ಅರೆರೆ, ಸೈಫ್‌ ಮಗನ ಜೊತೆಗೆ ಯಾಕಿದ್ದಾಳೆ ಈ ಕಿಸ್ಸಿಕ್ ಬ್ಯೂಟಿ! ಶ್ರೀಲೀಲಾ ಸೀಕ್ರೆಟ್‌ ರಿವೀಲ್‌

ಮೊನ್ನೆ ತಾನೆ ಪುಷ್ಪ 2 ಸಿನಿಮಾದಲ್ಲಿ ಕಿಸ್ಸಿಕ್‌ ಐಟಂ ಸಾಂಗ್‌ ಮೂಲಕ ಪಡ್ಡೆಗಳ ಎದೆ ಬಡಿತ ಹೆಚ್ಚಿಸಿದ್ದ ಬ್ಯೂಟಿ ಇದೀಗ ಸೈಫ್ ಆಲಿ ಖಾನ್‌ ಮಗನ ಜೊತೆ ಕಾಣಿಸಿಕೊಂಡಿದ್ದಾರೆ. ಏನ್ ನಡೀತಿದೆ ಇಲ್ಲಿ? 

Pushpa 2 actress Sreeleela appeared with Saif Ali Khan Son bni

ಈ ಶ್ರೀಲೀಲಾ ಎಂಬ ಬ್ಯೂಟಿಯ ಕಥೆಯೇ ಇಂಟರೆಸ್ಟಿಂಗ್‌. ಇವಳು ಅಪ್ಪಟ ಕನ್ನಡದ ಹುಡುಗಿ. ಈಗಾಗಲೇ ಕನ್ನಡ ನಾಡಿನ ಹುಡುಗಿಯರು ದೇಶಾದ್ಯಂತ ನಟನೆಯ ಮೂಲಕ ಗಮನಸೆಳೆದಿದ್ದಾರೆ. ದೀಪಿಕಾ ಪಡುಕೋಣೆ ಅವರಲ್ಲಿ ಪ್ರಮುಖರು. ಮೂಲತಃ ಉಡುಪಿ ಜಿಲ್ಲೆಯ ಪಡುಕೋಣೆಯ ಈ ಬ್ಯೂಟಿ ತನ್ನ ಊರಿನ ಹೆಸರನ್ನು ಇವತ್ತಿಗೂ ಉಳಿಸಿಕೊಂಡಿರೋದು ವಿಶೇಷ. ಆದರೆ ನಾಲಗೆ ಸರಿ ಓಡದ ಬಾಲಿವುಡ್‌ನ ಮಂದಿ ಅದನ್ನು ಪುಡುಕೋನ್ ಅಂತ ಮಾಡಿ ಚಂದ ಕೆಡಿಸಿಹಾಕಿದ್ದಾರೆ. ಇರಲಿ, ರಶ್ಮಿಕಾ ಮಂದಣ್ಣ ಎಂಬ ಕೊಡಗಿನ ಕುವರಿಯೂ ಆಮೇಲೆ ಭಾರೀ ಡಿಮ್ಯಾಂಡಿನ ಹೀರೋಯಿನ್‌ ಆಗಿಬಿಟ್ಟರು. ಈಕೆಗೆ ಕನ್ನಡ ಅಂದರೆ ಕೊಂಚ ಅಲರ್ಜಿ ಇದ್ದಂತಿದೆ. ಆ ಕಾರಣಕ್ಕೆ ಈಕೆ ಆಗಾಗ ಟ್ರೋಲಿಗರ ಬಾಯಿಗೆ ಆಹಾರ ಆಗೋದೂ ಇದೆ. ಲೇಟೆಸ್ಟಾಗಿ ಸೌತ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ದಾಟಿಕೊಳ್ತಿರೋ ಗುಂಟೂರು ಖಾರಂ ಹುಡುಗಿ ನಮ್ಮ ಶ್ರೀಲೀಲಾ. ಎಲ್ಲೇ ಯಾರೇ ಕೇಳಲಿ, 'ನಾನು ಕನ್ನಡಿಗಳು, ಕನ್ನಡ ನಂಗೆ ಬರುತ್ತೆ. ಕನ್ನಡ ಮಾತಾಡೋದು ನಂಗಿಷ್ಟ' ಅನ್ನೋ ಈ ಹುಡುಗಿ ಸದ್ಯ ಕನ್ನಡಿಗರ ಮೆಚ್ಚುಗೆಗೆ ಪಾತ್ರ ಆಗಿದ್ದಾಳೆ.

ಈಗ ಹೇಳಲಿಕ್ಕೆ ಹೊರಟಿರೋದು ಈ ಹುಡುಗಿಯದೇ ಕಥೆ. ಮೊನ್ನೆ ಮೊನ್ನೆ 'ಪುಷ್ಪಾ 2' ಸಿನಿಮಾದಲ್ಲಿ 'ಕಿಸಿಕ್‌' ಅಂತ ಮಾದಕ ಸ್ಟೆಪ್ಸ್‌ ಹಾಕೋವರೆಗೂ ಈಕೆಯನ್ನು ಐರನ್‌ ಲೆಗ್‌ ಅಂತ ಕೆಲವರು ಟೀಕಿಸಿದ್ದು ಇದ್ದು. ಇದಕ್ಕೆ ಕಾರಣ ಈಕೆ ಕಾಲಿಟ್ಟ ಒಂದೊಂದು ತೆಲುಗು ಸಿನಿಮಾವೂ ಕಾಂಪಿಟೀಶನ್‌ಗೆ ಬಿದ್ದಂತೆ ಸೂಪರ್‌ ಫ್ಲಾಪ್‌ ಆಗ್ತಾ ಬಂದಿದ್ದು. ಆದರೆ ಪುಷ್ಪಾ ೨ನಲ್ಲಿ ಎದ್ನೋ ಬಿದ್ನೋ ಅಂತ ಸ್ಟೆಪ್‌ ಹಾಕಿದ್ದು ಈಕೆಯನ್ನು ಮೇಲಕ್ಕೆತ್ತಿದೆ. ಆ ಹಾಡಿಂದ ಫೀನಿಕ್ಸ್‌ನಂತೆ ಮತ್ತೆ ಎದ್ದ ಈ ಬಳುಕುವ ಬಳ್ಳಿ ಸಾಲು ಸಾಲು ಸಿನಿಮಾಗಳಿಗೆ ಕಮಿಟ್ ಆಗಿದ್ದಾಳೆ. ಇಷ್ಟೇ ಆಗಿದ್ರೆ ಪರ್ವಾಗಿರ್ತಿರಲಿಲ್ಲ. ಹೋಗಿ ಹೋಗಿ ನೇರ ಪಟೌಡಿ ಖಾನ್‌ದಾನ್‌ಗೆ ಕಾಲಿಡಬೇಕಾ? ಪಟೌಡಿ ಸಾಮ್ರಾಜ್ಯದ ಅನಭಿಷಿಕ್ತ ದೊರೆ ಖ್ಯಾತ ಬಾಲಿವುಡ್ ಆಕ್ಟರ್‌ ಸೈಫ್‌ ಆಲಿಖಾನ್‌ ಮಗನ ಜೊತೆಗೆ ಈ ಕಿಸ್‌ ಬ್ಯೂಟಿಗೇನು ಕೆಲಸ ಅಂತ ಅನೇಕ ಮಂದಿ ಗುಸು ಗುಸು ಮಾತಾಡ್ತಿದ್ದಾರೆ. 

ಹೀನಾಯವಾಗಿ ಸೋತರೂ ಆಸ್ಕರ್‌ಗೆ ಸೂರ್ಯ ಕಂಗುವಾ ಸಿನಿಮಾ ಸೆಲೆಕ್ಟ್!

ಆದರೆ ಶ್ರೀಲೀಲಾ ಎಷ್ಟಾದ್ರೂ ಸ್ಟ್ರಿಕ್ಟ್‌ ಡಾಕ್ಟರ್‌ ಮಗಳು. ಸಿನಿಮಾ ಫೀಲ್ಡ್‌ನಲ್ಲಿ ಸಾಕಷ್ಟು ಎತ್ತರಕ್ಕೆ ಏರಬೇಕಾದ ಹುಡುಗಿ. ಆಕೆ ಇಷ್ಟು ಬೇಗ ಕಮಿಟ್‌ ಆಗೋದು ಡೌಟ್‌ ಅಂತಿದ್ದಾರೆ ಬಹಳ ಜನ. ಮತ್ತೆ ನೋಡಿದ್ರೆ ಕಥೆನೇ ಚೇಂಜ್‌ ಇದೆ. ಈ ಕಿಸ್ಸಿಕ್‌ ಬ್ಯೂಟಿಯ ಬಾಲಿವುಡ್‌ ಎಂಟ್ರಿಗೆ ಮುಹೂರ್ತ ಫಿಕ್ಸ್‌ ಆದಂತಿದೆ. ‘ಸ್ತ್ರೀ 2’ ನಂಥಾ ಸೂಪರ್‌ ಹಿಟ್‌ ಸಿನಿಮಾ ನಿರ್ಮಿಸಿದ್ದ ಮಾಡೋಕ್ ಫಿಲ್ಮ್ಸ್ ಆಫೀಸ್‌ಗೆ ಶ್ರೀಲೀಲಾ ಭೇಟಿ ನೀಡಿದ್ದಾರೆ. ಈ ವೇಳೆ, ಇಬ್ರಾಹಿಂ ಜೊತೆ ಆಗಿದ್ದಾರೆ. ಆಗ ಶ್ರೀಲೀಲಾ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದರಲ್ಲಿ ಈಕೆ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸೇಫ್‌ ಮಗನ ಜೊತೆಗೆ ಸ್ಕ್ರೀನ್‌ನಲ್ಲಿ ಸ್ಟೆಪ್ಸ್‌ ಹಾಕೋದೂ ಬಹುತೇಕ ಫಿಕ್ಸ್‌ ಆಗಿದೆ. ಸದ್ಯ ಶ್ರೀಲೀಲಾ ಲಿಸ್ಟ್‌ನಲ್ಲಿ 5ಕ್ಕೂ ಹೆಚ್ಚು ಸಿನಿಮಾಗಳಿವೆ. ನಿತಿನ್ ಜೊತೆಗಿನ ‘ರಾಬಿನ್‌ಹುಡ್’ ಚಿತ್ರ, ಪವನ್ ಕಲ್ಯಾಣ್ ಜೊತೆ ಉಸ್ತಾದ್ ಭಗತ್ ಸಿಂಗ್, ಧಮಾಕ ಬಳಿಕ ರವಿತೇಜ ಜೊತೆ 2ನೇ ಬಾರಿ ಹೊಸ ಚಿತ್ರಕ್ಕೆ ನಟಿ ಓಕೆ ಎಂದಿದ್ದಾರೆ. ‘ಮಾಸ್ ಜಾತ್ರ’ ಎಂದು ಟೈಟಲ್ ಇಡಲಾಗಿದೆ.

ಅಶ್ಲೀಲ ಚಿತ್ರದ ಶೂಟಿಂಗ್ ವೇಳೆ ನಟಿ ಸಾವು, ಸತ್ತು ಎರಡು ತಿಂಗಳಾದ್ರೂ ಮೆಸ್ಸೇಜ್ ಬರ್ತಾನೆ ಇತ್ತು!
 

ಶಿವಕಾರ್ತಿಕೇಯನ್ ನಟನೆಯ 25ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಮೂಲಕ ತಮಿಳಿಗೆ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸುಧಾ ಕೊಂಗರ ನಿರ್ದೇಶನ ಮಾಡುತ್ತಿದ್ದಾರೆ. ಇದರೊಂದಿಗೆ ಜನಾರ್ಧನ್ ರೆಡ್ಡಿ ಪುತ್ರನ ಜೊತೆ ಕನ್ನಡದ ಸಿನಿಮಾ ಮಾಡುತ್ತಿದ್ದಾರೆ. ಸೋ ಕಿಸಿಕ್‌ ಹುಡುಗಿಯ ಬಾಲಿವುಡ್‌ ಎಂಟ್ರಿಯಿಂದ ಈಕೆ ದೆಸೆ ತಿರುಗೋ ಎಲ್ಲ ಚಾನ್ಸ್‌ ಇದೆ.
 

Latest Videos
Follow Us:
Download App:
  • android
  • ios