ಅರೆರೆ ಆಲಿಯಾ ತುಟಿಗೆ ಇದೇನಾಗೋಯ್ತು? ಬರ್ತ್ಡೇ ಪಾರ್ಟಿಯಲ್ಲಿ ಗುಸುಗುಸು ಪಿಸುಪಿಸು
ನಟಿ ಆಕಾಂಷಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಲಿಯಾ ಭಟ್ ಅವರ ತುಟಿಯ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. 'ಆಪರೇಷನ್ ಲಿಪ್' ಎನ್ನುತ್ತಿದ್ದಾರೆ ಫ್ಯಾನ್ಸ್!
ಇತ್ತೀಚೆಗೆ ನಟಿ ಆಕಾಂಷಾ ರಂಜನ್ ಕಪೂರ್ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು, ಈ ಸಮಯದಲ್ಲಿ ಇವರ ಹಲವಾರು ಸ್ನೇಹಿತೆಯರು ಪಾಲ್ಗೊಂಡಿದ್ದರು. ಅದರಂತೆ ನಟ ಆಕಾಂಷಾ ಅವರ ಪ್ರಾಣ ಸ್ನೇಹಿತೆ ಆಲಿಯಾ ಭಟ್ ಕೂಡ ಪಾಲ್ಗೊಂಡಿದ್ದರು., ಆಲಿಯಾ ಜೊತೆಗೆ ಸಹೋದರಿ ಶಾಹೀನ್ ಭಟ್ ಅವರೂ ಪಾಲ್ಗೊಂಡಿದ್ದರು. ಇವರಿಬ್ಬರೂ ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಎಲ್ಲರ ಕಣ್ಣು ಆಲಿಯಾ ಅವರ ಮೇಲೆ ನೆಟ್ಟಿದೆ. ಇದಕ್ಕೆ ಕಾರಣ ಆಲಿಯಾ ಅವರ ಉಬ್ಬಿದ ತುಟಿಗಳು! ಆಲಿಯಾ ಭಟ್ ಇತ್ತೀಚೆಗೆ ಕೆಲವು ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಸುದ್ದಿ ಹರಡಿದ್ದು, ಅದರಂತೆಯೇ ತುಟಿಗಳು ಕೂಡ ಉಬ್ಬಿವೆ ಎನ್ನಲಾಗುತ್ತಿದೆ
ಅಷ್ಟಕ್ಕೂ ನಟ-ನಟಿಯರು ಅದರಲ್ಲಿಯೂ ಹೆಚ್ಚಾಗಿ ನಟಿಯರು ತಮ್ಮ ಅಂಗಾಂಗಗಳ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವುದು ಮಾಮೂಲು. ನಟಿ ಶ್ರೀದೇವಿ ಅವರು 70-80ರ ದಶಕದಲ್ಲಿಯೇ ಮೂಗಿನ ಸರ್ಜರಿ ಮಾಡಿಸಿಕೊಂಡು ಅಂದವನ್ನು ಹೆಚ್ಚಿಸಿಕೊಂಡು ಸುದ್ದಿಯಾದವರು. ಅಲ್ಲಿಂದ ಇಲ್ಲಿಯವರೆಗೂ ವಿವಿಧದ ಅಂಗಗಳ ಸರ್ಜರಿಗೆ ನಟಿಗಳು ಮೊರೆ ಹೋಗುತ್ತಾರೆ. ಶೆರ್ಲಿನ್ ಚೋಪ್ರಾನಂಥ ಕೆಲ ನಟಿಯರು ಸ್ತನದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸೆಕ್ಸಿಯಾಗಿ ಕಾಣಿಸಲು ಹಾತೊರೆಯುತ್ತಿರುವವರು. ಶೆರ್ಲಿನ್ನಂತೆಯೇ ದೇಹದ ಶಸ್ತ್ರಚಿಕಿತ್ಸೆ ಮೊರೆ ಹೋಗಿರುವ ಹಲವು ನಟಿಯರು ಸಿನಿ ಪ್ರಪಂಚದಲ್ಲಿ ಇದ್ದಾರೆ. ಬಳಕುವ ಬಳ್ಳಿಯಂತೆ ಕಾಣಲು ಡಯೆಟ್, ಜಿಮ್, ವ್ಯಾಯಾಮ ಎಂದೆಲ್ಲಾ ಮಾಡುವ ಚೆಂದುಳ್ಳಿ ಚೆಲುವೆಯರು ತಮ್ಮ ದೇಹ ಭಾಗದ ಗಾತ್ರ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಶಸ್ತ್ರಚಿಕಿತ್ಸೆ ಮೊರೆ ಹೋಗುವುದು ಮಾಮೂಲಾಗಿದೆ. ಅದನ್ನು ಬಿಟ್ಟರೆ ಹೆಚ್ಚಿನವರು ತುಟಿಯ ಮೇಲೆ ಹೆಚ್ಚು ಗಮನ ಕೊಡುತ್ತಿದ್ದಾರೆ.
ನಟಿ ಆಲಿಯಾ, ಪೂಜಾ ಭಟ್ರ ಮಗಳೆ? ಶಾಕಿಂಗ್ ಸುದ್ದಿಗೆ ಕೊನೆಗೂ ಮೌನ ಮುರಿದ ಪೂಜಾ ಹೇಳಿದ್ದೇನು?
ಇದೀಗ ನಟಿ ಆಲಿಯಾ ಭಟ್ ಕೂಡ ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಬಹುದು ಎನ್ನಲಾಗುತ್ತಿದೆ. ಆಕಾಂಷಾ ಅವರ ಹುಟ್ಟುಹಬ್ಬದ ದಿನ, ಆಲಿಯಾ ರಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಆಲಿಯಾ ಅವರ ಗ್ಲಾಮರಸ್ ಲುಕ್ ಶೋ ಅನ್ನು ಕದಿಯುವುದರಲ್ಲಿ ಯಾವುದೇ ಅನುಮಾನವಿಲ್ಲ, ಆದರೆ ಆಲಿಯಾ ಭಟ್ ಅವರನ್ನು ವಿಭಿನ್ನ ಶೈಲಿಯಲ್ಲಿ ನೋಡಿದ ಅಭಿಮಾನಿಗಳು ಸಹ ಆಪರೇಷನ್ ಲಿಪ್ ಬಗ್ಗೆ ಮಾತನಾಡುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಆಲಿಯಾ ಭಟ್ ನೀಲಿ ಬಣ್ಣದ ಡ್ರೆಸ್ ಹಾಕಿಕೊಂಡು ಬಂದಿದ್ದರು. ಅವರ ಮುಖ ತುಂಬಾ ಹೊಳೆಯುತ್ತಿತ್ತು. ಆಲಿಯಾ ತಮ್ಮ ಮಾದಕ ಉಡುಪಿನಿಂದ ಎಲ್ಲರ ಗಮನ ಸೆಳೆದಿದ್ದವರು, ಅವರ ಚಿಕ್ಕ ಕೂದಲು ಚೆಲುವನ್ನು ಹೆಚ್ಚಿಸಿತ್ತು. ಆದರೆ ತುಟಿಯ ಕಾರಣದಿಂದ ವಿಭಿನ್ನವಾಗಿ ಕಾಣಿಸಿಕೊಂಡ ಆಲಿಯಾ ಬಗ್ಗೆ ಗುಸುಗುಸು ಶುರುವಾಗಿದೆ.
ಅಷ್ಟಕ್ಕೂ ಮಗಳು ರಾಹಾ ಹುಟ್ಟಿದ ನಂತರವೂ ಆಲಿಯಾ ಭಟ್ ಅವರ ಶಸ್ತ್ರಚಿಕಿತ್ಸೆಯ ಸುದ್ದಿ ವೇಗವನ್ನು ಪಡೆದುಕೊಂಡಿದೆ. ನಟಿಯ ಫೋಟೋ ಕಾಡ್ಗಿಚ್ಚಿನಂತೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನಂತರ ಎಲ್ಲರೂ ಅವರ ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಆ ಸಮಯದಲ್ಲಿ ನಟಿಯನ್ನು ಕೆಟ್ಟದಾಗಿ ಟ್ರೋಲ್ ಕೂಡ ಮಾಡಲಾಗುತ್ತಿದೆ.
ರಣವೀರ್ ಸಿಂಗ್- ಆಲಿಯಾ ಈ ಪರಿ ರೊಮ್ಯಾನ್ಸ್! ಸಿನಿಮಾದಲ್ಲೂ ಕತ್ತರಿ ಹಾಕಿದ್ದ ವಿಡಿಯೋ ವೈರಲ್