'ಒರು ಅಡಾರ್ ಲವ್'‌ ಸಿನಿಮಾ ಹಾಡಿನ ಮೂಲಕ ಕಣ್ಸನ್ನೇ ಮೂಲಕವೇ ನ್ಯಾಷನಲ್ ಕ್ರಷ್ ಆದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ನ ಇನ್ನೊಂದು ವಿಡಿಯೋ ವೈರಲ್ ಆಗಿದೆ.

ಈ ಹಿಂದೆ 'ಮಾಣಿಕ್ಯ ಮಲರಾಯ ಪೂವಿ' ಹಾಡಿನ ಸಣ್ಣ ತುಣುಕಿನ ಮೂಲಕ ಭಾರೀ ಸದ್ದು ಮಾಡಿದ ಮಲ್ಲು ಗರ್ಲ್‌ ರಾತ್ರೋ ರಾತ್ರಿ ಹಿಟ್ ಆಗಿದ್ದಳು. ಸಿನಿಮಾ ಅಷ್ಟಾಗಿ ಹಿಟ್ ಆಗದಿದ್ದರೂ, ರಿಲೀಸ್ ಆದ ಒಂದೇ ದಿನದಲ್ಲಿ ಹಾಡು ಮಾತ್ರ ಸಿಕ್ಕಾಪಟ್ಟೆ ಹಿಟ್ಟ ಆಯ್ತು.

ಈ ಹಾಡು ಭಾರತದ ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್, ನೀವೂ ಒಮ್ಮೆ ನೋಡಿ

ವಾಟ್ಸಾಪ್, ಫೇಸ್‌ಬುಕ್ ಎಲ್ಲಿ ನೋಡಿದರೂ ಕಣ್ಸನ್ನೆ ಹುಡುಗಿ ಮಿಂಚಿದ್ದೋ ಮಿಂಚಿದ್ದು. ಇದೀಗ ಅದೇ ಪ್ರಿಯಾ ಪ್ರಕಾಶ್ ವಾರಿಯರ್ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಲಾಕ್‌ಡೌನ್ ಟೈಂ ಆದ್ರೂ ಕಣ್ಸನ್ನೆ ಹುಡುಗಿಯ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಪಡ್ಡೆಗಳ ಹೃದಯಕ್ಕೆ ಮತ್ತೆ ಪ್ರಿಯಾ ವಾರಿಯರ್ ಡೈರೆಕ್ಟ್ ಶೂಟ್..!

ಬ್ಯೂಟಿ ಸಲೂನ್‌ನಲ್ಲಿ ಕುಳಿತ ಪ್ರಿಯಾ ಮಾಸ್ಕ್ ಧರಿಸಿಕೊಂಡೇ ಮಿರರ್ ವಿಡಿಯೋ ಮಾಡಿದ್ದಾರೆ. ಕುಳಿತಲ್ಲಿಂದಲೇ ಹುಬ್ಬು ಹಾರಿಸಿ, ಮಾಸ್ಕ್ ಒಳಗೆ ಕಿರುನಗೆ ನಕ್ಕಿದ್ದು ವಿಡಿಯೋದಲ್ಲಿ ಕಾಣಬಹುದು.

 

 
 
 
 
 
 
 
 
 
 
 
 
 
 
 

A post shared by Priya Prakash Varrier💫 (@priya.p.varrier) on Aug 6, 2020 at 5:52am PDT