Yuzvendra Chahal : ಪುಷ್ಪಾ ಡೈಲಾಗ್ ಗೆ ಚಾಹಲ್ ಮಸ್ತ್ ಲಿಪ್ ಸಿಂಕ್, ಕಾಮೆಂಟ್ ಮಾಡಿದ ವಾರ್ನರ್!
ಅಲ್ಲು ಅರ್ಜುನ್ ಅವರ ಪುಷ್ಪಾ ಚಿತ್ರದ ಡೈಲಾಗ್
ಇನ್ಸ್ ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಚಾಹಲ್
ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಕಾಮೆಂಟ್
ಬೆಂಗಳೂರು (ಫೆ. 10): ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪಾ (Pushpa) ಪ್ರಸ್ತುತ ನೆಟಿಜನ್‌ಗಳ ಹಾಟ್ ಫೇವರಿಟ್‌ಗಳಲ್ಲಿ ಒಂದಾಗಿದೆ. ಶ್ರೀವಲ್ಲಿ(Srivalli) ಹುಕ್ ಸ್ಟೆಪ್ ಮಾತ್ರವಲ್ಲದೆ, ಅಲ್ಲು ಅರ್ಜುನ್ (Allu Arjun) ಅವರ "ಜುಕೇಗಾ ನಹೀ" ಡೈಲಾಗ್ ಇನ್ಸ್ ಟಾಗ್ರಾಮ್ ನಲ್ಲಿ(Instagram ) ರೀಲ್ ನಲ್ಲಿ (Reel) ಫೇವರೆಟ್ ಕಂಟೆಂಟ್ ಆಗಿದೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಕೂಡ ಅಲ್ಲು ಅರ್ಜುನ್ ಅವರ ಐಕಾನಿಕ್ ಡೈಲಾಗ್ ನ ಲಿಪ್ ಸಿಂಕ್ ರೀಲ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಡೇವಿಡ್ ವಾರ್ನರ್, ಸುರೇಶ್ ರೈನಾ, ದಿ ಗ್ರೇಟ್ ಖಲಿ ಬಳಿಕ ಟೀಮ್ ಇಂಡಿಯಾದ ಅಗ್ರ ಸ್ಪಿನ್ನರ್ ಯಜುವೇಂದ್ರ ಚಾಹಲ್ (Yuzvendra Chahal) ಅವರು ಪುಷ್ಪಾ ಚಿತ್ರದ ಅಲ್ಲು ಅರ್ಜುನ್ ಅವರ ಜುಕೇಗಾ ನಹೀ ಡೈಲಾಗ್ ನ ಕ್ಲಿಪ್ ಹಂಚಿಕೊಂಡಿದ್ದಾರೆ.
ಚಾಹಲ್ ಅವರು ಈ ವಿಡಿಯೋವನ್ನು ಇನ್ಸ್ ಟಾಗ್ರಾಮ್ ನ ರೀಲ್ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಕ್ಲಿಪ್ ನಲ್ಲಿ ಅವರು ಅಲ್ಲು ಅರ್ಜುನ್ ಅವರ "ಜುಕೇಗಾ ನಹಿ" ಡೈಲಾಗ್ ಗೆ ಅದ್ಭುತವಾಗಿ ಲಿಪ್ ಸಿಂಕ್ ಮಾಡಿದ್ದಾರೆ. ವಿಡಿಯೋದ ಕೊನೆಯಲ್ಲಿ ಅಲ್ಲು ಅರ್ಜುನ್ ಅವರ ರೀತಿಯಲ್ಲಿಯೇ ನಟಿಸಿ ಕೊನೆ ಮಾಡಿದ್ದಾರೆ.
ಚಾಹಲ್ ಅವರ ನಟನೆ ಸಂಪೂರ್ಣವಾಗಿ ಫುಲ್ ಮಾರ್ಕ್ಸ್ ಕೊಡೋ ಹಾಗಿದೆ.
Ind vs WI: ಪ್ರಸಿದ್ಧ ಕೃಷ್ಣ ಸೂಪರ್ ಬೌಲಿಂಗ್, ಟೀಂ ಇಂಡಿಯಾಗೆ ಸರಣಿ ಗೆಲುವು!
ವೀಡಿಯೊ 293k ಲೈಕ್‌ಗಳನ್ನು ಮತ್ತು ದೊಡ್ಡ ಮಟ್ಟದ ಪ್ರತಿಕ್ರಿಯೆಗಳನ್ನು ಗಳಿಸಿದೆ. ಅನೇಕರು ವೀಡಿಯೊಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಚಾಹಲ್ ಅವರನ್ನು ಕಾಲೆಳೆಯುವ ಕಾಮೆಂಟ್ ಕೂಡ ಮಾಡಿದ್ದಾರೆ. ಜುಕೇಗಾ ನಹಿ ಎಂದರೆ ತಲ್ಲೆ ತಗ್ಗಿಸೋದಿಲ್ಲ ಅಂತಾ ಅರ್ಥ. ಇದಕ್ಕೆ ಪ್ರತಿಯಾಗಿ ಕೆಲವರು, "ಹಾಗಿದ್ರೆ ಚೆಂಡನ್ನು ಯಾರು ಎತ್ತಿಕೊಡ್ತಾರೆ" ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಹ್ಯಾಂಡಲ್ ಹಿಡಿಯದೇ ಸೈಕಲ್‌ನಲ್ಲಿ ನಿಂತುಕೊಂಡು ರಸ್ತೆ ಮಧ್ಯೆ ಸಾಹಸ... ವಿಡಿಯೋ ವೈರಲ್
ಈ ಹಿಂದೆ ಚಾಲೆಂಜ್‌ನಲ್ಲಿ ಭಾಗವಹಿಸಿದ್ದ ಡೇವಿಡ್ ವಾರ್ನರ್ ಕೂಡ ವಿಡಿಯೋ ಕುರಿತು ಕಾಮೆಂಟ್ ಮಾಡಿದ್ದಾರೆ. ಯಜುವೇಂದ್ರ ಚಾಹಲ್ ಇನ್ಸ್ ಟಾಗ್ರಾಮ್ ನಲ್ಲಿ ತಮ್ಮ ಪತ್ನಿ ಧನಶ್ರಿ ಜತೆಗೂಡಿಯೂ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದಾರೆ. ಧನಶ್ರೀ ಇನ್ಸ್ ಟಾಗ್ರಾಮ್ ನಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್ ಗಳನ್ನು ಕೂಡ ಹೊಂದಿದ್ದಾರೆ.
ಚಾಹಲ್ ಅವರ ಈ ವೀಡಿಯೊದ ಬಗ್ಗೆ ನಿಮ್ಮ ಅಭಿಪ್ರಾಯವೇನು?