ಪ್ರಿಯಾಂಕ ಚೋಪ್ರಾ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ತಾನು ತನ್ನ ಮೂವತ್ತನೇ ವಯಸ್ಸಿಂದಲೇ ಅಂಡಾಣು ಸಂಗ್ರಹಿಸಿಡುತ್ತ ಬಂದಿದ್ದೆ ಎಂದಿದ್ದಾರೆ. ಇದರ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 

ಪ್ರಿಯಾಂಕಾ ಚೋಪ್ರಾ ವಿಶ್ವಮಟ್ಟದ ಜನಪ್ರಿಯ ನಟಿ. ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಮಿಂಚುತ್ತಿದ್ದ ಈಕೆ ಇದೀಗ ಹಾಲಿವುಡ್‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ತನಗಿಂತ ಹತ್ತು ವರ್ಷ ಚಿಕ್ಕವರಾದ ನಿಕ್ ಜೋನಸ್ ಅವರನ್ನು ಮದುವೆ ಆದಾಗ ಬಹಳ ಮಂದಿ ಹುಬ್ಬೇರಿಸಿದ್ದರು. ಹೆಚ್ಚಿನವರು ಈ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿದ್ದರು. ಕೆಲವರಂತೂ ಇವರ ದಾಂಪತ್ಯ ಒಂದು ವರ್ಷ ನಿಂತರೆ ಹೆಚ್ಚು ಅನ್ನುವ ಅರ್ಥದಲ್ಲಿ ಮಾತನಾಡಿದರು. ಆದರೆ ಮದುವೆ ಆಗಿ ಇಷ್ಟು ಕಾಲವಾದರೂ ಇವರಿಬ್ಬರ ನಡುವಿನ ಬಾಂಧವ್ಯ ಚೆನ್ನಾಗಿಯೇ ಇದೆ. ಈ ನಂಟನ್ನು ಇನ್ನಷ್ಟು ಬಿಗಿ ಮಾಡೋದಕ್ಕೆ ಮಗಳು ಮಾಲ್ತಿ ಬಂದಿದ್ದಾಳೆ. ಆದರೆ ನಿಕ್ ಮತ್ತ ಪ್ರಿಯಾಂಕಾ ಈ ಮಗುವನ್ನು ಸಹಜವಾಗಿ ಪಡೆದಿಲ್ಲ. ಸೊರೊಗೆಸಿ ಮೂಲಕ ತಮ್ಮ ಮಗು ಪಡೆದಿದ್ದಾರೆ. ಇವರು ಯಾವಾಗ ಬಾಡಿಗೆ ಗರ್ಭದ ಮೂಲಕ ಮಗು ಪಡೆದರೋ ಆಗ ಅವರ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ‘ಪ್ರಿಯಾಂಕಾ ಚೋಪ್ರಾ ಅವರಿಗೆ ಮಗು ಹೇರೋಕೆ ಏನು ಸಮಸ್ಯೆ’ ಎಂದು ಕೇಳಿದ್ದರು. ಈ ಬಗ್ಗೆ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದಾರೆ. ನಿಜಕ್ಕೂ ಸಮಸ್ಯೆ ಇರೋದಕ್ಕೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದರಂತೆ. ಅಷ್ಟಕ್ಕೂ ಅವರ್ಯಾಕೆ ಇಂಥಾ ನಿರ್ಧಾರಕ್ಕೆ ಬಂದರು?

ಎಲ್ಲರಿಗೂ ಗೊತ್ತಿರೋ ಹಾಗೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಗೈನಕಾಲಜಿಸ್ಟ್. ಪ್ರಸೂತಿ ತಜ್ಞೆಯಾಗಿ ಅನೇಕ ವರ್ಷಗಳಿಂದ ಕೆಲಸ ಮಾಡ್ತಿದ್ದಾರೆ. ಆಕೆ ತನ್ನ ಮಗಳ ಆರೋಗ್ಯದ ಬಗ್ಗೆಯೂ ಸಾಕಷ್ಟು ಚಿಂತಿಸಿದ್ದರು. ಪ್ರಿಯಾಂಕಾಗೆ ಇರುವ ಸ್ಟ್ರೆಸ್ ಡಿಸಾರ್ಡರ್ ಬಗ್ಗೆ ಅವರ ತಾಯಿಗೆ ತಿಳಿದಿತ್ತು. ಇಂಥಾ ಸಮಸ್ಯೆಯಲ್ಲಿ ಗರ್ಭ ಕಟ್ಟಿದರೂ ಅಬಾರ್ಶನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕೆ ಇಂಥಾ ಸಮಸ್ಯೆ ಇದ್ದಾಗ ಹೆಚ್ಚಿನವರು ಐವಿಎಫ್ ಮೂಲಕ ಮಗು ಪಡೆಯೋದುಂಟು. ಇನ್ನೂ ಸೌಕರ್ಯ ಇದ್ದವರು ಸೊರೊಗೆಸಿ ಅಂದರೆ ಬಾಡಿಗೆ ಗರ್ಭದ ಮೊರೆ ಹೋಗ್ತಾರೆ.

ಉರ್ಫಿ ರೀತಿ ಮೈ ತೋರಿಸಿಕೊಂಡು ಓಡಾಡೋಕೆ ಧೈರ್ಯ ಇಲ್ಲ: ಟಾಂಗ್ ಕೊಟ್ಟ ಕರೀನಾ ಕಪೂರ್

ಪ್ರಿಯಾಂಕಾ ಚೋಪ್ರಾಗೆ ಮೂವತ್ತು ವರ್ಷ ಆಗುತ್ತಿದ್ದಂತೇ ಅವರ ಈ ಸಮಸ್ಯೆಯ ಬಗ್ಗೆ ತಿಳಿದಿದ್ದ ಅವರ ತಾಯಿ ಒಂದು ಸಲಹೆ ನೀಡಿದ್ದಾರೆ. ಹೌದು, ಮಧು ಚೋಪ್ರಾ ತನ್ನ ಮಗಳು ಪ್ರಿಯಾಂಕಾಗೆ ಆಕೆಯ ಅಂಡಾಣು ಸಂಗ್ರಹಿಡುವಂತೆ ಸಲಹೆ ನೀಡಿದ್ದಾರೆ. ‘ನನಗೆ ಮನೆಯಲ್ಲಿ ಎಲ್ಲ ಕೆಲಸಗಳಿಗೂ ಸಂಪೂರ್ಣ ಸ್ವಾತಂತ್ರ್ಯ(Freedom) ಸಿಕ್ಕಿತ್ತು. ನನಗೆ ಸಾಧನೆ ಮಾಡಬೇಕಿತ್ತು. ನನ್ನ ವೃತ್ತಿಜೀವನದಲ್ಲಿ ಎತ್ತರಕ್ಕೆ ಬೆಳೆಯಬೇಕಿತ್ತು. ಆಗ ನನಗೆ ಒತ್ತಡದ ಸಮಸ್ಯೆ ಇತ್ತು. ನನ್ನ ತಾಯಿ ಅಂಡಾಣು ಶೇಖರಿಸಿ ಇಡುವಂತೆ ಸೂಚಿಸಿದರು’ ಎಂದು ಪ್ರಿಯಾಂಕಾ ಚೋಪ್ರಾ ತನ್ನ ಸಿಟಾಡೆಲ್ ವೆಬ್ ಸೀರೀಸ್‌ನ(Web series) ಪ್ರಚಾರದ ವೇಳೆ ನೀಡಿದ ಸಂದರ್ಶನವೊಂದರಲ್ಲಿ ಈ ವಿಚಾರ ಹೇಳಿಕೊಂಡಿದ್ದಾರೆ.

'ನನಗೆ ಮದುವೆಯಾದ ಕೂಡಲೇ ಮಗು ಮಾಡಿಕೊಳ್ಳುವ ಆಸೆ ಇತ್ತು. ಆದರೆ ನಿಕ್ ಮನಸ್ಥಿತಿ ಹೇಗೆ ಅಂತ ಗೊತ್ತಿರಲಿಲ್ಲ. ಅವರಿಗಿದು ಇಷ್ಟವಾಗದಿದ್ದರೆ ಅನ್ನೋ ಕಾರಣಕ್ಕೆ ನಿಕ್ ಜೊತೆ ಡೇಟ್(Date) ಮಾಡೋಕೆ ಹಿಂಜರಿದೆ. 25ನೇ ವಯಸ್ಸಿಗೆ ತಂದೆ ಆಗೋಕೆ ನಿಕ್ ಸಿದ್ಧರಿರುತ್ತಾರೋ ಅಥವಾ ಇಲ್ಲವೋ ಎನ್ನುವ ಭಯ(Fear) ನನ್ನನ್ನು ಕಾಡಿತು. ಆದರೆ ನಿಕ್ ಇದಕ್ಕೆ ಪಾಸಿಟಿವ್ ಆಗಿ ಸ್ಪಂದಿಸಿದ. ಹೀಗಾಗಿ ಮಗಳು ನಮ್ಮಿಬ್ಬರ ಬದುಕಿನಲ್ಲಿ ಬಂದಳು. ಈಗ ಬದುಕು ಇನ್ನಷ್ಟು ಕಲರ್‌ಫುಲ್ ಆಗಿದೆ' ಎಂದು ಪ್ರಿಯಾಂಕಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರಿಯಾಂಕಾ ಅವರ ಈ ಮಾತು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಹುಟ್ಟು ಹಾಕಿದೆ. ಅನೇಕರು ಅನೇಕ ಬಗೆಯಲ್ಲಿ ಕಮೆಂಟ್ ಮಾಡ್ತಿದ್ದಾರೆ. ಇನ್ನೊಂದೆಡೆ ಅವರ ಹೊಸ ವೆಬ್‌ ಸೀರಿಸ್ ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

ಸಂಭಾವನೆಗಾಗಿ ಭಿಕ್ಷೆ ಬೇಡಬಾರದು; ನಟಿ ಸಮಂತಾ