್ ಪ್ರೊಡಕ್ಷನ್, ಕ್ಯಾಮೆರಾ ಬಾಯ್ಸ್, ಸೆಟ್‌ ಬಾಯ್ಸ್‌ಗೆ ನಗದು ಘೋಷಿಸಿದ ಡೈರೆಕ್ಟರ್ ಸಕ್ಸಸ್‌ಫುಲ್ ಆಗಿ ಓಡುತ್ತಿರುವ ಸಿನಿಮಾ, ಭರ್ಜರಿ ಗಳಿಕೆ

ನಿರ್ದೇಶಕ ಸುಕುಮಾರ್ ನಿರ್ದೇಶಕನ ಪುಷ್ಪಾ(Pushpa) ಸೌತ್ ಮಾತ್ರವಲ್ಲ ನಾರ್ತ್‌ನಲ್ಲಿಯೂ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದು ಚಿತ್ರತಂಡಕ್ಕೆ ಭರ್ಜರಿ ಲಾಭ ತಂದುಕೊಟ್ಟಿದೆ. ಗಳಿಕೆ ಮಾತ್ರವಲ್ಲದೆ ಸಿನಿಮಾಗೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು ಜನರು ಥಿಯೇಟರ್‌ನತ್ತ ಬರುತ್ತಲೇ ಇದ್ದಾರೆ. ಪುಷ್ಪಾ ಸಕ್ಸಸ್ ಪಾರ್ಟಿಯೂ ಈಗಾಗಲೇ ನಡೆದಿದ್ದು ನಟ ಅಲ್ಲು ಅರ್ಜುನ್ ತಂಡಕ್ಕೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಇದೀಗ ನಿರ್ದೇಶಕ ಸುಕುಮಾರ್(Sukumar) ಅವರು ಚಿತ್ರಕ್ಕೆ ಸಂಬಂಧಿಸಿ ದುಡಿದ ಕೆಲಸಗಾರರಿಗೆ ಬಂಪರ್ ನಗದು ಎನೌನ್ಸ್ ಮಾಡಿದ್ದಾರೆ. ತೆಲುಗು ನಿರ್ದೇಶಕ ಸುಕುಮಾರ್ ಅವರು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಯಶಸ್ಸನ್ನು ಆಚರಿಸುವ ಸಮಾರಂಭದಲ್ಲಿ ಸೆಟ್ ಹುಡುಗರು, ಲೈಟ್ ಮೆನ್ ಮತ್ತು ನಿರ್ಮಾಣ ಮತ್ತು ಕಾಸ್ಟ್ಯೂಮ್, ಮೇಕಪ್ ಸಿಬ್ಬಂದಿಗೆ ಅವರ ಅಪಾರ ಶ್ರಮಕ್ಕಾಗಿ ತಲಾ ₹ 1 ಲಕ್ಷ ಘೋಷಿಸಿದ್ದಾರೆ. ನಿರ್ಮಾಪಕ ನವೀನ್ ಯೆರ್ನೇನಿ ಮಾತನಾಡಿ ಚಿತ್ರವು ಇಲ್ಲಿಯವರೆಗೆ 275 ಕೋಟಿ ಗಳಿಸಿದೆ. ಥಿಯೇಟರ್ ರನ್‌ನಲ್ಲಿ ಸುಮಾರು ₹ 325- ₹ 350 ಕೋಟಿ ಗಳಿಸುವ ನಿರೀಕ್ಷೆಯಿದೆ ಎಂದಿದ್ದಾರೆ.

ಸಮಂತಾ ನಂಬಿಕೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಅಲ್ಲು

'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಗ್ಲಾಮರಸ್ ಪಾತ್ರದಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ನಟಿಸಿದ್ದಾರೆ. ಡಾಲಿ ಧನಂಜಯ್ (Dolly Dhananjay), ಟಾಲಿವುಡ್ ವಿಲನ್ ಜಗಪತಿ ಬಾಬು (Jagapati Babu), ಪ್ರಕಾಶ್ ರಾಜ್ (Prakash Raj), ಸುನೀಲ್, ವೆನ್ನೆಲ್ಲಾ ಕಿಶೋರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಮಲಯಾಳಂ ನಟ ಫಾಹದ್ ಫಾಸಿಲ್ (Fahadh Faasil) ಮುಖ್ಯ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

"

ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಗೆಟಪ್​ ಸಂಪೂರ್ಣ ಡಿಫರೆಂಟ್​ ಆಗಿದೆ. ರಶ್ಮಿಕಾ ಕೂಡ ಹಳ್ಳಿ ಹುಡುಗಿ ರೀತಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪಾತ್ರದಿಂದ ಪಾತ್ರಕ್ಕೆ ವಿಭಿನ್ನತೆ ಕಾಯ್ದುಕೊಳ್ಳುತ್ತಿದ್ದಾರೆ. ಇಷ್ಟು ದಿನಗಳ ಕಾಲ ಸ್ಟೈಲಿಶ್ ಅವತಾರಗಳಲ್ಲಿ ಮಿಂಚಿದ್ದ ಅವರು ಈಗ ಶ್ರೀವಲ್ಲಿ ಎಂಬ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಾರೆ.

ಕರಣ್ ಜೋಹರ್ ಮೆಚ್ಚುಗೆ:

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅಲ್ಲು ಅರ್ಜುನ್ ( Allu Arjun)ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಪುಷ್ಪಾ (Pushpa)ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಕೊರೋನಾ ನಂತರದ ಸಂದರ್ಭದಲ್ಲಿ ಹಿಂದಿ (Bollywood) ಸಿನಿಮಾಗಳೇ ಉತ್ತಮವಾಗಿ ಓಡುತ್ತಿಲ್ಲ. ಆದರೆ ಈ ನಡುವೆ ತೆಲುಗು ಸಿನಿಮಾಗಳು ಸದ್ದು ಮಾಡುತ್ತಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲು ಅರ್ಜುನ್ ಪುಷ್ಪಾ ಚಿತ್ರದ ಯಶಸ್ಸನ್ನು ಕರಣ್ ಉಲ್ಲೇಖ ಮಾಡಿದರು. ಕಮರ್ಷಿಯಲ್ ಆಗಿ ತೆಲುಗು ಚಿತ್ರರಂಗ ಸಾಧನೆ ಮಾಡುತ್ತಿದೆ ಎಂದರು. ವಿಶೇಷ ಪ್ರಮೋಶನ್ ಮಾಡಲಿಲ್ಲ, ಪೋಸ್ಟರ್ ಗಳನ್ನು ಹಂಚಲಿಲ್ಲ ಆದರೂ ಪುಷ್ಪಾ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಕೊಂಡಾಡಿದರು.