ಶಾರುಖ್ ಖಾನ್ರನ್ನು ಅತ್ತ-ಇತ್ತ ತಳ್ಳಿ ತಬ್ಬಿಕೊಂಡು ಕಿಸ್ ಕೊಟ್ಟ ಮಹಿಳೆಯರು! ಥೂ ಅಂತಿದ್ದಾರೆ ಫ್ಯಾನ್ಸ್
ಶಾರುಖ್ ಖಾನ್ರನ್ನು ಅತ್ತ-ಇತ್ತ ತಳ್ಳಿ ತಬ್ಬಿಕೊಂಡು ಕಿಸ್ ಕೊಟ್ಟ ಮಹಿಳೆಯರು! ವಿಡಿಯೋ ನೋಡಿ ಥೂ ಅಂತಿದ್ದಾರೆ ನೆಟ್ಟಿಗರು.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಅವರನ್ನು ಫ್ಯಾನ್ಸ್ ಮುತ್ತಿಗೆ ಹಾಕುವುದು, ಕೆಲವೊಮ್ಮೆ ಅಸಹ್ಯ ಹುಟ್ಟುವ ರೀತಿಯಲ್ಲಿ ನಡೆದುಕೊಳ್ಳುವುದು ಮಾಮೂಲು. ಇನ್ನು ಶಾರುಖ್ ಖಾನ್ರಂಥ ನಟರನ್ನು ಕಂಡರೆ ಸುಮ್ಮನೆ ಬಿಡುತ್ತಾರೆಯೇ? ಶಾರುಖ್ ಖಾನ್ ಸದ್ಯ ಜವಾನ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ವಯಸ್ಸು 57 ಆದರೂ ಅವರ ವರ್ಚಸ್ಸು ತಗ್ಗಿಲ್ಲ. ಪಠಾಣ್ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಜವಾನ್ ಇನ್ನಷ್ಟು ಯಶಸ್ಸು ತಂದುಕೊಟ್ಟಿದೆ. ಇದೀಗ ಮತ್ತೊಂಎ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಲು ಶಾರುಖ್ ತಯಾರಿ ನಡೆಸುತ್ತಿದ್ದಾರೆ. ವಿಶ್ವಾದ್ಯಂತ 900 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಜವಾನ್ ಮುನ್ನುಗ್ಗುತ್ತಿದ್ದರೆ, ‘ಡಂಕಿ’ ಸಿನಿಮಾದ ಕೆಲಸಗಳಲ್ಲೂ ಶಾರುಖ್ ಖಾನ್ ಬ್ಯುಸಿ ಆಗಿದ್ದಾರೆ. ಇದರ ಬೆನ್ನಲ್ಲೇ ಇವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಈ ವೈರಲ್ ವಿಡಿಯೋದಲ್ಲಿ ಮಹಿಳಾ ಅಭಿಮಾನಿಗಳು ನಟನನ್ನು ಮುತ್ತಿಗೆ ಹಾಕಿಕೊಂಡು ಕಿಸ್ ಮಾಡುವುದನ್ನು ನೋಡಬಹುದು. ಕಾರ್ಯಕ್ರಮವೊಂದಕ್ಕೆ ಹೋಗಿದ್ದ ನಟ ವಾಪಸ್ ಬರುವ ಸಂದರ್ಭದಲ್ಲಿ ಮಹಿಳೆಯರು ಶಾರುಖ್ ಅವರನ್ನು ತಳ್ಳಿ ಎಳೆದಾಡಿ ಕಿಸ್ ಮಾಡಿದ್ದಾರೆ. ಇದು ನಟ ಶಾರುಖ್ರನ್ನೇ ಇರುಸು ಮುರುಸುಗೊಳಿಸಿದೆ. ಮಹಿಳೆಯರ ಇಂಥ ಕೃತ್ಯಕ್ಕೆ ನೆಟ್ಟಿಗರು ಥೂ ಎನ್ನುತ್ತಿದ್ದಾರೆ. ಮಹಿಳೆಯರೂ ಮಾನ ಮರ್ಯಾದೆ ಕಳೆದುಕೊಂಡು ಅಸಹ್ಯ ರೀತಿಯಲ್ಲಿ ವರ್ತಿಸಿರುವುದು ಸರಿಯಲ್ಲ ಎಂದು ಛೀ ಎನ್ನುತ್ತಾರೆ.
ವಿಜಯ್ ಸೇತುಪತಿಯನ್ನು ಮದ್ವೆಯಾಗಲಿದ್ದಾರಂತೆ ಶಾರುಖ್ ಖಾನ್: ಟೈಮ್ ಕೂಡ ಫಿಕ್ಸ್!
ಈ ವಿಡಿಯೋದಲ್ಲಿ ಶಾರುಖ್ ಖಾನ್ ಕೂಡ ಮಹಿಳೆಯರ ದಾಳಿಯಿಂದ ಏಕಾಏಕಿ ಕಂಗಾಲಾಗಿದ್ದನ್ನು ನೋಡಬಹುದು. ಅಷ್ಟಕ್ಕೂ ಕಿಂಗ್ ಖಾನ್, ತಾಳ್ಮೆ ಕಳೆದುಕೊಳ್ಳುವುದು ಅಪರೂಪ. ಅನೇಕ ಸಂದರ್ಭಗಳಲ್ಲಿ ಅವರು ಕೂಲ್ ಆಗಿಯೇ ನಡೆದುಕೊಳ್ಳುತ್ತಾರೆ. ಅಭಿಮಾನಿಗಳಿಂದ ಕಿರಿಕಿರಿ ಆದರೂ ಕೂಡ ಅವರು ಮಿತಿ ಮೀರಿ ವರ್ತಿಸುವುದಿಲ್ಲ. ಇಲ್ಲಿಯೂ ಅವರು ಸಹನೆ ಕಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆದರೂ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ತೋರಲಿಲ್ಲ. ಒಂದು ವೇಳೆ ಇದು ರೀವರ್ಸ್ ಆಗಿ ನಟಿಯನ್ನು ಪುರುಷರು ತಬ್ಬಿಕೊಂಡು ಕಿಸ್ ಕೊಟ್ಟಿದ್ದರೆ ಇದು ಯಾವ ರೇಂಜ್ನಲ್ಲಿ ಸುದ್ದಿಯಾಗುತ್ತಿತ್ತು, ಪುರುಷರ ಮರ್ಯಾದೆಯನ್ನು ಹೇಗೆ ಕಳೆಯುತ್ತಿದ್ದು ಎಂಬ ಬಗ್ಗೆ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.
‘ಬೇರೆ ಯಾವುದಾದರೂ ನಟಿಯ ಜೊತೆ ಪುರುಷ ಅಭಿಮಾನಿಗಳು ಈ ರೀತಿ ನಡೆದುಕೊಂಡಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು. ಇದು ಮಹಿಳೆ ಅಥವಾ ಪುರುಷ ಎಂಬ ಪ್ರಶ್ನೆ ಅಲ್ಲ. ಎಲ್ಲರಿಗೂ ಅನ್ವಯ ಆಗುವಂಥದ್ದು. ಅನುಮತಿ ಎಲ್ಲದೇ ಯಾರನ್ನೂ ಮುಟ್ಟಬಾರದು, ಕಿಸ್ ಮಾಡಬಾರದು. ಅದರಲ್ಲಿಯೂ ಮರ್ಯಾದೆ ಬಿಟ್ಟವರಂತೆ ವರ್ತಿಸುತ್ತಿರುವ ಈ ಹೆಂಗಸರ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎನ್ನುತ್ತಿದ್ದಾರೆ ಕಮೆಂಟಿಗರು. ಇದು ತುಂಬ ಮುಜುಗರ ತರುವಂತಹ ದೃಶ್ಯ ಎನ್ನುತ್ತಿದ್ದು, ಇಂಥ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದ ಶಾರುಖ್ ಖಾನ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಜವಾನ್ ಚಿತ್ರ ನೋಡಿ ರೊಚ್ಚಿಗೆದ್ದ ಶಾರುಖ್ ಫ್ಯಾನ್ಸ್: ಸಂಪೂರ್ಣ ಟಿಕೆಟ್ ಹಣ ವಾಪಸ್ ನೀಡಿದ ಮಾಲೀಕ!
SRK molested by ladies
byu/DreamBeliveActAchive inBollyBlindsNGossip