ಆಕೆಯ ಕರಿಯರ್ ಮುಗೀತು, ಮತ್ತೆ ಸ್ಟಾರ್ ಆಗಲು ಸಾಧ್ಯವೇ ಇಲ್ಲ; ಸಮಂತಾ ವಿರುದ್ಧ ನಿರ್ಮಾಪಕ ಕಿಡಿ
ಆಕೆಯ ವೃತ್ತಿ ಜೀವನ ಮುಗೀತು, ಸ್ಟಾರ್ ಪಟ್ಟ ಹೋಗಿದೆ, ಹಣಕ್ಕಾಗಿ ಐಟಂ ಡಾನ್ಸ್ ಮಾಡ್ತಾರೆ ಎಂದು ನಿರ್ಮಾಪಕ ಚಿಟ್ಟಿ ಬಾಬು ಸಮಂತಾ ವಿರುದ್ಧ ಕಿಡಿಕಾರಿದ್ದಾರೆ.
ನಟಿ ಸಮಂತಾ ಸೌತ್ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸಿನಿಮಾರಂಗದಲ್ಲಿ ಯಾರ ಸಹಾಯವಿಲ್ಲದೇ, ಸಿನಿಮಾ ಬ್ಯಾಗ್ರೌಂಡ್ ಇಲ್ಲದೇ ತನ್ನದ ಶ್ರಮದ ಮೇಲೆಯೇ ಬೆಳೆದ ನಟಿ ಸಮಂತಾ. ತನ್ನ ಅದ್ಭುತ ಪ್ರತಿಭೆಯಿಂದನೇ ದೊಡ್ಡ ಮಟ್ಟದ ಖ್ಯಾತಿಗಳಿಸಿರುವ ಸಮಂತಾ ವೈಯಕ್ತಿಕ ಜೀವನದಲ್ಲಿ ಹಿನ್ನಡೆಗಳಿಸಿದರು. ಜೊತೆಗೆ ಅನಾರೋಗ್ಯ ಅವರನ್ನು ಕಾಡಲು ಪ್ರಾರಂಭಿಸಿದೆ. ಆದರೂ ಸಮಂತಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಶೂಟಿಂಗ್, ಪ್ರಮೋಷನ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸದ್ಯ ಸ್ಯಾಮ್ ಶಾಕುಂತಲಂ ಆಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಶಾಕುಂತಲಂ ಸಿನಿಮಾವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ನಡುವೆ ನಿರ್ಮಾಪಕ ಚಿಟ್ಟಿ ಬಾಬು ಕೆಟ್ಟ ಕಾಮೆಂಟ್ ಮಾಡಿ ಸಮಂತಾ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ಸಮಂತಾ ವೃತ್ತಿ ಜೀವನ ಮುಗಿಯುತು, ಆಕೆ ಡ್ರಾಮ ಕ್ವೀನ್, ಸ್ಟಾರ್ ಹೀರೋಯಿನ್ ಪಟ್ಟ ಕಳೆದುಕೊಂಡಿದ್ದಾರೆ ಎಂದು ಸಮಂತಾ ವಿರುದ್ಧ ಕಿಡಿ ಕಾರಿದ್ದಾರೆ. ಸಮಂತಾ ಡ್ರಾಮ ಕ್ವೀನ್ ಆಗಿ ಬದಲಾಗಿದ್ದಾರೆ. ಪ್ರಚಾರಕ್ಕಾಗಿ, ಅನುಕಂಪದ ಹಿಟ್ ಗಳಿಸಲು ಚೀಪ್ ಆಗಿ ತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಚ್ಛೇದನದ ನಂತರ ಪುಷ್ಪಾ ದಿ ರೈಸ್ ಚಿತ್ರದಲ್ಲಿ ಸಮಂತಾ ಊ ಅಂತಾವಾ ಐಟಂ ಸಾಂಗ್ ಮಾಡಿದ್ದ ಬಗ್ಗೆಯೂ ಗುಡುಗಿದ್ದಾರೆ. 'ಆಕೆ ತನ್ನ ಜೀವನೋಪಾಯಕ್ಕಾಗಿ ಐಟಂ ಡಾನ್ಸ್ ಮಾಡಿದಳು. ಸ್ಟಾರ್ ಹೀರೋಯಿನ್ ಪಟ್ಟ ಕಳೆದುಕೊಂಡ ನಂತರ ತನಗೆ ಬರುತ್ತಿರುವ ಆಫರ್ ಗಳನ್ನೆಲ್ಲ ಮಾಡುತ್ತಿದ್ದಾರೆ. ನಾಯಕಿಯಾಗಿ ಆಕೆಯ ವೃತ್ತಿಜೀವನ ಮುಗಿದಿದೆ ಮತ್ತು ಅವರು ಮತ್ತೆ ಸ್ಟಾರ್‌ಡಮ್‌ಗೆ ಮರಳಲು ಸಾಧ್ಯವಿಲ್ಲ. ಅವಳು ಪಡೆಯುವ ಆಫರ್‌ಗಳನ್ನು ಮಾಡುತ್ತಾ ತನ್ನ ಪ್ರಯಾಣವನ್ನು ಮುಂದುವರೆಸಬೇಕು' ಎಂದು ಹೇಳಿದ್ದಾರೆ.
Shaakuntalam collection: ಸಮಂತಾ ಸಿನಿಮಾ ಮೊದಲ ದಿನ ಗಳಿಸಿದ್ದಷ್ಟು? ಇಲ್ಲಿದೆ ಕಲೆಕ್ಷನ್ ಲೆಕ್ಕಾಚಾರ
'ಯಶೋದಾ ಪ್ರಚಾರದ ಸಮಯದಲ್ಲಿ ಕಣ್ಣೀರು ಸುರಿಸಿದರು, ಹಿಟ್ ಗಳಿಸಲು ಪ್ರಯತ್ನಿಸಿದರು. ಈಗ ಶಾಕುಂತಲಂಗಾಗಿ ಅದೇ ತಂತ್ರ ಮಾಡಿದ್ದಾಳೆ. ಅವಳು ಸಾಯುವ ಮೊದಲು ಇಂಥ ಪಾತ್ರವನ್ನು ಮಾಡಲು ಯೋಜಿಸಿದ್ದೆ ಎಂದು ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾಳೆ. ಇದೇ ವೇಳೆ ಗಂಟಲು ಸರಿ ಇಲ್ಲದ ಕಾರಣ ಧ್ವನಿ ಹೊರಟು ಹೋಗಿದೆ ಎಂದು ಸುಳ್ಳು ಹೇಳುತ್ತಿದ್ದಾಳೆ' ಎಂದು ಚಿಟ್ಟಿ ಬಾಬು ಹೇಳಿದ್ದಾರೆ.
ಸೌತ್ ನಟಿಯರಿಗೆ ಬಟ್ಟೆ ಕೊಡದೇ ಅವಮಾನ ಮಾಡುತ್ತಿದ್ದ ದಿನಗಳ ನೆನೆದ ನಟಿ ಸಮಂತಾ
ಪ್ರತಿ ಬಾರಿಯೂ ಸೆಂಟಿಮೆಂಟ್ ಕೆಲಸ ಮಾಡಲ್ಲ. ಪಾತ್ರ ಮತ್ತು ಸಿನಿಮಾ ಚೆನ್ನಾಗಿದ್ದರೆ ಮಾತ್ರ ಜನ ನೋಡುತ್ತಾರೆ. ಇಂಥ ಚೀಪ್ ಮತ್ತು ಹುಚ್ಚುತನದ ಕೃತ್ಯಗಳು ವರ್ಕ್ ಆಗಲ್ಲ. ಸ್ಟಾರ್ ನಾಯಕಿ ಪಟ್ಟ ಕಳೆದುಕೊಂಡಿರುವ ಸಮಂತಾ ಶಾಕುಂತಲಾ ಪಾತ್ರಕ್ಕೆ ಹೇಗೆ ಹೊಂದಿಕೊಂಡರು ಎನ್ನುವುದು ನನಗೆ ದೊಡ್ಡ ಪ್ರಶ್ನೆಯಾಗಿದೆ. ನನಗೆ ಶಾಕುಂತಲಂ ಸಿನಿಮಾ ಮೇಲೆ ಆಸಕ್ತಿಯಿಲ್ಲ' ಎಂದು ನೇರವಾಗಿ ತೆಗಳಿದ್ದಾರೆ.