ಮುಸ್ಲಿಂ ಯುವಕನನ್ನು ಮದ್ವೆಯಾದ ಕುರಿತು ಪ್ರಿಯಾಮಣಿ ಓಪನ್ ಮಾತು: ನಟಿ ಹೇಳಿದ್ದೇನು?
ಮುಸ್ಲಿಂ ಯುವಕನನ್ನು ಮದುವೆಯಾದ ಬಗ್ಗೆ ಸಕತ್ ಟ್ರೋಲ್‌ಗೆ ಒಳಗಾಗಿರುವ ನಟಿ ಪ್ರಿಯಾಮಣಿ ಪತಿ ಕುರಿತು ಹೇಳಿದ್ದೇನು?
ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿರುವ ನಟಿ ಪ್ರಿಯಾಮಣಿ (Priyamani) ಅವರು 2003ರಲ್ಲಿ ತೆಲುಗು ಚಿತ್ರ ಇವರೇ ಆಟಗಾಡು ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ, ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ರಾಮ್ ಚಿತ್ರದಿಂದ ಸ್ಯಾಂಡಲ್ವುಡ್ ಸಿನಿಪಯಣ ಆರಂಭಿಸಿದವರು. ತಮಿಳು ಚಿತ್ರ ರಂಗದ ಹೆಸರಾಂತ ನಿರ್ದೇಶಕ ಭರತ್ ರಾಜ್ ಅವರು ಸಿನಿಮಾರಂಗಕ್ಕೆ ಕರೆ ತಂದವರು. 2007ರ ತಮಿಳು ರೋಮ್ಯಾಂಟಿಕ್ (Romantic) ಸಿನಿಮಾ ಪರುತಿವೀರನ್‌ನಲ್ಲಿ ಮುತ್ತಜಗು ಎಂಬ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ವ್ಯಾಪಕ ಮೆಚ್ಚುಗೆ ಪಡೆದರು. ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ವಿಭಿನ್ನ ಭಾಷೆಯ ಚಲನಚಿತ್ರಗಳಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2008ರಲ್ಲಿ ಪ್ರಿಯಾಮಣಿ ಮಲಯಾಳಂ ಪ್ರಣಯ ತಿರಕ್ಕಾಥಾದಲ್ಲಿ ಮಾಳವಿಕಾ ಪಾತ್ರಕ್ಕಾಗಿ ಮತ್ತಷ್ಟು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು ಮತ್ತು ಅತ್ಯುತ್ತಮ ನಟಿ ಮಲಯಾಳಂನಲ್ಲಿ ಫಿಲ್ಮ್‌ಫೇರ್ (Filmfare) ಪ್ರಶಸ್ತಿಯನ್ನು ಗೆದ್ದರು.
ಇನ್ನು ಪ್ರಿಯಾಮಣಿ ಕುರಿತು ಹೇಳುವುದಾದರೆ, ಇವರು ಮುಸ್ತಾಫಾ ರಾಜಾ ಅವರೊಂದಿಗೆ ಮದ್ವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ ಬೇರೆ ಧರ್ಮದವರ ಜೊತೆ ಮದ್ವೆಯಾಗಿದ್ದಕ್ಕೆ ಸಕತ್ ಟೀಕೆಗೆ ಒಳಗಾಗಿದ್ದರು. ಆಗ ಕಿಡಿಕಾರಿದ್ದ ನಟಿ, ಇದರಲ್ಲಿ ತಪ್ಪೇನಿದೆ? ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ, ಎಲ್ಲರೂ ಲವ್ ಜಿಹಾದ್ (Love Jihad) ಮಾಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ ಎಂದಿದ್ದರು. ಮುಸ್ಲಿಂರನ್ನು ಮದ್ವೆಯಾದ ಮಾತ್ರಕ್ಕೆ ಹಾಗೆ ಹೀಗೆ ಹೇಳುವುದನ್ನು ನಿಲ್ಲಿಸಿ. ಇದು ನನ್ನ ಜೀವನ. ನನಗೆ ಯಾರು ಬೇಕೋ ಅವರೊಟ್ಟಿಗೆ ನನ್ನ ಮುಂದಿನ ಜೀವನ ಕಳೆಯುತ್ತೇನೆ ಎಂದಿದ್ದರು. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿಹಾದಿಗಳಾಗಿ ಹುಟ್ತಾರೆ, ಇದು ಲವ್ ಜಿಹಾದ್ ಅಂತೆಲ್ಲಾ ಅಂದರು. ಹೀಗೆ ಹೇಳಲು ನಿಮಗೆ ಹೇಗೆ ಮನಸ್ಸು ಬರುತ್ತದೆ? ನನ್ನ ಮಕ್ಕಳೇನೂ ಜಿಹಾದಿಗಳಾಗಿ ಹುಟ್ಟುವುದಿಲ್ಲ ಎಂದಿದ್ದರು.
ಇತ್ತೀಚಿನ ಸಂದರ್ಶನವೊಂದರಲ್ಲಿ ಮತ್ತೆ ತಮ್ಮ ವಿರುದ್ಧ ಆಗುತ್ತಿರುವ ಟ್ರೋಲ್‌ಗಳ ಕುರಿತು ನಟಿ ಮಾತನಾಡಿದ್ದಾರೆ. ನಾನು ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಕ್ಕೆ ಸಾಕಷ್ಟು ಟ್ರೋಲ್‌ಗೆ ಒಳಗಾದೆ. ಆದರೆ ನಿಜವಾಗಿಯೂ ಹೇಳಬೇಕೆಂದರೆ, ಇದು ನನ್ನ ಮೇಲಾಗಲೀ, ಅಪ್ಪ-ಅಮ್ಮನ ಮೇಲಾಗಲೀ ಯಾವುದೇ ಪರಿಣಾಮ ಬೀರಲಿಲ್ಲ. ನನ್ನ ಪತಿ ನನ್ನ ಹಿಂದೆ ದೃಢವಾಗಿ ನಿಂತಿದ್ದಾರೆ ಏನೇ ಆದರೂ ಎಲ್ಲ ವಿಚಾರಗಳು ನನ್ನ ಬಳಿಗೆ ಬರುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ನನಗೆ ನೀಡಿರುವ ಭರವಸೆಯನ್ನು ಅವರು ಈಡೇರಿಸುತ್ತಿದ್ದಾರೆ ಎಂದು ನಟಿ ಹೇಳಿದ್ದಾರೆ.
‘ನಾವಿಬ್ಬರೂ ಡೇಟಿಂಗ್ ಮಾಡುವಾಗ ನಾನು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯ್ತು. ಆಗಲೂ ನನ್ನ ಮೇಲೆ ನಂಬಿಕೆ ಇಡುವಂತೆ ಮುಸ್ತಫಾ ಅವರಿಗೆ ಹೇಳಿದ್ದೆ. ಅವರೂ ನನಗೆ ಸಪೋರ್ಟ್ ಮಾಡಿದರು. ನಾವು ನಮ್ಮ ಇಡೀ ಜೀವನವನ್ನು ಪರಸ್ಪರ ಕಳೆಯಲು ನಿರ್ಧರಿಸಿದ್ದೇವೆ. ಹಾಗಾಗಿ ದಾರಿಯುದ್ದಕ್ಕೂ ಏನೇ ಬಂದರೂ ಅದನ್ನು ನಾವು ಒಟ್ಟಾಗಿ ಎದುರಿಸುತ್ತೇವೆ. ಇಂತಹ ತಿಳಿವಳಿಕೆಯ ವ್ಯಕ್ತಿ ಜೊತೆ ಇರಲು ಖುಷಿ ಆಗುತ್ತದೆ. ಎಲ್ಲ ಸಮಸ್ಯೆಗಳನ್ನೂ ಹೇಗೆ ಎದುರಿಸಬೇಕು ಎಂಬುದು ಅವರಿಗೆ ಗೊತ್ತಿದೆ’ ಎಂದು ಪ್ರಿಯಾಮಣಿ ಹೇಳಿದ್ದಾರೆ. ಇದೇ ವೇಳೆ, ಟೀಕೆ, ಟ್ರೋಲ್ ಬಗ್ಗೆ ಮಾತನಾಡಿದ ಅವರು, ಅವುಗಳ ಬಗ್ಗೆ ಹೆಚ್ಚು ಯೋಚಿಸಬೇಡ, ಕೊನೆಯಲ್ಲಿ ನಾವಿಬ್ಬರೂ ಒಟ್ಟಿಗೆ ಇರುವುದೇ ಹೆಚ್ಚು ಮುಖ್ಯ ಎಂದು ಮುಸ್ತಫಾ ಹೇಳಿದ್ದು, ಅದನ್ನೇ ನಾನು ಪಾಲಿಸುತ್ತಿದ್ದೇನೆ ಎಂದಿದ್ದಾರೆ.
ಗುಂಡಿನ ದಾಳಿ: ಸಲ್ಮಾನ್ ಖಾನ್ ಫ್ಯಾನ್ಸ್ ಬೆದರಿದ್ರೆ ತಂದೆ ಸಲೀಂ ಖಾನ್ ಹೀಗೆ ಹೇಳೋದಾ?