Asianet Suvarna News Asianet Suvarna News

ಶಾರುಖ್​ ಖಾನ್​ ವಾಚಿನ ಬೆಲೆ ಕೇಳಿದ್ರೆ ತಲೆತಿರುಗಿ ಬೀಳೋದು ಗ್ಯಾರೆಂಟಿ!

ಸದ್ಯ ಸುದ್ದಿಯಲ್ಲಿರುವ ಬಾಲಿವುಡ್​ ಬಾದ್​ಶಾ ಶಾರುಖ್​ ಖಾನ್​, ಈಗ ಅವರ ವಾಚ್​ನ ಬೆಲೆಯಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಾಗಿದ್ದರೆ ಏನಿದು ವಾಚಿನ ರಹಸ್ಯ?
 

Price of Shah Rukh Khans Audemars Piguet wristwatch will shock you
Author
First Published Jan 23, 2023, 6:11 PM IST

ನಟ ಶಾರುಖ್ ಖಾನ್ ಅವರ ಪಠಾಣ್​ (Pathaan) ಚಿತ್ರಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ಪಠಾಣ್​ ಚಿಂದಿ ಉಡಾಯಿಸಿದ್ದರೂ, ಬೈಕಾಟ್​ ಬಿಸಿಯ ಭಯದಲ್ಲಿ ಚಿತ್ರತಂಡವಿದೆ. ಶಾರುಖ್​ ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದರೆ, ಕೇಸರಿ ಬಿಕನಿಯ ಬೇಷರಂ ರಂಗ್​ (Besharam Rang) ಹಾಡಿನ ಉರಿ ಇನ್ನೂ ಆರದ ಕಾರಣ, ಚಿತ್ರವನ್ನು ಬೈಕಾಟ್​ ಮಾಡಲು ಮತ್ತೊಂದಿಷ್ಟು ಮಂದಿ ಕಾದಿದ್ದಾರೆ. ಬೈಕಾಟ್​ (Boycott) ಬಿಸಿ ಅಸ್ಸಾಂನಲ್ಲಿ ಹೆಚ್ಚಾಗಿರುವ ಕಾರಣ, ಶಾರುಖ್​ ಅವರು ಅಸ್ಸಾಂ ಮುಖ್ಯಮಂತ್ರಿಯವರಿಗೆ ಕರೆ ಮಾಡಿ  ಚಿತ್ರತಂಡಕ್ಕೆ ರಕ್ಷಣೆ ನೀಡುವಂತೆ ಮನವಿಯನ್ನೂ ಮಾಡಿದ್ದಾರೆ. ಇದೆಲ್ಲದರ ನಡುವೆ ಈಗ ಶಾರುಖ್​ ಖಾನ್​ ಅವರ ವಾಚ್​ ಭಾರಿ ಸುದ್ದಿಯಾಗುತ್ತಿದೆ.

ಹೌದು! ಶಾರುಖ್​ ಖಾನ್​ ಅವರ ವಾಚ್​ಗೂ (Watch) ಪಠಾಣ್​ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಈ ಚಿತ್ರದಿಂದಾಗಿ, ಅದರಲ್ಲಿಯೂ ವಿವಾದದ ಸುಳಿಯಲ್ಲಿ ಚಿತ್ರ ಸಿಲುಕಿದ್ದರಿಂದ ಶಾರುಖ್​  ಮಾತ್ರ ಸದ್ಯ ಹಾಟ್​ ಟಾಪಿಕ್​ ಆಗಿದ್ದಾರೆ. ಈಗ ಅವರ ವಾಚ್​ನತ್ತ ಹಲವರ ದೃಷ್ಟಿ ನೆಟ್ಟಿದೆ. ಶಾರುಖ್ ಖಾನ್ ‘ಪಠಾಣ್’ ಚಿತ್ರಕ್ಕಾಗಿ ಪಡೆದದ್ದು ಸುಮಾರು 40 ಕೋಟಿ ರೂಪಾಯಿ ಎನ್ನಲಾಗಿದೆ. ಇಷ್ಟೇ ಅಲ್ಲದೇ, ಚಿತ್ರದ ಲಾಭದಲ್ಲಿ ಬರುವ ಶೇರ್​ ಕೂಡ ಪಡೆಯಲಿದ್ದಾರಂತೆ. ಇದನ್ನು ಅಂದಾಜಿಸಿದರೆ ಇವರ ಸಂಭಾವನೆ 100 ಕೋಟಿ ರೂಪಾಯಿ (100 crores)ಸಂಭಾವನೆ ಮೀರಬಹುದು.

ಪಠಾಣ್​ ಚಿತ್ರಕ್ಕೆ ಶಾರುಖ್ ಇಷ್ಟು ಸಂಭಾವನೆ ಪಡೆದ್ರಾ? ದೀಪಿಕಾ, ಜಾನ್​ಗೆ ಸಿಕ್ಕಿದ್ದೆಷ್ಟು?

ಇಂತಿಪ್ಪ ಶಾರುಖ್​ ಖಾನ್​ ಧರಿಸಿರುವ ವಾಚಿನ ಬೆಲೆ ಎಷ್ಟು ಗೊತ್ತಾ? ಬಹುಶಃ ನೀವು ಊಹಿಸಲಿಕ್ಕೂ ಸಾಧ್ಯವಿಲ್ಲ. ಅವರ ಐಷಾರಾಮಿ ವಾಚಿನ ಮೌಲ್ಯ ವಾಚ್ ಮೌಲ್ಯ 4,74,47,000. ಇದನ್ನು ಎಣಿಸಲು ಕಷ್ಟ ಆಗಬಹುದು, ಸುಲಭದಲ್ಲಿ ಹೇಳುವುದಾದರೆ ಇದರ ಮೌಲ್ಯ  4 ಕೋಟಿಯ 74 ಲಕ್ಷದ 47 ಸಾವಿರ ರೂಪಾಯಿಗಳು! ಜನಸಾಮಾನ್ಯನೊಬ್ಬ ಬಹುಶಃ ಜೀವನಪೂರ್ತಿ  ನಿಯತ್ತಿನಿಂದ ದುಡಿದರೂ ಇಷ್ಟು ಮೊತ್ತವನ್ನು ನೋಡಿರಲು ಸಾಧ್ಯವಿಲ್ಲ. ಲಕ್ಷುರಿ ಲೈಫ್​ಸ್ಟೈಲ್​ಗೆ ಹೆಸರಾಗಿರುವ ಶಾರುಖ್​ ಅಷ್ಟು ದುಬಾರಿ ಬೆಲೆಯ ವಾಚನ್ನು ಧರಿಸಿದ್ದಾರೆ. ಇವರ ವಾಚೀಗ ಸಾಮಾಜಿಕ ಜಾಲತಾಣದಲ್ಲಿ (social media) ಸಕತ್​ ಸೌಂಡ್​ ಮಾಡುತ್ತಿದೆ. 

ಅಂದಹಾಗೆ ಅವರ ವಾಚು ಎಲ್ಲರ ಗಮನಕ್ಕೆ ಬಂದುದು ಅವರು ಈಚೆಗೆ  ಇಂಟರ್‌ನ್ಯಾಷನಲ್ ಲೀಗ್ ಟಿ20 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ. ಆಗ ಸುದ್ದಿಯಾಗಿದ್ದ ವಾಚಿನ ಬಗ್ಗೆ ಈಗ ಎಲ್ಲರ ಬಾಯಲ್ಲೂ ಮಾತೇ ಮಾತು. ಅಷ್ಟಕ್ಕೂ ಈ ವಾಚಿನ ಬೆಲೆಯನ್ನು ಖುದ್ದು ಶಾರುಖ್​ ಅವರೇನೂ ಹೇಳಿಲ್ಲ. ಆಡಮಾಸ್ ಪೀಗೆ (Audemars Piguet) ಬ್ರಾಂಡ್‌ನ ಈ ದುಬಾರಿ ವಾಚಿನ ಗುಟ್ಟನ್ನು ಅವರು ರಟ್ಟು ಮಾಡಿಯೂ ಇಲ್ಲ. ಆದರೆ ಅವರ ಫ್ಯಾನ್​ ಒಬ್ಬ  ಈ  ವಾಚ್‌ನ ಬೆಲೆಯನ್ನು ಹುಡುಕಿ ಟ್ವೀಟ್ ಮಾಡಿದ್ದಾರೆ. ರಾಯಲ್ ಓಕ್ ಪರ್ಚುವಲ್ ಕ್ಯಾಲೆಂಡರ್ (Royal Oak Perchual Calendar) ಮಾಡೆಲ್​ನ ಈ ವಾಚಿನ ಬೆಲೆ ಮಾರುಕಟ್ಟೆ ದರದಲ್ಲಿ ಹೇಳುವುದಾದರೆ ಸುಮಾರು 4 ಕೋಟಿ 74 ಲಕ್ಷ 47 ಸಾವಿರ ರೂಪಾಯಿ ಎಂದು ಅವರು ಹೇಳಿದ್ದಾರೆ. 

'ಪಠಾಣ್'​ ವೀಕ್ಷಿಸಲು ಆಗದಿದ್ರೆ ಸಾಯ್ತೇನೆ: ವಿಡಿಯೋ ಮಾಡಿದ್ದಾನೆ ಈ ಯುವಕ!

ಈ ವಾಚಿನ ಬಗ್ಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಒಂದು ಫಂಕ್ಷನ್​ಗೆ ಅಟೆಂಡ್​ ಆದರೆ ಸಾಕು, ಶಾರುಖ್​ ಇದಕ್ಕಿಂತಲೂ ದುಬಾರಿ ಬೆಲೆಯನ್ನು ಪಡೆಯುವಾಗ ಅವರಿಗೆ ಇದೇನು ದೊಡ್ಡ ಮೊತ್ತವಲ್ಲ ಎಂದು ಒಬ್ಬ ಕಮೆಂಟಿಗ ಹೇಳಿದರೆ, ಕಾಲು ನಿಮಿಷದ ಜಾಹೀತಾರಿಗೆ ಇವರು ಇಷ್ಟು ಸಂಭಾವನೆ ಪಡೆಯಲಿಕ್ಕೆ ಸಾಕು, ಈ ಮೊತ್ತವೇನು ಮಹಾ ಎಂದು ಇನ್ನೊಬ್ಬ ಹೇಳಿದ್ದಾನೆ. ಮತ್ತೆ ಕೆಲವರು ಶಾರುಖ್​ ಕಾಲೆಳೆದಿದ್ದು, ನಿಜಕ್ಕೂ ಇದು ನಿಮ್ಮ ನಿಯತ್ತಿನ ದುಡಿಮೆಯಿಂದ ಪಡೆದದ್ದಾ ಎಂದು ಪ್ರಶ್ನಿಸಿದ್ದರೆ, ಇನ್ನು ಕೆಲವರು ಯಾರೂ ಪುಕ್ಸಟೆ ಗಿಫ್ಟ್​ ಕೊಟ್ಟಿರಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಜಾಲತಾಣದಲ್ಲಿ ಶಾರುಖ್​ ಅವರ ವಾಚಿನದ್ದೇ ಮಾತು.
 

Follow Us:
Download App:
  • android
  • ios