Asianet Suvarna News Asianet Suvarna News

ಪತಿ ನಿಕ್ ಪಕ್ಕದಲ್ಲಿದ್ರೂ ಈ ವ್ಯಕ್ತಿಯನ್ನ ನೆನಸಿ ಪದೇ ಪದೇ ಕಣ್ಣೀರಿಡ್ತಾರೆ ನಟಿ ಪ್ರಿಯಾಂಕ

ಮದ್ವೆ ಆದ್ಮೇಲೆ ಹೊಸ ಜೀವನ. ಹಳೆಯದನ್ನೆಲ್ಲ ಮರೆದು ಹೊಸ ಬದುಕಲ್ಲಿ ಮುನ್ನಡೆಯಬೇಕು ಅನ್ನೋ ಮಾತಿದೆ. ಆದರೆ ಪ್ರಿಯಾಂಕಾ ಚೋಪ್ರಾಗೆ ಮಾತ್ರ ಮದ್ವೆ ಆದ್ಮೇಲೂ ಈ ವ್ಯಕ್ತಿನ ಮರೆಯಕ್ಕಾಗ್ತಿಲ್ಲ. ಯಾರು ಆ ವ್ಯಕ್ತಿ?

 

Priyanka chopra remembers her father
Author
Bengaluru, First Published Nov 28, 2020, 2:53 PM IST

ಸಂಜೆ ಹೊತ್ತು ಪಕ್ಕದಲ್ಲಿ ತಾನು ಇಷ್ಟಪಟ್ಟ ಪ್ರೀತಿಸಿದ ಗಂಡ ನಿಕ್ ಜೋನಸ್ ಇದ್ದಾರೆ. ವೖಭವೋಪೇತ ಜಾಗದಲ್ಲಿ ಅವರಿಬ್ಬರೂ ಇದ್ದಾರೆ. ಆದರೂ ಪ್ರಿಯಾಂಕಾ ಚೋಪ್ರಾ ಒಬ್ಬ ವ್ಯಕ್ತಿಯನ್ನು ನೆನಪಿಸಿಕೊಂಡು ಕಣ್ಣಲ್ಲಿ ನೀರು ತಂದುಕೊಂಡಿದ್ದಾರೆ! ಯಾರು ಆ ವ್ಯಕ್ತಿ. ಮದುವೆ ಆದ ಮೇಲೂ ಪ್ರಿಯಾಂಕಾ ಅವರನ್ನು ಯಾಕೆ ಮರೆಯಲಾಗುತ್ತಿಲ್ಲ..

ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ. ಹಾಲಿವುಡ್ ನಲ್ಲೂ ತನ್ನದೇ ಛಾಪು ಮೂಡಿಸಿರೋ ಹೀರೋಯಿನ್. ಇತ್ತೀಚೆಗೆ ಪತಿ ನಿಕ್ ಜೊತೆಗಿನ ಓಡಾಟ, ಅದೂ ಇದೂ ಅಂತ ಸುದ್ದಿಯಲ್ಲಿದ್ರು. ಆದರೆ ಈಗ ಒಬ್ಬ ವ್ಯಕ್ತಿ ಅವರನ್ನು ಬಹಳ ಕಾಡುತ್ತಿದ್ದಾರೆ. ಕೂತರೆ ನಿಂತರೆ ಅವರದೇ ನೆನಪಾಗುತ್ತಿದೆ. ಆ ಬಗ್ಗೆ ಪ್ರಿಯಾಂಕಾ ಚೋಪ್ರ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಯಾರು ಆ ವ್ಯಕ್ತಿ!

ಅಶೋಕ್ ಚೋಪ್ರಾ, ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಇವರೇ ಪ್ರಿಯಾಂಕಾ ಚೋಪ್ರಾ ತಂದೆ. ಅಪ್ಪ ಅಂದರೆ ಮೊದಲಿಂದಲೂ ಪ್ರಿಯಾಂಕಾಗೆ ಅಪಾರ ಪ್ರೀತಿ ಮಮತೆ. ಒಂದು ರೀತಿಯಲ್ಲಿ ಪ್ರಿಯಾಂಕಾ ಅವರ ಗೖಡ್, ಫಿಲಾಸಫರ್, ಫ್ರೆಂಡ್, ಬೆಸ್ಟ್ ಅಪ್ಪ ಎಲ್ಲವೂ ಆಗಿದ್ದವರು. ಅಪ್ಪ ಅಮ್ಮ ಇಬ್ಬರೂ ಮಿಲಿಟರಿಯಲ್ಲಿ ವೖದ್ಯರಾಗಿದ್ದ ಕಾರಣ ಆಗಾಗ ವರ್ಗಾವಣೆ ಆಗುತ್ತಿತ್ತು. ಪ್ರಿಯಾಂಕಾ ಶಾಲೆಯೂ ಆಗಾಗ ಬದಲಾಗುತ್ತಿತ್ತು.

ಕೋಲ್ಡ್ ಶೋಲ್ಡರ್ ವೈಟ್ ಕ್ರಾಪ್ ಟಾಪ್‌ನಲ್ಲಿ ಸನ್ನಿ ಲಿಯೋನ್ ಕಂಡಿದ್ದು ಹೀಗೆ ...

ಆದರೆ ಇದನ್ನೆಲ್ಲ ಪಿಗ್ಗಿ ಬಹಳ ಎನ್ ಜಾಯ್ ಮಾಡಿದ್ದಾರೆ. ಲೇಹ್ ನ ಕಣಿವೆಯಲ್ಲಿ ಆಟವಾಡಿದ್ದು, ಅಲ್ಲಿನ ಸ್ತೂಪಗಳಲ್ಲಿ ರೇಸ್ ಮಾಡುತ್ತಿದ್ದದ್ದು, ಇನ್ನೂ ಅನೇಕ ಜಾಗಗಳನ್ನು ಕಂಡಿದ್ದು ಎಲ್ಲವೂ ಅವರಿಗೀಗ ಸ್ವೀಟ್ ಮೆಮೊರಿ. ಆಗೆಲ್ಲ ಜೊತೆಯಾಗಿದ್ದ, ಆಟ ಪಾಠಗಳಲ್ಲಿ ಸದಾ ಪ್ರಿಯಾಂಕಾಗೆ ಸಪೋರ್ಟಿವ್ ಆಗಿದ್ದ ತಂದೆಯ ನೆನಪೂ ಅವರನ್ನ ಗದ್ಗದಿತರನ್ನಾಗಿಸುತ್ತದೆ. ಅಶೋಕ್ ಚೋಪ್ರಾ ಅವರು ಪ್ರಿಯಾಂಕಾ ಅವರನ್ನು ಬಿಟ್ಟು ಅಗಲಿದ್ದು ೨೦೧೩ರಲ್ಲಿ. ಅವರಿಗೆ ಕ್ಯಾನ್ಸರ್ ಆಗಿತ್ತು. ಐದು ವರ್ಷಗಳ ಕಾಲ ಕ್ಯಾನ್ಸರ್ ಜೊತೆಗೆ ಹೋರಾಟ ಮಾಡಿ ಕೊನೆಗೂ ಈ ಲೋಕಕ್ಕೆ ಗುಡ್ ಬೖ ಹೇಳಿದ್ದರು. ತಂದೆಯ ಅಗಲಿಕೆ ಪ್ರಿಯಾಂಕಾರನ್ನು ಜರ್ಝರಿತರನ್ನಾಗಿಸಿತು.

ಪದ್ಮಶ್ರೀ ಪ್ರಶಸ್ತಿ ಬಂದಾಗ ಅಪ್ಪನೇ ಮನಸ್ಸಲ್ಲಿದ್ರು!
ಪ್ರಿಯಾಂಕಾ ತಮಗೆ ಪದ್ಮಶ್ರೀ ಬಂದ ಸಂದರ್ಭವನ್ನು ಸೋಷಿಯಲ್ ಮೀಡಿಯಾದಲ್ಲಿ ನೆನೆಸಿಕೊಂಡಿದ್ದಾರೆ. ಜೊತೆಗೆ ಆ ಸಂದರ್ಭ ಬಹಳ ಮಿಸ್ ಮಾಡಿದ್ದ ಅಪ್ಪನನ್ನೂ. ಪದ್ಮಶ್ರೀ ದೇಶದ ನಾಲ್ಕನೇ ಅತೀ ದೊಡ್ಡ ನಾಗರಿಕ ಗೌರವ. ಅದು ನನಗೆ ಸಿಕ್ಕಿರೋದು ನನ್ನ ಜೀವಮಾನದ ಅತೀ ದೊಡ್ಡ ಗೌರವ. ಆ ದಿನ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಇತ್ತು. ನನ್ನ ಅಜ್ಜಿ, ಅಂಕಲ್, ದೊಡ್ಡಪ್ಪ, ಅಮ್ಮ, ತಮ್ಮ ಎಲ್ಲರೂ ಅಂದು ನನ್ನ ಜೊತೆಗಿದ್ದರು.

ಪತ್ನಿ ಜೊತೆ ಆ ಮೊಮೆಂಟ್ ಅನುಭವಿಸ್ಬೇಕು: ಪೆಟರ್ನಿಟಿ ಲೀವ್ ತಗೊಳ್ತಿದ್ದಾರೆ ಕೊಹ್ಲಿ..! ...

ರಾಷ್ಟ್ರಪತಿ ಭವನವನ್ನು ಅಷ್ಟು ಹತ್ತಿರದಿಂದ ಕಂಡು ಅವರೆಲ್ಲ ಬಹಳ ಸಂಭ್ರಮದಿಂದಿದ್ದರು. ಅವರೆಲ್ಲರ ನಡುವೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆಯುವಾಗ ಬಹಳ ಹೆಮ್ಮೆ ಇತ್ತು. ಆದರೆ ಆಗ ನಮ್ಮ ಫ್ಯಾಮಿಲಿಯ ಕೇಂದ್ರದಂತಿದ್ದ ಅಪ್ಪ ನಮ್ಮ ಜೊತೆಗಿರಲಿಲ್ಲ. ಅವರನ್ನು ನಾನು ಬಹಳ ಮಿಸ್ ಮಾಡಿಕೊಂಡೆ. ಅವರು ದೖಹಿಕವಾಗಿ ನಮ್ಮ ಜೊತೆಗಿರಲಿಲ್ಲ. ಆದರೆ ಪ್ರಶಸ್ತಿ ಪ್ರದಾನ ಸಮಾರಂಭದುದ್ದಕ್ಕೂ ನಾನು ಅಪ್ಪನನ್ನು ನನ್ನ ಜೊತೆಗೇ ಕರೆದೊಯ್ದಿದ್ದೆ. ಅವರು ಅಂದೂ, ಇಂದೂ ನನ್ನ ಜೊತೆಗೇ ಇದ್ದಾರೆ.

ಯೋಗ ಕ್ಲಾಸ್‌ಗೆ ಹೋಗೋವಾಗ ಇಷ್ಟು ಕಾಸ್ಟ್ಲಿ ಟೀಶರ್ಟ್ ಹಾಕ್ತಾರಾ ಮಲೈಕಾ ...

ಹೀಗೆ ಭಾವನಾತ್ಮಕವಾಗಿ ಪ್ರಿಯಾಂಕಾ ಅಪ್ಪನನ್ನು ನೆನಪಿಸಿಕೊಂಡಿದ್ದಾರೆ. ಅಪ್ಪ ಇಂದಿಗೂ ಎಂದಿಗೂ ಅವರ ನೆನಪುಗಳಲ್ಲಿ ಜೀವಂತವಾಗಿರುವ ವ್ಯಕ್ತಿ. ಪತಿ ನಿಕ್ ಜೊತೆಗೆ ಅಪ್ಪನನ್ನೂ ಮಾನಸಿಕವಾಗಿ ತನ್ನ ಜೊತೆಯಲ್ಲಿರಿಸಿಕೊಂಡಿದ್ದಾರೆ ಪ್ರಿಯಾಂಕ. ಇಷ್ಟೆಲ್ಲ ಆದರೂ ಅಪ್ಪನ ದೖಹಿಕ ಅಗಲಿಕೆ ಅವರನ್ನು ಬಿಟ್ಟೂ ಬಿಡದೇ ಕಾಡುತ್ತಲೇ ಇದೆ.

Follow Us:
Download App:
  • android
  • ios