Asianet Suvarna News Asianet Suvarna News

ಅಮೆರಿಕಾ ಉಪಾಧ್ಯಕ್ಷೆಯನ್ನು ಸಂದರ್ಶಿಸಿದ ಭಾರತದ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್​ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಶುಕ್ರವಾರ ಶ್ವೇತಭವನಕ್ಕೆ ಭೇಟಿ ನೀಡಿದ್ದರು. ಆಗ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸಂದರ್ಶನ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

Priyanka Chopra interviews US Vice President Kamala Harris at White House sgk
Author
First Published Oct 1, 2022, 3:39 PM IST

ಬಾಲಿವುಡ್​ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಶುಕ್ರವಾರ ಶ್ವೇತಭವನಕ್ಕೆ ಭೇಟಿ ನೀಡಿದ್ದರು. ಆಗ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸಂದರ್ಶನ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಈ ಸಂದರ್ಶನದಲ್ಲಿ ಪ್ರಿಯಾಂಕಾ ವೇತನ ಸಮಾನತೆ ಮತ್ತು ಬಂದೂಕು ಹಕ್ಕು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು. ಈ ವೇಳೆ ತನ್ನ 22 ವರ್ಷಗಳ ವೃತ್ತಿಜೀವನದಲ್ಲಿ ಈ ವರ್ಷ ನಾನು ಮೊದಲ ಬಾರಿಗೆ ಪುರುಷ ಸಹ-ನಟನೊಂದಿಗಿನ ಕೆಲಸದಲ್ಲಿ ಸಮಾನ ವೇತನವನ್ನು ಪಡೆದಿದ್ದೇನೆ ಎಂದು ಪ್ರಿಯಾಂಕಾ ಬಹಿರಂಗಪಡಿಸಿದರು.

ಈ ವಿಶೇಷ ಸಂವಾದದ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ವೈಟ್ ಹೌಸ್‌ನ ಚಿತ್ರಗಳನ್ನು ಹಂಚಿಕೊಂಡರೆ, ಅವರ ಪತಿ ಗಾಯಕ ನಿಕ್ ಜೋನಾಸ್ ನ್ಯೂಯಾರ್ಕ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅಮೆರಿಕಾದ ಉಪಾಧ್ಯಕ್ಷೆಯನ್ನು ಸಂದರ್ಶಿಸಿರುವ ವಿಚಾರವನ್ನು ಬಹಿರಂಗಪಡಿಸಿದರು.

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪನ್ನು ಪ್ರಿಯಾಂಕಾ ಚೋಪ್ರಾ ಶ್ಲಾಘಿಸಿದ್ದಾರೆ. ಗರ್ಭಪಾತದ ಆಯ್ಕೆಯನ್ನು ಮಹಿಳೆಯರ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಜತೆಗೆ ಅವಿವಾಹಿತ ಮತ್ತು ಅಪ್ರಾಪ್ತ ಹೆಣ್ಣುಕ್ಕಳು ಕೂಡ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಹೇಳಿತ್ತು. ಇದರ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿರುವ ಪ್ರಿಯಾಂಕ, "ಮಹಿಳೆಯ ತಮ್ಮ ಇಚ್ಚೆಯಂತೆ ಆಯ್ಕೆ ಮಾಡಿಕೊಳ್ಳುವುದು ಅವರ ಹಕ್ಕಾಗಿದೆ. ಜಗತ್ತಿನಾದ್ಯಂತ ಮಹಿಳಾ ಹಕ್ಕುಗಳು ಇದೇ ರೀತಿ ಇರಬೇಕು. ಇದೊಂದೇ ಅಭಿವೃದ್ಧಿ ಪತದತ್ತ ಸಾಗಲು ಸಹಕಾರಿ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾಸಗಿ ಜೆಟ್‌ನಲ್ಲಿ ಪತಿ ಬರ್ತ್‌ಡೇ ಆಚರಿಸಿದ ಪ್ರಿಯಾಂಕಾ ಚೋಪ್ರಾ!

ಪ್ರಿಯಾಂಕಾ ಚೋಪ್ರಾ ತನ್ನ ಅಮೇರಿಕನ್ ಟಿವಿ ಶೋ ಕ್ವಾಂಟಿಕೋ ನಂತರ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದರು. ಅಲ್ಲಿಂದ ಪ್ರಿಯಾಂಕಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಂದಿಗೂ ಅಷ್ಟೆ ಬೇಡಿಕೆ ಉಳಿಸಿಕೊಂಡಿದ್ದಾರೆ. ಸದ್ಯ ಪ್ರಿಯಾಂಕಾ  ಹಲವಾರು ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ರುಸ್ಸೋ ಬ್ರದರ್ಸ್ ನಿರ್ಮಿಸಿರುವ ಪ್ರೈಮ್ ವಿಡಿಯೋದ ಸಿಟಾಡೆಲ್‌ನೊಂದಿಗೆ ಪ್ರಿಯಾಂಕಾ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಇದರ ಜೊತೆಗೆ ಪಿಗ್ಗಿ ಅಭಿನಯದ ಎಂಡಿಂಗ್ ಥಿಂಗ್ಸ್ ಮತ್ತು ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ ಸೇರಿದಂತೆ ಹಲವು ​ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. 

ನಮ್ಮ ಜಗತ್ತಿನಲ್ಲಿ ಎಲ್ಲವೂ ಸರಿಯಾಗಿಲ್ಲ: ವಿಶ್ವಸಂಸ್ಥೆಯಲ್ಲಿ Priyanka Chopra ಮಾತು

ಸದ್ಯ ಪ್ರಿಯಾಂಕಾ ಬಾಲಿವುಡ್‌ನಿಂದ ದೂರ ಇದ್ದಾರೆ. ಮದುವೆ ಬಳಿಕ ಅಮೆರಿಕಾದಲ್ಲಿ ನೆಲೆಸಿರುವ ಪ್ರಿಯಾಂಕಾ ಬಾಲಿವುಡ್ ನಲ್ಲಿ ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಕೊನೆಯದಾಗಿ ಪ್ರಿಯಾಂಕಾ ದಿ ವೈಟ್ ಟೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮತ್ತೆ ಯಾವಾಗ ಹಿಂದಿ ಸಿನಿಮಾ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾ ಜೊತೆಗೆ ಪ್ರಿಯಾಂಕಾ ತನ್ನ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಜೊತೆ ಸಮಯ ಕಳೆಯುವ ಜೊತೆಗೆ ಪ್ರಿಯಾಂತಾ ಸಿನಿಮಾ ಕೆಲಸಗಳಲ್ಲೂ ನಿರತರಾಗಿದ್ದಾರೆ. ಮತ್ತೆ ಭಾರತಕ್ಕೆ ಯಾವಾಗ ಬರ್ತಾರೆ, ಹಿಂದಿ ಸಿನಿಮಾ ಯಾವಾಗ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.

Follow Us:
Download App:
  • android
  • ios