Samantha Ruth Prabhu: ಸಮಂತಾ ರುಥ್ ಪ್ರಭು ಅವರ ಐಟಂ ಸಾಂಗ್ ಸಖತ್ ವೈರಲ್ ಆಗಿದೆ. ಪುಷ್ಪಾ ಸಕ್ಸಸ್ ಪಾರ್ಟಿಯಲ್ಲಿ ಅಲ್ಲು ಸಮಂತಾ ಬಗ್ಗೆ ಹೇಳಿದ್ದಿಷ್ಟು

ಪುಷ್ಪಾ ಸಿನಿಮಾ ಸಕ್ಸಸ್‌ಫುಲ್ ಆಗಿ ಓಡುತ್ತಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ಹಿಟ್ ಆಗಿದ್ದು, ಸಮಂತಾ ರುಥ್ ಪ್ರಭು(Samantha Ruth Prabhu) ಅವರ ಐಟಂ ಸಾಂಗ್ ಕೂಡಾ ವೈರಲ್ ಆಗಿದೆ. ಊ ಅಂಟಾವಾ ಮಾವಾ(Oo Antava Maava) ಹಾಡಿನ ಮೂಲಕ ಐಟಂ ಸಾಂಗ್‌ಗೂ ಸಖತ್ ಆಗಿ ಸೊಂಟ ಬಳುಕಿಸಿದ ಸಮಂತಾ ಅವರ ಪರ್ಫಾಮೆನ್ಸ್ ರಶ್ಮಿಕಾರ ಡ್ಯಾನ್ಸ್ ಪರ್ಫಾಮೆನ್ಸ್ ರಾರಾ ಸಾಮಿಯನ್ನೂ ಮೀರಿಸಿದೆ ಎಂದು ಮಾತನಾಡುತ್ತಿದ್ದಾರೆ ಸಿನಿಪ್ರಿಯರು. ಅಂತೂ ನಟಿಯಾಗಿ ಮಾತ್ರವಲ್ಲದೆ ಸಮಂತಾ ಇನ್ನು ಐಟಂ ಸಾಂಗ್‌ಗೂ ಆಫರ್ ಪಡೆಯೋದರಲ್ಲಿ ನೋ ಡೌಟ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ಪುಷ್ಪಾ ಸಿನಿಮಾದ ಸಕ್ಸಸ್ ಪಾರ್ಟಿ(Pushpa Success Party) ನಡೆದಿದ್ದು ಅಲ್ಲು ಅರ್ಜುನ್ ಕಾರ್ಯಕ್ರಮದಲ್ಲಿ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಪ್ರತಿಯೊಬ್ಬರಿಗೂ ವಿಶೇಷವಾಗಿ ಥ್ಯಾಂಕ್ಸ್ ಹೇಳುತ್ತಾ ಹೋದ ಅಲ್ಲು ಅರ್ಜುನ್(Allu Arjun) ಸಮಂತಾಗೂ ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ. ಹಾಗೆಯೇ ಸಿನಿಮಾಗೆ ಸಂಬಂಧಿಸಿ ಮಾತನಾಡುತ್ತಾ ಅಲ್ಲು ಅರ್ಜುನ್ ಭಾವುಕರಾದ ಘಟನೆಯೂ ನಡೆದಿತ್ತು. ಸಿನಿಮಾ ನೋಡಿದ ಸಿನಿಪ್ರಿಯರು ಅಲ್ಲು ಅರ್ಜುನ್ ಹೊಸ ಸ್ಟೈಲ್‌ಗೆ ಫಿದಾ ಆಗಿದ್ದು ಸಮಂತಾ ಅವರನ್ನು ಹೊಸ ಲುಕ್‌ನಲ್ಲಿ ನೋಡಿ ಥ್ರಿಲ್ ಆಗಿದ್ದಾರೆ.

ರಶ್ಮಿಕಾಳನ್ನೇ ಸೈಡ್‌ಲೈನ್ ಮಾಡಿದ ಸಮಂತಾ ಪುಷ್ಪಾ ಡ್ಯಾನ್ಸ್!

ಸಮಂತಾ ರುಥ್ ಪ್ರಭು ಬೆಳ್ಳಿ ತೆರೆಯ ಮೇಲೆ ಮ್ಯಾಜಿಕ್ ಮಾಡಿದ್ದು ಪುಷ್ಪಾದಲ್ಲಿ ಸಮಂತಾರ ಐಟಂ ಸಾಂಗ್ ಹೊಸ ರೆಕಾರ್ಡ್‌ ಮಾಡಿದೆ. ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ ಸಮಂತಾ ಅವರ ಐಟಂ ಸಾಂಗ್ ಪುಷ್ಪಾ ಸಿನಿಮಾದಲ್ಲಿ ಇಂಟ್ರೆಸ್ಟಿಂಗ್ ಪಾರ್ಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ನಟಿಯ ಈ ಸಡನ್ ಬೋಲ್ಡ್ ಅವತಾರಕ್ಕೆ ಸಿನಿಪ್ರಿಯರು ಶಾಕ್ ಆಗಿದ್ದೂ ನಿಜ. ಆದರೆ ನಂತರ ಸಮಂತಾ ತಮ್ಮ ಸಾಂಗ್‌ಗೆ ಸಿಗುವ ಪ್ರತಿಕ್ರಿಯೆ ಬಗ್ಗೆ ತಾವು ಸಂಪೂರ್ಣ ತೃಪ್ತರಾಗಿರುವುದಾಗಿ ಹೇಳಿದ್ದಾರೆ. ಇದೀಗ ನಟ ಅಲ್ಲು ಅರ್ಜುನ್ ಪುಷ್ಪಾ ಸಕ್ಸಸ್ ಪಾರ್ಟಿಯಲ್ಲಿ ಐಟಂ ಸಾಂಗ್‌ಗೆ ಸಮಂತಾ ಕೊಟ್ಟ ಬೆಂಬಲಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಐಟಂ ಸಾಂಗ್ ಶೂಟಿಂಗ್ ಸಂದರ್ಭ ನಟಿ ಕೊಟ್ಟ ಬೆಂಬಲವನ್ನು ಅಲ್ಲು ಅರ್ಜುನ್ ಹೊಗಳಿದ್ದಾರೆ.

"

ಸಾಂಗ್ ಶೂಟಿಂಗ್ ಮಾಡುವಾಗ ಸಮಂತಾಗೆ ಸಂಶಯವಿತ್ತು. ಅವರಿಗೆ ಇದು ಸರಿಯಾ ತಪ್ಪಾ ಎಂಬುದು ಕೂಡಾ ಗೊತ್ತಿರಲಿಲ್ಲ. ನಾನು ಅವರೊಂದಿಗೆ ಮಾತನಾಡಿ ಇದು ಚೆನ್ನಾಗಿ ಆಗುತ್ತೆ ಎಂದಿದ್ದೆ. ಅವರು ನನ್ನನ್ನು ಸಂಪೂರ್ಣವಾಗಿ ನಂಬಿದರು. ನಾವು ಕೇಳಿದ ಪಫಾರ್ಮೆನ್ಸ್ ಕೊಟ್ಟರು. ಅವರಿಗೆ ನನ್ನ ಧನ್ಯವಾದಗಳು. ಅವರು ನನ್ನ ಮನಸು ಗೆದ್ದರು ಎಂದಿದ್ದಾರೆ. ಅಲ್ಲು ಅರ್ಜುನ್ ಅವರು ತಮ್ಮ ಬಗ್ಗೆ ಹೇಳಿದ್ದನ್ನು ಶೇರ್ ಮಾಡಿದ ಸಮಂತಾ ನಾನು ನಿಮ್ಮನ್ನು ಯಾವಾಗಲೂ ನಂಬುತ್ತೇನೆ ಎಂದು ಬರೆದಿದ್ದಾರೆ. ಸಮಂತಾ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಒಂದು ರೀತಿಯ ಬೋಲ್ಡ್ ಹೆಜ್ಜೆಯನ್ನು ಇಟ್ಟಿದ್ದಾರೆ.

ಸಾಂಗ್ ಬಗ್ಗೆ ಮಾತನಾಡಿದ್ದ ಸಮಂತಾ

ನಟಿ ಸಮಂತಾ ರುತ್ ಪ್ರಭು ಅವರು ತಮ್ಮ 'ಊ ಅಂತಾವಾ' ಹಾಡಿನ ಸ್ಟಿಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸೆಕ್ಸಿಯಾಗಿರುವುದು ಕಠಿಣ ಕೆಲಸದ ಮುಂದಿನ ಹಂತದ ಎಂದು ನಟಿ ಬರೆದುಕೊಂಡಿದ್ದಾರೆ. ಐಟಂ ಸಾಂಗ್‌ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ 'ಪುಷ್ಪ: ದಿ ರೈಸ್' ನಿಂದ ಹಿಟ್ ಆಗಿದೆ. ಈ ಹಿಂದೆ ಪುರುಷರ ಸಂಘವು ಪುರುಷರನ್ನು ಕಾಮಪ್ರಚೋದಕ ಎಂದು ಆರೋಪಿಸಿ ಹಾಡಿನ ಮೇಲೆ ನಿಷೇಧಕ್ಕೆ ಒತ್ತಾಯಿಸಿದ್ದವು. ಆದರೆ ಎಲ್ಲ ಅಡೆತಡೆಗಳನ್ನು ಮೀರಿ ಸಾಂಗ್ ಹಿಟ್ ಆಗಿದೆ.

View post on Instagram