3 ವರ್ಷಗಳ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಮರಳುತ್ತಿದ್ದಾರೆ. ತವರಿಗೆ ಬರುತ್ತಿರುವ ಸಂತಸವನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪತಿ ನಿಕ್ ಜೋನಸ್ ಜೊತೆ ವಿದೇಶದಲ್ಲೇ ನೆಲೆಸಿರುವ ಪ್ರಿಯಾಂಕಾ ಭಾರತಕ್ಕೆ ಬರದೆ 3 ವರ್ಷಗಳಾಗಿದೆ. ಕೊರೊನಾ ಬಳಿಕ ಗ್ಲೋಬಲ್ ಸ್ಟಾರ್ ತನ್ನ ತವರಿನ ಕಡೆ ಮುಖ ಮಾಡಿಲ್ಲ. ಆದರೀಗ 3 ವರ್ಷಗಳ ಬಳಿಕ ಪಿಗ್ಗಿ ಭಾರತಕ್ಕೆ ಬರುತ್ತಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಅಭಿಮಾನಿಗಳು ನೆಚ್ಚಿನ ನಟಿಯನ್ನು ಮುಂಬೈನ ನೋಡಲು ಕಾತರರಾಗಿದ್ದಾರೆ. ತವರಿಗೆ ಮರಳುವ ಬಗ್ಗೆ ಪ್ರಿಯಾಂಕಾ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದು ಬೋರ್ಡಿಂಗ್ ಪಾಸ್ ‌ನ ಫೋಟೋ ಶೇರ್ ಮಾಡಿ ಮಾಹಿತಿ ನೀಡಿದ್ದಾರೆ. 

ಅಂದಹಾಗೆ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಮದುವೆಯಾದ ಬಳಿಕ ಅಮೆರಿಕಾದಲ್ಲೇ ನೆಲೆಸಿದ್ದಾರೆ. ಅಲ್ಲದೇ ಪ್ರಿಯಾಂಕಾ ಬಾಲಿವುಡ್ ನಿಂದನೂ ಅಂತರ ಕಾಯ್ದುಕೊಂಡರು. ಮದುವೆ ಬಳಿಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು ತೀರಾ ಕಡಿಮೆ. ಹಾಲಿವುಡ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಈ ನಡುವೆ ಪ್ರಿಯಾಂಕಾ ಮತ್ತು ನಿಕ್ ಜೋನಸ್ ದಂಪತಿ ಬಾಡಿಗೆ ತಾಯಿ ಮೂಲಕ ಮಗುವನ್ನು ಸ್ವಾಗತಿಸಿದರು. ಸಾಕಷ್ಟು ಬ್ಯುಸಿಯ ನಡುವೆ ಪ್ರಿಯಾಂಕಾ ಭಾರತಕ್ಕೆ ಬಂದಿರಲಿಲ್ಲ. ಇದೀಗ ಮಗಳ ಜೊತೆ ಭಾರತಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಈ ಬಗ್ಗೆ ಪ್ರಿಯಾಂಕಾ 'ಅಂತಿಮವಾಗಿ...ಮನೆಗೆ ಹೋಗುತ್ತಿದ್ದೇನೆ. ಸುಮಾರು 3 ವರ್ಷಗಳ ಬಳಿಕ' ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಪ್ರಿಯಾಂಕಾ ಮೊದಲ ಬಾರಿಗೆ ಮಗಳ ಜೊತೆ ಭಾರತಕ್ಕೆ ಬರುತ್ತಿದೆ. ಮಗಳು ಮಾಲ್ತಿ ಮೇರಿಗೆ ಮೊದಲ ಬಾರಿಗೆ ಅಜ್ಜಿ ಮನೆಯ ದರ್ಶನ ಮಾಡಿಸುತ್ತಿದ್ದಾರೆ. ಅಂದಹಾಗೆ ಪ್ರಿಯಾಂಕಾ ತಾಯಿ ಮಗಳು ಮತ್ತು ಮೊಮ್ಮಗಳನ್ನು ನೋಡಲು ಅಮೆರಿಕಾಗೆ ತರಳಿದ್ದರು. ಇದೀಗ ಮಗಳು ಮನೆಗೆ ಬರುತ್ತಿರುವ ಸಂತಸದಲ್ಲಿದ್ದಾರೆ. 

ಸೆಲಬ್ರಿಟಿ ಪ್ರಿಯಾಂಕ ಚೋಪ್ರಾ ತ್ವಚೆಗೆ ಬಳಸೋದು ಅಜ್ಜಿಕಾಲದ ಸಿಂಪಲ್ ಟಿಪ್ಸ್‌

ನಟಿ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲಾತಣದಲ್ಲಿ ಸಖತ್ ಅಕ್ವೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ವಿದೇಶದ ಗುಡುಗನನ್ನು ಕೈ ಹಿಡಿದರೂ, ವಿದೇಶದಲ್ಲೇ ನೆಲೆಸಿದರೂ ಭಾರತದ ಸಂಸ್ಕೃತಿ ಮರೆತಿಲ್ಲ. ಭಾರತದ ಎಲ್ಲಾ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಇತ್ತೀಚಿಗಷ್ಟೆ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಮನೆಯಲ್ಲಿ ದೀಪಾವಳಿ ಆಚರಿಸಿದ ಫೋಟೋವನ್ನು ಶೇರ್ ಮಾಡಿದ್ದರು. 

ಹಬ್ಬಕ್ಕೆ ಪ್ರಿಯಾಂಕಾ ಚೋಪ್ರಾ ತಾಯಿ ಕೂಡ ಅಮೆರಿಕಾಗೆ ತೆರಳಿದ್ದರು. ಮಗಳು, ಅಳಿಯ ಹಾಗೂ ಮೊಮ್ಮಗಳ ಜೊತೆ ಹಬ್ಬ ಸಂಭ್ರಮಿಸಿದ್ದರು. ಪ್ರಿಯಾಂಕಾ ದೀಪಾವಳಿಯ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಸಂಪ್ರದಾಯಿಕ ಉಡುಗೆಯಲ್ಲಿ ಎಲ್ಲರೂ ಕಂಗೊಳಿಸಿದ್ದರು. ಅಂದಹಾಗೆ ಪ್ರಿಯಾಂಕಾ ಇದುವರೆಗೂ ತನ್ನ ಮಗಳ ಫೋಟೋವನ್ನು ಇನ್ನು ರಿವೀಲ್ ಮಾಡಿಲ್ಲ. ಫೋಟೋ ಶೇರ್ ಮಾಡಿದರೂ ಸಹ ಮಗಳ ಮುಖವನ್ನು ರಿವೀಲ್ ಮಾಡುವುದಿಲ್ಲ. ತನ್ನ ತವರಿಗೆ ಮರಳಿದ ಬಳಿಕವಾದರೂ ಮಗಳ ದರ್ಶನ ಮಾಡಿಸುತ್ತಾರಾ ಎಂದು ಕಾದುನೋಡಬೇಕಿದೆ. 

ಅಮೆರಿಕಾ ಉಪಾಧ್ಯಕ್ಷೆಯನ್ನು ಸಂದರ್ಶಿಸಿದ ಭಾರತದ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಈ ವರ್ಷದ ಪ್ರಾರಂಭದಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಸ್ವಾಗತಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಪ್ರಿಯಾಂಕಾ ಸಿನಿಮಾಗಳ ಜೊತೆಗೆ ಮಗಳ ಆರೈಕೆಯಲ್ಲೂ ನಿರತರಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನೇಕ ಪ್ರಾಜೇಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಟ್ಸ್ ಆಲ್ ಕಮ್ಮಿಂಗ್ ಬ್ಯಾಕ್ ಟು ಮಿ, ಸಿಟಾಡೆಲ್ ಸಿನಿಮಾಗಳನ್ನು ಮುಗಿಸಿದ್ದಾರೆ.