Shaakuntalam collection: ಸಮಂತಾ ಸಿನಿಮಾ ಮೊದಲ ದಿನ ಗಳಿಸಿದ್ದಷ್ಟು? ಇಲ್ಲಿದೆ ಕಲೆಕ್ಷನ್ ಲೆಕ್ಕಾಚಾರ

ಸಮಂತಾ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಮೊದಲ ದಿನ ಎಲ್ಲಾ ಭಾಷೆಗಳಲ್ಲಿ ಒಟ್ಟು 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

Samantha Ruth Prabhu starrer Shakuntalam film earns Rs 5 crore in day first sgk

ಟಾಲಿವುಡ್ ಸ್ಟಾರ್ ಸಮಂತಾ ಸದ್ಯ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಭಾರಿ ನಿರೀಕ್ಷೆಯ ಶಾಕುಂತಲಂ ಸಿನಿಮಾ ಏಪ್ರಿಲ್ 14ರಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ತೆಲುಗು ಜೊತೆಗೆ ಶಾಕುಂತಲಂ ಸಿನಿಮಾ ಕನ್ನಡ, ತಮಿಳು, ಮಲಯಾಳಂ ಭಾಷೆಯಗಳಲ್ಲಿ ತೆರೆಗೆ ಬಂದಿದೆ. ಈ ಸಿನಿಮಾ ಕಾಳಿದಾಸರ ಅಭಿಜ್ಞಾನಶಾಕುಂತಲಂ ನಾಟಕದಿಂದ ಪ್ರೇರಿತವಾಗಿದೆ. ಈ ಸಿನಿಮಾದಲ್ಲಿ ಸಮಂತಾ ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದಾರೆ. 

ಅಂದಹಾಗೆ ಶಾಕುಂತಲಂ ಸಿನಿಮಾಗೆ ಪ್ರೇಕ್ಷಕರದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುಣಶೇಖರ್ ಸಾರಥ್ಯದಲ್ಲಿ ಬಂದ ಈ ಸಿನಿಮಾಗೆ ನಿರೀಕ್ಷೆಯ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪೌರಾಣಿಕ ಸಿನಿಮಾ ಮೊದಲ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವದಿಯಾಗಿದೆ. ಇದು ಎಲ್ಲಾ ಭಾಷೆಯಲ್ಲೂ ಗಳಿಸಿದ ಮೊತ್ತವಾಗಿದೆ. ಇದು ಈ ಹಿಂದೆ ರಿಲೀಸ್ ಆಗಿದ್ದ ಸಮಂತಾ ಅವರ ಯಶೋದಾ ಸಿನಿಮಾಗಿಂತ ಹೆಚ್ಚಿದೆ. ಅಂದಹಾಗೆ ಯಶೋದಾ ಸಿನಿಮಾ ಮೊದಲ ದಿನ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮೊದಲ ವಾರದಲ್ಲಿ ಯಶೋದಾ 10 ಕಲೆಕ್ಷನ್ ಮಾಡಿತ್ತು ಒಟ್ಟು ಕಲೆಕ್ಷನ್ 20 ಕೋಟಿ ರೂಪಾಯಿ. ಯಶೋದಾ ಸಿನಿಮಾಗೆ ಹೋಲಿಸಿದರೆ ಶಾಕುಂತಲಂ ಸಿನಿಮಾದ ಕಲೆಕ್ಷನ್ ಹೆಚ್ಚಿದೆ.

ಅಂದಹಾಗೆ ವೀಕೆಂಡ್ ನಲ್ಲಿ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ. ಮಂದಗತಿಯಲ್ಲಿ ಸಾಗಿದರೆ ಶಾಕುಂತಲಂ ಕಲೆಕ್ಷನ್‌ಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಶಾಕುಂತಲಂ ಬಿಗ್ ಬಜೆಟ್ ನಲ್ಲಿ ತಯಾರಾದ ಸಿನಿಮಾ. ವಿಎಕ್ಸ್‌ಎಫ್ ಕೆಲಸಕ್ಕೆ ಹೆಚ್ಚು ಖರ್ಚು ಮಾಡಲಾಗಿದೆ. ತಾರಾಬಳಕ ಕೂಡ ದೊಡ್ಡದಿದೆ.

ಸ್ಯಾಮಿ..ಎಂದು ಹೃದಯಸ್ಪರ್ಶಿ ಪತ್ರ ಬರೆದ ವಿಜಯ್ ದೇವರಕೊಂಡ; ನನ್ನ ಹೀರೋ ಎಂದ ಸಮಂತಾ

 ಶಾಕುಂತಲೆಯಾಗಿ ಸಮಂತಾ ನಟಿಸಿದ್ರೆ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಸಮಂತಾ ಮಗಳ ಪಾತ್ರದಲ್ಲಿ ಅಲ್ಲುಅರ್ಜುನ್ ಪುತ್ರಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅಲ್ಲು ಅರ್ಹಾ ನಟಿಸಿದ್ದಾರೆ.  

ಸೌತ್​ ನಟಿಯರಿಗೆ ಬಟ್ಟೆ ಕೊಡದೇ ಅವಮಾನ ಮಾಡುತ್ತಿದ್ದ ದಿನಗಳ ನೆನೆದ ನಟಿ ಸಮಂತಾ

ಈ ಸಿನಿಮಾದ ಮೇಲೆ ಸಮಂತಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅನಾರೋಗ್ಯದ ನಡುವೆಯೂ ಸಮಂತಾ ಶಾಕುಂತಲಂ ಸಿನಿಮಾ ಮಾಡಿ ಮುಗಿಸಿದ್ದರು. ಡಬ್ಬಿಂಗ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ಪ್ರಮೋಷನ್‌ಗಳಲ್ಲಿ ಭಾಗಿಯಾಗಿ ಸಿನಿಮಾ ರಿಲೀಸ್ ಆಗುವವರೆಗೂ ತಂಡದ ಜೊತೆ ನಿಂತಿದ್ದರು. ಪ್ರಮೋಷನ್‌ನಲ್ಲಿ ಸಿಕ್ಕಾಪಟ್ಟೆ ಓಡಾಡಿದ ಕಾರಣ ಸಮಂತಾ ಮತ್ತೆ ಅನೋರಾಗ್ಯಕ್ಕೆ ಒಳಗಾಗಿದ್ದರು. ತೀವ್ರ ಜ್ವರದಿಂದ ಬಳುತ್ತಿರುವುದಾಗಿ ಸಮಂತಾ ಹೇಳಿದ್ದರು. ವಿಶ್ರಾಂತಿ ಪಡೆಯುತ್ತಿರುವ ಸ್ಯಾಮ್ ಚಿತ್ರದ ಪ್ರತಿಕ್ರಿಯೆ ನೋಡಿ ಸಾಮಾಜಿಕ ಜಾಲತಾಣದಲ್ಲಿಯೇ ಉತ್ತರ ನೀಡುತ್ತಿದ್ದಾರೆ.   

Latest Videos
Follow Us:
Download App:
  • android
  • ios