Asianet Suvarna News Asianet Suvarna News

ಪಠಾಣ್​ ಚಿತ್ರಕ್ಕೆ ಶಾರುಖ್ ಇಷ್ಟು ಸಂಭಾವನೆ ಪಡೆದ್ರಾ? ದೀಪಿಕಾ, ಜಾನ್​ಗೆ ಸಿಕ್ಕಿದ್ದೆಷ್ಟು?

250 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿರುವ ಪಠಾಣ್​ ಚಿತ್ರಕ್ಕೆ ಶಾರುಖ್​ ಖಾನ್​ ಪಡೆದ ಸಂಭಾವನೆಯೆಷ್ಟು? ದೀಪಿಕಾ, ಜಾನ್ ಅಬ್ರಹಾಂ ಸೇರಿದಂತೆ ಉಳಿದವರಿಗೆ ಸಿಕ್ಕಿದ್ದೆಷ್ಟು?
 

Shah Rukh Khan and other actors remuneration for pathan movie
Author
First Published Jan 19, 2023, 5:32 PM IST

ಶಾರುಖ್ ಖಾನ್ ಅಭಿನಯದ 'ಪಠಾಣ್' (Pathaan) ಬಾಲಿವುಡ್​ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸುಮಾರು 250 ಕೋಟಿ ರೂ. ಬಜೆಟ್​ನಲ್ಲಿ ತಯಾರಾಗಿರುವ ಈ ಚಿತ್ರದ ಮೂಲಕ ಶಾರುಖ್ ಖಾನ್ ಸುಮಾರು ನಾಲ್ಕು ವರ್ಷಗಳ ನಂತರ ಹಿರಿತೆರೆಯಲ್ಲಿ ನಾಯಕನಾಗಿ ಮರಳಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಹಿಂದೆ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಜೊತೆ 'ವಾರ್​' ತಂದಿದ್ದ ಸಿದ್ಧಾರ್ಥ್ ಆನಂದ್ ಈ ಆಕ್ಷನ್ ಚಿತ್ರವನ್ನು (Action film) ನಿರ್ದೇಶಿಸಿದ್ದಾರೆ. 'ವಾರ್' (war) 2019 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿತ್ತು. ಹೀಗಿರುವಾಗ ‘ಪಠಾಣ್’ ಚಿತ್ರದಿಂದ ಸಾಕಷ್ಟು ನಿರೀಕ್ಷೆಗಳು ಮೂಡುತ್ತಿವೆ. 

ಹಾಗಿದ್ದ ಮೇಲೆ ಈ ಚಿತ್ರದ ಬಜೆಟ್​ (Budget) ಎಷ್ಟು? ಯಾರು ಎಷ್ಟು ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನುವ ಬಗ್ಗೆ ನಿಮಗೂ ಕುತೂಹಲ ಇದ್ದಿರಬಹುದು ಅಲ್ಲವೆ? ವರದಿಗಳ ಪ್ರಕಾರ 57ರ ಹರೆಯದ ಶಾರುಖ್ ಖಾನ್ ‘ಪಠಾಣ್’ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಸುಮಾರು 35 40 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ. ಜನ ಸಾಮಾನ್ಯರಿಗೆ ಈ ಹಣ ಬಹು ದುಬಾರಿ ಎನಿಸಬಹುದು. ಆದರೆ ಚಿತ್ರ ನಟರಿಗೆ ಇದು ಅತ್ಯಂತ ಕಡಿಮೆ ಸಂಭಾವನೆ ಎನಿಸುವುದು ಉಂಟು. ಆದ್ದರಿಂದ ಚಿತ್ರಪ್ರಿಯರು ಶಾರುಖ್​ ಇಷ್ಟು ಕಮ್ಮಿ ಮೊತ್ತ ಕೇಳಿದ್ದೇಕೆ, ಅದೂ ಇಷ್ಟೊಂದು ಸಾಹಸಮಯ ಚಿತ್ರದಲ್ಲಿ ಎಂದು ಪ್ರಶ್ನಿಸಿದ್ದಾರೆ. ಆದರೆ ಇಷ್ಟು ಕಡಿಮೆ ಮೊತ್ತ ಕೇಳುವಂಥ ನಟ ಶಾರುಖ್​ ಅಲ್ಲ. 

ಸ್ಯಾಂಡಲ್​ವುಡ್​ಗೆ ಶಾಕ್​: 'ಲೀಡರ್'​ ಚಿತ್ರ ಖ್ಯಾತಿಯ ಯುವ ನಟ ಧನುಷ್​ ಇನ್ನಿಲ್ಲ!

ಅಸಲಿಗೆ ಅವರ ಲೆಕ್ಕಾಚಾರವೇ ಬೇರೆ. ಪಠಾಣ್​ ಹೇಗಿದ್ದರೂ ಬಾಕ್ಸ್​ ಆಫೀಸ್​ನಲ್ಲಿ ಕೊಳ್ಳೆ ಹೊಡೆಯುವುದು ಎಂಬ ಲೆಕ್ಕಾಚಾರ ಚಿತ್ರತಂಡದ್ದು. ಇದೇ ಕಾರಣಕ್ಕೆ ಈ ಹಿಂದೆ ಕೆಲವು ನಟರು ಮಾಡಿದಂತೆ ಶಾರುಖ್​ ಅವರೂ ಮಾಡಿದ್ದಾರೆ. ಅದೇನೆಂದರೆ ಶಾರುಖ್ ಖಾನ್ (Sharukh Khan)ಅವರು 35 40 ಕೋಟಿ ರೂಪಾಯಿ ಸಂಭಾವನೆ ಜತೆಗೆ ಲಾಭದಲ್ಲಿ ಬರುವ ಶೇರ್​ ಕೂಡ ಪಡೆಯಲಿದ್ದಾರಂತೆ. ಇದನ್ನು ಅಂದಾಜಿಸಿದರೆ ಇವರ ಸಂಭಾವನೆ 100 ಕೋಟಿ ರೂಪಾಯಿ (100 crores)ಮೀರಬಹುದು ಎನ್ನಲಾಗಿದೆ. ಆದರೆ ಬೈಕಾಟ್​ ಬಿಸಿ, ಕೇಸರಿ ಬಿಕಿನಿ ಟ್ರೋಲ್​ ಇವುಗಳ ಮೇಲುಗೈಯಾಗಿ ಚಿತ್ರ ನಿರೀಕ್ಷೆಯಷ್ಟು ಓಡದಿದ್ದರೆ ಮಾತ್ರ ಶಾರುಖ್​ಗೆ ಅಪಾರ ಲಾಸ್​ ಆಗಲಿದೆ.

ಚಿತ್ರದಲ್ಲಿ ಎರಡನೇ ಪ್ರಮುಖ ಪಾತ್ರವೆಂದರೆ ದೀಪಿಕಾ ಪಡುಕೋಣೆ (Deepika Padukone. ಅವರೇ ಈ ಚಿತ್ರದ ನಾಯಕಿ. ದೇಶದ ಭದ್ರತೆಗಾಗಿ ಹೊರ ಬಂದಿರುವ 'ಪಠಾಣ್'ನನ್ನು ಬೆಂಬಲಿಸುವ ಅಂಡರ್‌ಕವರ್ ಏಜೆಂಟ್ (underconver agent)ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ಮೂಲದ ಪ್ರಕಾರ ಈಕೆಯೇ ಖಳನಾಯಕಿ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಚಿತ್ರ ಬಿಡುಗಡೆಯಾದ ಮೇಲೆ ಸತ್ಯ ಗೊತ್ತಾಗಬೇಕಿದೆ. ಮೂಲಗಳನ್ನು  ನಂಬುವುದೆ ಆದರೆ ದೀಪಿಕಾ  ಈ ಚಿತ್ರಕ್ಕಾಗಿ ತೆಗೆದುಕೊಂಡಿರುವುದು ಸುಮಾರು 15 ಕೋಟಿ (15 crores) ರೂಪಾಯಿಗಳಂತೆ!

ಜಾನ್ ಅಬ್ರಹಾಂ ಚಿತ್ರದಲ್ಲಿ ಮುಖ್ಯ ಖಳನಾಯಕನ (Villean) ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.  ಭಾರತವನ್ನು ನಾಶಮಾಡುವ ಉದ್ದೇಶದಿಂದ ಬರುವ ಈ ಪಾತ್ರವನ್ನು ನಿಲ್ಲಿಸುವುದು ಪಠಾಣ್‌ನ ಕೆಲಸ. ಈ ಚಿತ್ರಕ್ಕಾಗಿ ಜಾನ್ ಸುಮಾರು 20 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಂದರೆ ಜಾನ್​ ಅಬ್ರಹಾಂ ಅವರಿಗಿಂತ ಶಾರುಖ್​ ಖಾನ್​ ಐದು ಪಟ್ಟು ಹೆಚ್ಚಿಗೆ ಹಣವನ್ನು ಪಡೆದಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅವರದ್ದು ಅತಿಥಿ ಪಾತ್ರ. ಅವರು ಟೈಗರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಅತಿಥಿ ಪಾತ್ರಕ್ಕಾಗಿ ತಯಾರಕರಿಂದ ಯಾವುದೇ ರೀತಿಯ ಶುಲ್ಕವನ್ನು ತೆಗೆದುಕೊಳ್ಳಲು ಅವರು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಸತ್ಯಾಂಶ ಗೊತ್ತಾಗಬೇಕಿದೆ. 

ವೇಶ್ಯೆಯರಿಗಾಗಿ ಬಣ್ಣ ಹಚ್ಚಿದ ಖ್ಯಾತ ಬಾಲಿವುಡ್​ ನಟಿಮಣಿಗಳಿವರು...

ಇದು ಸಿದ್ಧಾರ್ಥ್ ಆನಂದ್ (Siddharth Anand)ನಿರ್ದೇಶನದ 7ನೇ ಚಿತ್ರ. ಈ ಹಿಂದೆ ಅವರು 'ಸಲಾಮ್ ನಮಸ್ತೆ', 'ತಾರಾ ರಮ್ ಪಮ್', 'ಬಚ್ನಾ ಏ ಹಸೀನೋ', 'ಅಂಜನಾ ಅಂಜನಿ', 'ಬ್ಯಾಂಗ್ ಬ್ಯಾಂಗ್' ಮತ್ತು 'ವಾರ್' ಅನ್ನು ನಿರ್ದೇಶಿಸಿದ್ದಾರೆ. 'ಪಠಾಣ್' ಚಿತ್ರಕ್ಕಾಗಿ ಅವರು ಸುಮಾರು 6 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಜನವರಿ 25 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ (Dimple Kapadia)ಕೂಡ  ಪಾತ್ರ ನಿರ್ವಹಿಸಿದ್ದಾರೆ. ಆದರೆ, ಅವರ ಶುಲ್ಕದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Follow Us:
Download App:
  • android
  • ios