ಕರಣ್ ಜೋಹಾರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಕಾರ್ಯಕ್ರಮವು ಗಾಸಿಪ್‌ಗಳಿಂದಾಗಿ ವಿವಾದಾತ್ಮಕವಾಗಿದೆ. ಕರೀನಾ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ನಡುವಿನ ಸಂಭಾಷಣೆಯೊಂದು ವೈರಲ್ ಆಗಿದೆ. ಕರೀನಾಳ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ತೀಕ್ಷ್ಣವಾಗಿ ಉತ್ತರಿಸಿದ್ದಾರೆ. ಕರಣ್ ಈ ರೀತಿಯ ಪ್ರಶ್ನೆಗಳನ್ನು ಕೇಳುವುದರಿಂದ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದು ಸೆಲೆಬ್ರಿಟಿಗಳ ಹೆಸರಿಗೆ ಹಾನಿಯುಂಟುಮಾಡುತ್ತದೆ ಎಂದು ಟೀಕಿಸಲಾಗಿದೆ.

ಹಿಂದಿ ಕಿರುತೆರೆ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕಾಫಿ ವಿತ್ ಕರಣ್. ಸುಮಾರು ಸೀಸನ್‌ಗಳು ಕಳೆದವು ಬಂದ ಸೆಲೆಬ್ರಿಟಿಗಳೇ ಹೊಸ ಗಾಸಿಪ್‌ನೊಟ್ಟಿಗೆ ಎಂಟ್ರಿ ಕೊಟ್ಟರು. ಗಾಸಿಪ್ ಇಲ್ಲದಿದ್ದರೂ ಗಾಸಿಪ್ ಕ್ರಿಯೇಟ್ ಮಾಡುವ ಕಾರ್ಯಕ್ರಮವೇ ಈ ಕರಣ್ ಜೋಹಾರ್ ನಡೆಸುವುದು ಹೀಗಾಗಿ ಬಹುತೇಕರು ಶೋ ಅಂದ್ರೆ ಓಡಿ ಹೋಗುತ್ತಾರೆ. ಹೇಗೋ ಮಾಡಿ ಒಂದು ಸೀಸನ್ ಮುಗಿಸಿ ಬಿಡುತ್ತಾರೆ. ಟಿಆರ್‌ಪಿಯಿಂದ ಕರಣ್‌ ಮತ್ತು ವಾಹಿನಿಗೆ ಹಣ ಬರಬಹುದು ಆದರೆ ಸೆಲೆಬ್ರಿಟಿಗಳ ಹೆಸರು 80% ಡ್ಯಾಮೆಜ್ ಆಗುತ್ತದೆ. ಹೀಗಂತ ನಾವ್ ಹೇಳ್ತಿಲ್ಲ ಈ ಹಿಂದೆ ಭಾಗಿಯಾಗಿರುವ ಸೆಲೆಬ್ರಿಟಿಗಳೇ ಹೇಳಿರುವುದು. 

ಯಾವುದೋ ಹಳೆ ಸೀಸನ್‌ನಲ್ಲಿ ನಟಿ ಕರೀನಾ ಕಪೂರ್ ಆಗಮಿಸಿದ್ದಾಗ 'ನೀವು ಪ್ರಿಯಾಂಕಾ ಚೋಪ್ರಾ ಸಂದರ್ಶನ ಮಾಡುವುದಾದರೆ ಯಾವ ಪ್ರಶ್ನೆ ಕೇಳಲು ಇಷ್ಟ ಪಡುತ್ತೀರಾ?' ಎಂದು ಕರಣ್ ಕೇಳುತ್ತಾರೆ. 'ನಿಮಗೆ ಎಲ್ಲಿಂದ ಈ ಸ್ಟೈಲ್‌ನಲ್ಲಿ ಮಾತನಾಡುವುದು ಕಲಿತಿದ್ದು?'ಎಂದು ಪ್ರಶ್ನೆ ಮಾಡುತ್ತೀನಿ ಅಂತಾರೆ ಕರೀನಾ. ಇದನ್ನು ಇಲ್ಲಿದೆ ನಿಲ್ಲಿಸಲಿಲ್ಲ....ಮುಂದೊಂದು ದಿನ ಪ್ರಿಯಾಂಕಾ ಚೋಪ್ರಾ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಕರಣ್ ಮತ್ತೆ ಈ ವಿಚಾರವನ್ನು ತೆಗೆಯುತ್ತಾರೆ. ಹಿಂದಿ ಚಿತ್ರರಂಗ ಜನಪ್ರಿಯ ನಾಯಕಿ ಕರೀನಾ ಕಪೂರ್ ನಿಮಗೊಂದು ಪ್ರಶ್ನೆ ಕೇಳಿದ್ದಾರೆ ಅದುವೇ ನಿಮಗೆ ಈ ಮಾತನಾಡುವ ಸ್ಟೈಲ್ ಎಲ್ಲಿಂದ ಬಂತು ಎಂದು. ಆಗ ಒಂದು ನಿಮಿಷವೂ ಯೋವನೆ ಮಾಡದ ಪ್ರಿಯಾಂಕಾ 'ಆಕೆಯ ಬಾಯ್‌ಫ್ರೆಂಡ್‌ ಎಲ್ಲಿಂದ ಮಾತನಾಡುವುದು ಕಲಿತನೋ ಅಲ್ಲಿಂದಲೇ ನಾನು ಕಲಿತಿದ್ದು' ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೆಣ್ಣು ಮಗುವಿಗೆ ತಂದೆಯಾದ 'ಆಪರೇಷನ್ ಅಲಮೇಲಮ್ಮ' ನಟ ರಿಷಿ!

ಕರೀನಾ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಡೇಟ್ ಮಾಡುತ್ತಿದ್ದ ನಟರಲ್ಲಿ ಕೆಲವರು ತುಂಬಾನೇ ಕಾಮ್ ಆಗಿದ್ದಾರೆ. ಬಹಿರಂಗವಾಗಿ ಗೊತ್ತಿರುವುದು ಶಾಹಿದ್ ಕಪೂರ್. ಈ ಸಂದರ್ಶನ ನಡೆದಾಗ ಕರೀನಾ ಕಪೂರ್ ಇನ್ನೂ ಮದುವೆ ಆಗಿರಲಿಲ್ಲ ಹೀಗಾಗಿ ಬಾಯ್‌ಫ್ರೆಂಡ್ ಅಂದ್ರೆ ಶಾಹಿದ್ ಇರಲೇಬೇಕು. ಇನ್ನೂ ಈ ರೀತಿ ಪ್ರಶ್ನೆ ಕೇಳಿ ತಂದಿಟ್ಟು ಕೊಡುವುದರಲ್ಲಿ ಕರಣ್ ಫೇಮಸ್ ಆತ ನಿರ್ದೇಶಕ ಅಥವಾ ನಿರ್ಮಾಪಕನಾಗಬಾರದು ಇಂಡಸ್ಟ್ರಿಗೆ ಶಕುನಿ ಮಾಮ ಆಗಬೇಕು ಎಂದು ನೆಟ್ಟಿಗರು ತೀರಾ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಕರಣ್ ಈ ರೀತಿ ಮಾಡುತ್ತಾರೆ ಅಂತಲೇ ಶೋ ನಿಲ್ಲಿಸಬೇಕು ಎಂದು ವೀಕ್ಷಕರು ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡ ಆಕ್ರೋಶ ಹೊರ ಹಾಕಿದ್ದರು. 

ಮದುವೆ ಅನ್ನೋದು ಸುಲಭವಲ್ಲ, ಪಾಪ ನನ್ನ ಮಗಳಿಗೆ ಇನ್ನೂ ಮಾತನಾಡಲು ಬರುವುದಿಲ್ಲ: ಉಪಾಸನಾ ಕೊನಿಡೆಲಾ

Priyanka Chopra savage reply to Kareena 😂 #kareenakapoorkhan #priyankachopra #bollywood