ಹೀನಾಯವಾಗಿ ಸೋತರೂ ಆಸ್ಕರ್‌ಗೆ ಸೂರ್ಯ ಕಂಗುವಾ ಸಿನಿಮಾ ಸೆಲೆಕ್ಟ್!
ಶಿರುತೈ ಶಿವ ನಿರ್ದೇಶನದ, ಸೂರ್ಯ ನಟಿಸಿರುವ 'ಕಂಗುವಾ' ಸಿನಿಮಾ ಆಸ್ಕರ್ ರೇಸ್‌ಗೆ ಎಂಟ್ರಿ ಕೊಟ್ಟಿದೆ. ಈ ಸುದ್ದಿ ಫ್ಯಾನ್ಸ್‌ಗೆ ಸಖತ್ ಖುಷಿ ಕೊಟ್ಟಿದೆ.
ಶಿರುತೈ ಶಿವ ನಿರ್ದೇಶನದಲ್ಲಿ ಸೂರ್ಯ ನಟಿಸಿರುವ 'ಕಂಗುವಾ' ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ಸೂರ್ಯಗೆ ಜೋಡಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಕರುಣಾಸ್, ನಟ್ಟಿ ನಟರಾಜ್, ಯೋಗಿಬಾಬು, ಬಾಬಿ ಡಿಯೋಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಛಾಯಾಗ್ರಹಣ ವೆಟ್ರಿ. ಸಂಗೀತ ದೇವಿ ಶ್ರೀ ಪ್ರಸಾದ್ ಅವರದ್ದು. ಸ್ಟುಡಿಯೋ ಗ್ರೀನ್ ಙ್ಞಾನವೇಲ್ ರಾಜಾ ಸುಮಾರು 350 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಿಸಿದ್ದಾರೆ.
ಕಂಗುವಾ
2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ 'ಕಂಗುವಾ' ಕೂಡ ಒಂದು. ಚಿತ್ರ ಆರಂಭದಲ್ಲಿ ಅಕ್ಟೋಬರ್ 10 ರಂದು ಆಯುಧ ಪೂಜೆಗೆ ಬಿಡುಗಡೆಯಾಗಬೇಕಿತ್ತು. ಆದರೆ ರಜನಿಕಾಂತ್ ಅವರ 'ಜೈಲರ್' ಚಿತ್ರ ಬಿಡುಗಡೆಯಾಗಿದ್ದರಿಂದ 'ಕಂಗುವಾ' ಬಿಡುಗಡೆ ದಿನಾಂಕ ಮುಂದೂಡಲಾಯಿತು. ನಂತರ ನವೆಂಬರ್ 14 ರಂದು ವಿಶ್ವಾದ್ಯಂತ ಸುಮಾರು 10 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಅತಿ ನಿರೀಕ್ಷೆಯಿಂದ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರಿಗೆ ಕಿವಿ ನೋವು ಕೊಟ್ಟು ಕಳಿಸಿದ ಚಿತ್ರ 'ಕಂಗುವಾ'. ಚಿತ್ರದಲ್ಲಿ ಹೆಚ್ಚು ಸೌಂಡ್ ಇತ್ತು, ಕಥೆ ಸರಿಯಿಲ್ಲದ ಕಾರಣ ಚಿತ್ರ ಸೋತಿತು. ಮೊದಲ ದಿನವೇ ಚಿತ್ರದ ರಿಸಲ್ಟ್ ಗೊತ್ತಾದ್ದರಿಂದ ಚಿತ್ರದ ಕಲೆಕ್ಷನ್ ಕೂಡ ಕಡಿಮೆಯಾಯಿತು. ಮೀಮ್ ಕ್ರಿಯೇಟರ್ಸ್ ಚಿತ್ರವನ್ನು ಟ್ರೋಲ್ ಮಾಡಿದರು. ಬಿಡುಗಡೆಗೂ ಮುನ್ನ ಚಿತ್ರತಂಡ 'ಬಾಹುಬಲಿ' ರೇಂಜ್‌ಗೆ ಚಿತ್ರವನ್ನು ಹೈಪ್ ಮಾಡಿದ್ದೇ ಟ್ರೋಲ್‌ಗೆ ಕಾರಣವಾಯಿತು.
ಒಂದೇ ವಾರದಲ್ಲಿ ಥಿಯೇಟರ್‌ನಿಂದ ಹೊರಬಿದ್ದ 'ಕಂಗುವಾ' 100 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ ಎನ್ನಲಾಗಿದೆ. ಚಿತ್ರದ ಸೋಲಿನಿಂದ ಬೇಸರಗೊಂಡಿದ್ದ ಸೂರ್ಯಗೆ ಈಗ ಖುಷಿಯ ಸುದ್ದಿ ಸಿಕ್ಕಿದೆ. 'ಕಂಗುವಾ' ಈಗ ಆಸ್ಕರ್ ರೇಸ್‌ನಲ್ಲಿದೆ. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ವಿಶ್ವಾದ್ಯಂತ 323 ಚಿತ್ರಗಳು ಸ್ಪರ್ಧಿಸುತ್ತಿವೆ. ಅದರಲ್ಲಿ 'ಕಂಗುವಾ' ಕೂಡ ಒಂದು. ಈ ಸುದ್ದಿಯನ್ನು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.