Asianet Suvarna News Asianet Suvarna News

ನನ್ನ ಗಂಡ ಐಸಿಸ್​ ಅಲ್ಲ, ಮಕ್ಕಳೇನು ಜಿಹಾದಿಗಳಾಗಲ್ಲ... ನಟಿ ಪ್ರಿಯಾಮಣಿ ಗರಂ ಗರಂ

ನಟಿ ಪ್ರಿಯಾಮಣಿ ಉದ್ಯಮಿ ಮುಸ್ತಫಾ ಅವರನ್ನು ಮದುವೆಯಾಗಿರುವ ಬಗ್ಗೆ ಮಾಡಲಾಗುತ್ತಿರುವ ಟ್ರೋಲ್​ಗಳ ಬಗ್ಗೆ ಗರಂ ಆಗಿದ್ದಾರೆ. 
 

Priyamani Reacts On Trolls On Her Marriage With Musthafa suc
Author
First Published Jun 28, 2023, 4:39 PM IST

ಹಲವರು ನಟಿಯರು ಮುಸ್ಲಿಂ ಯುವಕರನ್ನು ಮದ್ವೆಯಾಗುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ. ಅದೇ ರೀತಿ ನಟಿ ಪ್ರಿಯಾಮಣಿ ಕೂಡ 2017ರಲ್ಲಿ ಉದ್ಯಮಿ  ಮುಸ್ತಫಾ ರಾಜ್ (Mustafa Raj) ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿ ಸುಖ ಸಂಸಾರ ನಡೆಸುತ್ತಿದ್ದರೂ ಇವರಿಬ್ಬರ ಮದುವೆ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಉದ್ಯಮಿ ಮುಸ್ತಫಾ ರಾಜ್ ಅವರು ಮೊದಲ ಪತ್ನಿ ಆಯೆಷಾಗೆ ವಿಚ್ಛೇದನ ನೀಡದೆ ಪ್ರಿಯಾಮಣಿ ಮದುವೆಯಾಗಿದ್ದಾರೆ. ಹೀಗಾಗಿ ಅವರಿಬ್ಬರ ಮದುವೆ ಅಸಿಂಧು ಎಂದು ಆರೋಪಿಸಿ ಆಯೆಷಾ, ಮುಸ್ತಫಾ ಹಾಗೂ ಪ್ರಿಯಾಮಣಿ ವಿರುದ್ಧ ದೂರು ನೀಡಿದ್ದರು. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಇದಾದ ಬಳಿಕ ಪ್ರಿಯಾಮಣಿ ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆ ಈಕೆಯನ್ನು ಸುತ್ತುವರಿಯುತ್ತಿರುತ್ತದೆ. ಈ ನಡುವೆಯೇ ದಂಪತಿ ಡಿವೋರ್ಸ್​ ಆಗುತ್ತಿದ್ದಾರೆ ಎನ್ನುವ ಸುದ್ದಿಯೂ ಸಕತ್​ ಸುದ್ದಿ ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ನಟಿ, ನನ್ನ ಹಾಗೂ ಮುಸ್ತಫಾ ರಾಜ್ ಸಂಬಂಧ ಭದ್ರತೆಯಿಂದ ಕೂಡಿದೆ. ಅವರು ಅಮೆರಿಕದಲ್ಲಿರುತ್ತಾರೆ.  ನಾವಿಬ್ಬರೂ ದಿನಾಲೂ ಮಾತನಾಡಿಕೊಳ್ಳುತ್ತೇವೆ. ಕೆಲಸ ತುಂಬ ಇದ್ದಾಗ ಒಮ್ಮೊಮ್ಮೆ ಹಾಯ್, ಹೆಲೋ ಅಂತಲಾದರೂ ಮೆಸೇಜ್ ಮಾಡಿಕೊಳ್ಳುತ್ತೇವೆ" ಎಂದು ಪ್ರಿಯಾಮಣಿ ಹೇಳಿದ್ದರು.

ಮದುವೆಯಾಗಿ ಐದು ವರ್ಷ ಆಗುತ್ತಾ ಬಂದರೂ ದಂಪತಿ ನಡುವೆ ಏನೋ ಸರಿಯಿಲ್ಲ ಎನ್ನುವ ಮಾತು ಕೇಳಿ ಬರುತ್ತಲೇ ಇರುತ್ತದೆ. ಇದರಿಂದ ಗರಂ ಆಗಿರುವ ನಟಿ ಪ್ರಿಯಾಮಣಿ (Priyamani), ನಾನು ಪ್ರೀತಿಸಿ ಮದುವೆ ಆಗಿದ್ದು ತಪ್ಪಾ? ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ ಎಂದಿದ್ದಾರೆ. ನನ್ನನ್ನು ನೋಡಿ ದೇವತೆ ಹಾಗೆ, ಹೀಗೆ ಎನ್ನುತ್ತಾರೆ, ಆದರೆ ನಾನು ಪ್ರೀತಿಸಿದವರನ್ನು ಮದುವೆಯಾದರೆ ಟ್ರೋಲ್​ (Troll) ಮಾಡುತ್ತಾರೆ. ಇದು ನನಗೆ ತುಂಬಾ  ಬೇಸರವಾಗುತ್ತಿದೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

ರೀ ಶಾಕ್ ಆಗ್ಬೇಡಿ! ಇದು ಪಕ್ಕಾ ಪ್ರಿಯಾಮಣಿನೇ..ಸಣ್ಣ ಆಗಿದ್ದಾರೆ ಅಷ್ಟೆ

ನನ್ನ ಪತಿ ಮುಸ್ತಾಫಾ ರಾಜಾ ಬೇರೆ ಧರ್ಮದವರಾದರೆ (Religion) ಏನು? ಇದರಲ್ಲಿ ತಪ್ಪೇನಿದೆ?  ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ, ಎಲ್ಲರೂ ಲವ್ ಜಿಹಾದ್ (Love Jihad) ಮಾಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ ಎಂದಿರುವ ಪ್ರಿಯಾಮಣಿ,  ಹಿಂದೂ-ಮುಸ್ಲಿಂ ಭಾಯಿ ಭಾಯಿ ಅನ್ನೋದಿಲ್ವಾ, ಅದ್ಯಾಕೆ ಅರ್ಥವಾಗುವುದಿಲ್ಲ ಎಂದಿದ್ದಾರೆ.  ಭಾರತ ಜಾತ್ಯಾತೀತ ದೇಶ. ಹಿಂದೂ, ಮುಸ್ಲಿಂ, ಸಿಖ್ಖರು ಎಲ್ಲರೂ ಭಾಯಿ ಭಾಯಿ ಅಂತ ಅದಕ್ಕೇ ಹೇಳುವುದು. ಸುಮ್ಮನೇ ಮುಸ್ಲಿಂರನ್ನು ಮದ್ವೆಯಾದ ಮಾತ್ರಕ್ಕೆ ಹಾಗೆ ಹೀಗೆ ಹೇಳುವುದನ್ನು ನಿಲ್ಲಿಸಿ.  ಇದು ನನ್ನ ಜೀವನ. ನನಗೆ ಯಾರು ಬೇಕೋ ಅವರೊಟ್ಟಿಗೆ ನನ್ನ ಮುಂದಿನ ಜೀವನ ಕಳೆಯುತ್ತೇನೆ ಎಂದಿದ್ದಾರೆ. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿಹಾದ್ ಅಂತೆಲ್ಲಾ ಅಂದರು. ಹೀಗೆ ಹೇಳಲು ನಿಮಗೆ ಹೇಗೆ ಮನಸ್ಸು ಬರುತ್ತದೆ? ನನ್ನ ಮಕ್ಕಳೇನೂ ಜಿಹಾದಿಗಳಾಗಿ ಹುಟ್ಟುವುದಿಲ್ಲ ಎಂದಿದ್ದಾರೆ. 

 ಮದುವೆ ಆದಾಗ ಹೆಚ್ಚು ಟ್ರೋಲ್ (Troll) "ಟ್ರೋಲ್‌ಗಳ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳುವುದಿಲ್ಲ. ನಾವು ಅದಕ್ಕೆ ಹೆಚ್ಚು ಗಮನ ಕೊಟ್ಟು ಪ್ರತಿಕ್ರಿಯಿಸಿದರೆ ಮತ್ತಷ್ಟು ಹೆಚ್ಚಾಗುತ್ತದೆ. ಬಾಡಿ ಶೇಮಿಂಗ್ ಕೂಡ ಮಾಡಲಾಗುತ್ತಿದೆ. ಈ ಹಂತದಲ್ಲಿ ನಾನು ಸಣ್ಣ ಆಗಿದ್ದು ನೋಡಿ ಕೆಲವರು ಕಾಮೆಂಟ್ ಮಾಡ್ತಾರೆ. ಬರೀ ಬಾಡಿ ಶೇಮಿಂಗ್ ಅಲ್ಲ, ನಾನು ಮದುವೆ ಆದಾಗ ಬಹಳ ಟ್ರೋಲ್ ಮಾಡಿದ್ದರು. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿಹಾದ್ ಅಂತೆಲ್ಲಾ ಅಂದರು ಎಂದು ಪ್ರಿಯಾಮಣಿ ನೋವು ತೋಡಿಕೊಂಡಿದ್ದಾರೆ.

valentine's day spl: ಪ್ರಿಯಾಮಣಿಯ ಫಸ್ಟ್​ ಲವ್​ ಆಗಿದ್ರಾ ತರುಣ್​? ನಟಿ ಹೇಳಿದ್ದೇನು?
 
ಈ ಹಿಂದೆ ಸಣ್ಣಗಾದಾಗಲೂ ಟ್ರೋಲ್​ ಮಾಡಿದ್ದರ ಬಗ್ಗೆ ಪ್ರಿಯಾಮಣಿ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಬಾಡಿ ಶೇಮಿಂಗ್ (Body Shaming)​  ಮಾಡಿದರು.  ಕೋವಿಡ್ ನಂತರ ನಾನು ತೂಕ ಇಳಿಸಿಕೊಂಡಿದ್ದೇನೆ. ಆದರೆ ಹಲವರು ತುಂಬಾ ಸಣ್ಣಗಾಗಿದ್ದೇನೆ ಎಂದು ಬಾಡಿ ಶೇಮಿಂಗ್​ (Body shaming) ಮಾಡಿದರು. ಕೆಲವರು ಚೆನ್ನಾಗಿ ಕಾಣುವೆ ಎಂದರೂ ಅನೇಕ ಮಂದಿ ಕೆಟ್ಟದ್ದಾಗಿ ಮಾಡಿದರು. ಕೆಲವರು ಇನ್‌ಸ್ಟಾಗ್ರಾಂನಲ್ಲಿ ನೇರವಾಗಿ ಕಾಮೆಂಟ್ ಮಾಡ್ತಾರೆ. ಕೆಲವರು ಕೆಟ್ಟಾಗಿ ಕಾಮೆಂಟ್ ಮಾಡ್ತಾರೆ. ಅವ್ರು ಏನು ಹೇಳುತ್ತಾರೆ ಅನ್ನೋದನ್ನು ಹೇಳೋದಕ್ಕೆ ಸಾಧ್ಯವಿಲ್ಲ, ಅಷ್ಟು ಕೆಟ್ಟದಾಗಿ ಇರುತ್ತದೆ. ಕೆಲವರನ್ನು ಬ್ಲಾಕ್ ಮಾಡ್ತೀನಿ. ಕೆಲವೊಂದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

 ಅಂದಹಾಗೆ, ಪ್ರಿಯಾಮಣಿ ಸದ್ಯ ತಮಿಳಿನ 'ಕ್ವಾಂಟೇಷನ್ ಗ್ಯಾಂಗ್‌', ಕನ್ನಡದ 'ಕೈಮರ', ಬಾಲಿವುಡ್‌ 'ಮೈದಾನ್' ಹಾಗೂ 'ಜವಾನ್' ಸಿನಿಮಾಗಳಲ್ಲಿ ಪ್ರಿಯಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಗ್ಲಾಮರ್ ರೋಲ್‌ಗಳಿಂದ ದೂರಾಗಿ ನಟನೆಗೆ ಮಹತ್ವ ಇರುವ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. 
 

Follow Us:
Download App:
  • android
  • ios