ಹೆಣ್ಣು ಮಗುವಿಗೆ ತಂದೆಯಾದ 'ಆಪರೇಷನ್ ಅಲಮೇಲಮ್ಮ' ನಟ ರಿಷಿ!
ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡ ನಟ ರಿಷಿ. ಮುದ್ದು ಗೊಂಬೆ ಮುಖ ರಿವೀಲ್ ಮಾಡಿ ಎಂದ ನೆಟ್ಟಿಗರು.

2017ರಲ್ಲಿ ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪಾದಾರ್ಪಣೆ ಮಾಡಿದವರು ರಿಷಿ. ವಿಭಿನ್ನ ಕತೆಗಳ ಮೂಲಕ ಜನರನ್ನು ಮನೋರಂಜಿಸುತ್ತಿದ್ದಾರೆ.
ಈಗ ರಿಷಿ ಜೀವನದಲ್ಲಿ ಖುಷಿ ಮನೆಮಾಡಿದೆ. ಏಪ್ರಿಲ್ 8, 2025ರಂದು ಮುದ್ದಾದ ಹೆಣ್ಣು ಮಗಳಿಗೆ ತಂದೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರೆಗ್ನೆನ್ಸಿ ಶೂಟ್ ಹಂಚಿಕೊಂಡಿದ್ದಾರೆ.
'ಈ ಫೋಟೋಗಳನ್ನು ನೋಡಿದಾಗ ಮಗುವಿನ ಕಿಕ್ ನೆನಪಾಗುತ್ತದೆ ಈಗ ಮಗಳು ನಮ್ಮ ಕೈ ಸೇರಿದ್ದಾಳೆ. ಈ ಜರ್ನಿಯನ್ನು ಅನುಭವಿಸುವ ಪ್ರತಿಯೊಬ್ಬ ಹೆಣ್ಣಿಗೂ ನನ್ನ ಕಡೆಯಿಂದ ದೊಡ್ಡ ಗೌರವ'
'ಈ ಜರ್ನಿ ಸುಲಭವಲ್ಲ ಆದರೆ ನಿಮ್ಮ ಶಕ್ತಿ ಮೆಚ್ಚಬೇಕು. ಬೇರೆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ನಿಮ್ಮ ಪ್ರೀತಿ ಅಷ್ಟೇ ಮುಖ್ಯವಾಗುತ್ತದೆ'
'ಈ ಜರ್ನಿಯಲ್ಲಿ ನನ್ನ ಪತ್ನಿ ಸ್ವಾತಿಗೆ ಮತ್ತಷ್ಟು ಕ್ಲೋಸ್ ಆಗಿದ್ದೀನಿ. ಈ ಪ್ರೆಗ್ನೆನ್ಸಿ ಶೂಟ್ ಜೀವನದಲ್ಲಿ ಮರೆಯುವುದಿಲ್ಲ. ನಮ್ಮ ಮನೆಗೆ ಮಗಳು ಬಂದಿದ್ದಾಳೆ' ಎಂದು ರಿಷಿ ಬರೆದುಕೊಂಡಿದ್ದಾರೆ.
2019ರಲ್ಲಿ ನಟ ರಿಷಿ ಮತ್ತು ಸ್ವಾತಿ ಚೆನ್ನೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದ 5 ವರ್ಷದ ಬಳಿ ಕುಟುಂಬಕ್ಕೆ ಮತ್ತೊಬ್ಬ ವ್ಯಕ್ತಿಯನ್ನು ಬರ ಮಾಡಿಕೊಂಡಿದ್ದಾರೆ.
ಮೂಲತಃ ಮೈಸೂರಿನವರಾದ ಇಂಜಿನಿಯರಿಂಗ್ ಪದವೀಧರ ರಿಷಿ. ಸ್ವಾತಿ ಪರಶುರಾಮನ್ ಕೂಡ ಇಂಜಿನಿಯರಿಂಗ್ ಮಾಡಿದ್ದಾರೆ. ಆದರೆ ಸ್ವಾತಿ ಬರಹಗಾರ್ತಿ ಕೂಡ ಹೌದು.