ವಂಚನೆ ಪ್ರಕರಣದಲ್ಲಿ ನಿರ್ಮಾಪಕ ರವೀಂದರ್​ ಜೈಲುಪಾಲಾಗಿದ್ದರೆ ಅವರ ಪತ್ನಿ ನಟಿ ಮಹಾಲಕ್ಷ್ಮಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ನೆಟ್ಟಿಗರು ಸಾಂತ್ವನ ಹೇಳುತ್ತಿದ್ದಾರೆ.  

 ಅತಿ ಹೆಚ್ಚು ಟ್ರೋಲ್​ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi) ಮೊನ್ನೆಯಷ್ಟೇ ತಮ್ಮ ಪ್ರಥಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಮೊದಲ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಇರುವಾಗಲೇ ಈ ಜೋಡಿಗೆ ಶಾಕಿಂಗ್​ ಎದುರಾಗಿತ್ತು. ನಿರ್ಮಾಪಕ ರವೀಂದರ್​ ಚಂದ್ರಶೇಖರನ್ ಅವರನ್ನು ಇದಾಗಲೇ ಪೊಲೀಸರು ಅರೆಸ್ಟ್​ ಮಾಡಿದ್ದು ಅವರು ಬಂಧನದಲ್ಲಿದ್ದಾರೆ. ಇವರ​ ವಿರುದ್ಧ ವಂಚನೆ ಆರೋಪ ದಾಖಲಾಗಿದೆ. ರವೀಂದರ್ ಚಂದ್ರಶೇಖರ್ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. 15.83 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರವೀಂದರ್ ಚಂದ್ರಶೇಖರ್ ಪೊಲೀಸ್ ಅವರನ್ನು ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

 ಇವರ ಮೇಲೆ ಕೇಸ್​ ಹಾಕಿರುವವರು ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬ ಉದ್ಯಮಿ. ರವೀಂದರ್​ ಚಂದ್ರಶೇಖರ್ ತಮಗೆ ವಂಚನೆ ಮಾಡಿದ್ದಾರೆಂದು ಅವರು ದೂರು ದಾಖಲಿಸಿದ್ದಾರೆ. ರವೀಂದ್ರರ್​ ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಕಾಪಾರನ್ನು ಪ್ರೇರೇಪಿಸಿದ್ದರು. ಈ ಸಂಬಂಧ ಸೆಪ್ಟೆಂಬರ್ 2020ಯಲ್ಲಿ ಸುಮಾರು 15.38 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಹಣ ಪಡೆದ ಬಳಿಕ ಯೋಜನೆಯನ್ನು ಆರಂಭಿಸಿಲ್ಲ ಹಾಗೂ ಹಣವನ್ನೂ ಹಿಂತಿರುಗಿಸಿಲ್ಲ ಎಂದು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ. 

ಶಾರುಖ್​ ಖಾನ್​ರನ್ನು ಅತ್ತ-ಇತ್ತ ತಳ್ಳಿ ತಬ್ಬಿಕೊಂಡು ಕಿಸ್​ ಕೊಟ್ಟ​ ಮಹಿಳೆಯರು! ಥೂ ಅಂತಿದ್ದಾರೆ ಫ್ಯಾನ್ಸ್​

ಪತಿ ಜೈಲಿನಲ್ಲಿ ಇರುವಾಗಲೇ ಮಹಾಲಕ್ಷ್ಮಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಹಳದಿ ಬಣ್ಣದ ಸೀರೆ ಧರಿಸಿ, ಹಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಸಮಯ ಕೂಡ ಕಳೆದು ಹೋಗಲಿದೆ ಎಂದು ಬರೆದುಕೊಂಡಿದ್ದಾರೆ. ಕುತೂಹಲದ ವಿಷಯವೆಂದರೆ, ಈ ಬಾರಿ ಮಹಾಲಕ್ಷ್ಮಿಅವರಿಗೆ ಸಾಂತ್ವನದ ಸುರಿಮಳೆಯಾಗುತ್ತಿದೆ. ಇದು ಅಚ್ಚರಿಯ ವಿಷಯ. ಏಕೆಂದರೆ, ಕಳೆದ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಇವರ ಮದುವೆ ವಿಚಾರಕ್ಕೆ ಬಹಳಷ್ಟು ಟ್ರೋಲ್​ ಆಗುತ್ತಲೇ ಇದ್ದಾರೆ. ಎಲ್ಲಿ ನೋಡಿದರೂ ಇವರದ್ದೇ ವಿಷಯ.

ಈ ಜೋಡಿ ಏನೇ ಮಾಡಲಿ ಅದರ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ. ಇದಕ್ಕೆ ಕಾರಣ ಈ ಜೋಡಿಯ ಲುಕ್​. ಅತ್ಯಂತ ಸುಂದರಿಯಾಗಿರುವ ಮಹಾಲಕ್ಷ್ಮಿ ಅವರು, ತೀರಾ ದಪ್ಪ ಇರುವ ರವೀಂದರ್​ ಜೊತೆ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಬಾಹ್ಯ ರೂಪ ನೋಡಿ ಟ್ರೋಲ್​ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ, ಹುಡುಗಿಯರು ಈಕೆ ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ. ರವೀಂದರ್​​ ಅವರ ಆಸ್ತಿ ನೋಡಿ ಮದುವೆಯಾಗಿದ್ದಾರೆ, ಈ ಜೋಡಿ ಒಟ್ಟಾಗಿ ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು. ಆದರೆ ಈಗ ಎಲ್ಲವೂ ಸರಿಯಾಗುತ್ತದೆ ಮೇಡಂ, ಧೈರ್ಯದಿಂದ ಇರಿ ಎಂದು ಹಲವರು ಕಮೆಂಟ್​ ಮಾಡಿದ್ದರೆ, ನೀವು ಯಾವತ್ತಿನಂತೆಯೇ ಈಗಲೂ ಮುದ್ದಾಗಿ ಕಾಣಿಸುತ್ತೀರಿ ಎಂದು ಹಲವರು ಹೇಳಿದ್ದಾರೆ. 

ಅರೆರೆ ಆಲಿಯಾ ತುಟಿಗೆ ಇದೇನಾಗೋಯ್ತು? ಬರ್ತ್​ಡೇ ಪಾರ್ಟಿಯಲ್ಲಿ ಗುಸುಗುಸು ಪಿಸುಪಿಸು

View post on Instagram