ಚಿನ್ನದಲ್ಲಿಯೇ ಮಿಂದೆದ್ದಿದ್ದ ಪ್ರಿಯಾಂಕಾ ಚೋಪ್ರಾ; ವಿಡಿಯೋ ವೈರಲ್
ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಚಿನ್ನದ ಬ್ರ್ಯಾಂಡ್‌ನ ಹಳೆಯ ಜಾಹೀರಾತು (Jewellery brand commercial) ಈಗ ಮತ್ತೆ ವೈರಲ್ ಆಗಿದೆ. ಈ ಜಾಹೀರಾತುಗಳಲ್ಲಿ ಪ್ರಿಯಾಂಕಾ ಮೈ ತುಂಬಾ ಆಭರಣಗಳನ್ನ ಹಾಕಿಕೊಂಡು ಚಿನ್ನದಲ್ಲೇ ಮಿಂದೆದಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಚಿನ್ನದ ಬ್ರ್ಯಾಂಡ್‌ನ ಹಳೆಯ ಜಾಹೀರಾತು (Jewellery brand commercial) ಈಗ ಮತ್ತೆ ವೈರಲ್ ಆಗಿದೆ. ಈ ಜಾಹೀರಾತುಗಳಲ್ಲಿ ಪ್ರಿಯಾಂಕಾ ಮೈ ತುಂಬಾ ಆಭರಣಗಳನ್ನ ಹಾಕಿಕೊಂಡು ಚಿನ್ನದಲ್ಲೇ ಮಿಂದೆದಿದ್ದಾರೆ.
ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಪ್ರಿಯಾಂಕಾ ಚೋಪ್ರಾ ಅನೇಕ ಜಾಹೀರಾತಿನಲ್ಲಿ ಮಿಂಚಿದ್ದಾರೆ. ಅದರಲ್ಲಿ ಚಿನ್ನದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದು ಪ್ರಮುಖವಾದುದು. ಪ್ರಿಯಾಂಕಾ ಚೋಪ್ರಾ ಬಲ್ಗೇರಿ ಇಂಟರ್‌ನ್ಯಾಷನಲ್ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸ್ಟಾರ್ಸ್ ಅನ್ನಾ ಹಾಥ್‌ವೇ ಮತ್ತು ಲಿಸಾ ಅವರೊಂದಿಗೆ ಹೊಸ ಚಿನ್ನದ ಬ್ರ್ಯಾಂಡ್‌ಗಳ ಚಿತ್ರೀಕರಣದಲ್ಲಿ ತೊಡಗಿದ್ದರು.
ಸದ್ಯ ವೈರಲ್ ಆಗಿರುವ ಹಳೆಯ ಜಾಹೀರಾತಿನಲ್ಲಿ ಪ್ರಿಯಾಂಕಾ ಹಳದಿ ವಸ್ತ್ರದಲ್ಲಿ ಓಡಿ ಚಿನ್ನದಂಗಡಿಗೆ ಒಳಗೆ ಹೋಗುವುದನ್ನು ಗಮನಿಸಬಹುದು. ತನಗಿಷ್ಟದ ಆಭರಣಗಳನ್ನು ತೋರಿಸಲು ಹೇಳುವ ವೀಡಿಯೋವನ್ನು ನೋಡುತ್ತೇವೆ. ಈ ಜಾಹೀರಾತನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಪ್ರಿಯಾಂಕಾ ಅವರ ಅಭಿಮಾನಿಗಳು ಜಾಹೀರಾತನ್ನು ನೋಡಿ ತಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಕಾಮೆಂಟ್‌ಗಳ ವಿಭಾಗದಲ್ಲಿ ಬರೆದಿದ್ದಾರೆ. ಪ್ರಿಯಾಂಕಾ ಹೆಸರು ಮತ್ತು ಬ್ರ್ಯಾಂಡ್ ನಡುವೆ ಹೋಲಿಕೆಯನ್ನು ಚಿತ್ರಿಸಿದ ಅಭಿಮಾನಿಯೊಬ್ಬರು ಇದು ಪಿಸಿ ಜ್ಯುವೆಲರ್ಸ್ ಅವರ ಜಾಹೀರಾತು ಅಲ್ಲಿ ಇರುವ ಗ್ರಾಫಿಕ್ಸ್ ಗಳು 1970 ರಲ್ಲಿ ಇದ್ದಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ.
ಕಳೆದ ತಿಂಗಳು ಪ್ಯಾರಿಸ್‌ನಲ್ಲಿ ನಡೆದ ಬಲ್ಗೇರಿ ಹೈ ಜ್ಯುವೆಲರಿ ಗಾಲಾ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮತ್ತು ಇತರ ಬ್ರ್ಯಾಂಡ್ ಅಂಬಾಸಿಡರ್‌ಗಳಾದ ಅನ್ನಾ ಹಾಥ್ ವೇ ಮತ್ತು ಬ್ಲ್ಯಾಕ್ ಪಿಂಕ್‌ನ ಲಿಸಾ ಅವರೊಂದಿಗೆ ಈವೆಂಟ್‌ನಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ಆಭರಣಗಳನ್ನು ಧರಿಸಿದ್ದರು, ನಂತರ ಅವರೆಲ್ಲರೂ ಸೇರಿ ತೆಗೆದುಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.
ಮತ್ತೆ ಬಿಕಿನಿಯಲ್ಲಿ ಮಿಂಚಿದ ಪ್ರಿಯಾಂಕಾ; ನಿಕ್ ಜೋನಸ್ ಜೊತೆ ಬೀಚ್‌ನಲ್ಲಿ ಮಸ್ತ್ ಮಜಾ
ಪ್ರಿಯಾಂಕಾ ಚೋಪ್ರಾ ಸದ್ಯಕ್ಕೆ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಅವರೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾರೆ. ಪ್ರಿಯಾಂಕಾ ನ್ಯೂಯಾರ್ಕ್‌ನಲ್ಲಿ ತನ್ನದೇ ಆದ ಸ್ವಂತ ಮಾಲೀಕತ್ವದ ರೆಸ್ಟೋರೆಂಟ್ ಅನ್ನು ಹೊಂದಿದ್ದಾರೆ. ಇತ್ತೀಚೆಗೆ ತನ್ನ ಹೋಮ್‌ವೇರ್ ಲೈನ್ ಮತ್ತು ತನ್ನದೇ ಆದ ಹೇರ್‌ಕೇರ್ ಬ್ರಾಂಡ್ ಅನ್ನು ಸಹ ಪ್ರಾರಂಭಿಸಿದ್ದಾರೆ.
ನಿಕ್ ಜೋನಸ್ ಕೈಯಲ್ಲಿ ಮಾಲ್ತಿ; ಮಗಳ ಮುದ್ದಾದ ಫೋಟೋ ಹಂಚಿಕೊಂಡ ಪ್ರಿಯಾಂಕಾ
ಪ್ರಿಯಾಂಕಾ ತನ್ನ ಮೊದಲನೆಯ ವೆಬ್ ಸೀರಿಸ್ ಸಿಟಾಡೆಲ್‌ನ ಶೂಟಿಂಗ್ ಅನ್ನು ಮುಗಿಸಿ, ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ ಮತ್ತು ಎಂಡಿಂಗ್ ಥಿಂಗ್ಸ್ ಇನ್ ಹರ್ ಕಿಟ್ಟಿ ಎಂಬ ಎರಡು ಚಲನಚಿತ್ರಗಳಿವೆ. ತದನಂತರ ಬಾಲಿವುಡ್ ನ ಮುಂದಿನ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಜೊತೆ ನಟಿಸುತ್ತಿದ್ದಾರೆ.