ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕೆ ಪ್ರೀತಿ ಜಿಂಟಾ ಪತಿ ಜೀನ್ ಗುಡೆನೊಫ್‌ USನಲ್ಲಿ ಸ್ನೋ ಫಾಲ್‌ ಎಂಜಾಯ್ ಮಾಡುತ್ತಿದ್ದಾರೆ. ಹಿಮ ಹಾಗೂ ಬೆಟ್ಟಗಳ ನಡುವೆ ನಿಂತು ಥ್ಯಾಂಕ್ಸ್ ಗೀವಿಂಗ್‌ ಸಂಭ್ರಮವನ್ನು ಆಚರಿಸಿದ್ದಾರೆ. 

'ಕಲ್ ಹೋ ನಾ ಹೋ' ಸುಂದರಿ ಪ್ರೀತಿ ಜಿಂಟಾ ಚಿತ್ರರಂಗದಿಂದ ದೂರ ಉಳಿದಿರುವುದೇಕೆ? 

ಕೆಂಪು ಜಾಕೆಟ್‌ನಲ್ಲಿ ಕಂಗೊಳ್ಳಿಸುತ್ತಿರುವ ಪ್ರೀತಿ ತನ್ನ ಪತಿ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 'ಬಿಸಿಲು, ಮಂಜು ಹಾಗೂ ನಮ್ಮ ನಗು. ಎಷ್ಟು ಗ್ರೇಟ್‌ಫುಲ್‌ ಲೈಫ್‌' ಎಂದು ಬರೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದರೆ ಹ್ಯಾಷ್‌ಟ್ಯಾಗ್‌ನಲ್ಲಿ ಪರಿಪರಮೇಶ್ವರ ಎಂದು ಪ್ರೀತಿ ಬಳಸಿರುವುದು. 

ಆಮೀರ್‌ ಖಾನ್‌ ಪ್ರೀತಿ ಜಿಂಟಾ ಸಿಕ್ರೇಟಾಗಿ ಮದುವೆಯಾಗಿದ್ರಾ? 

ಎಲ್ಲೆಡೆ #thanksgiving ಟ್ರೆಂಡ್ ಆಗುತ್ತಿದ್ದು, ಮಂಜನ್ನು ಚಂಡಿನ ರೀತಿಯಲ್ಲಿ ಮಾಡಿಕೊಂಡು ಪತಿಗೆ ಎಸೆದು ಆಟವಾಡಿದ್ದಾರೆ. ಪತಿ ಜೊತೆ ಎಂಜಾಯ್ ಮಾಡಿದ ಪ್ರತಿ ಕ್ಷಣವನ್ನೂ ಇಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು ಈ ಹ್ಯಾಷ್‌ಟ್ಯಾಗ್‌ ಬಳಸಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Preity G Zinta (@realpz)

ನಟಿ ಕಾಜೋಲ್ ಕೂಡ ಪತಿ ಹಾಗೂ ಮಗನ ಫೋಟೋ ಶೇರ್ ಮಾಡಿಕೊಂಡು #thanksgiving ಎಂದು ಬರೆದುಕೊಂಡಿದ್ದಾರೆ. ಮಗಳ ಜೊತೆ ಸಿಂಗಪೂರ್‌ನಲ್ಲಿರುವ ಕಾರಣ ಮಗನ ಜೊತೆ ಫೋಟೋ ಶೇರ್ ಮಾಡಿಲ್ಲ ಎಂದು ಹೇಳಿದ್ದಾರೆ.

ಮನುಷ್ಯರಿಗಿಂತ ಪ್ರಾಣಿಗಳೇ ವಾಸಿ! ಟ್ರಾಫಿಕ್ ರೂಲ್ಸ್ ಫಾಲೋ ಮಾಡೋದನ್ನು ನೋಡಿ! 

ಈ ಥ್ಯಾಂಕ್ಸ್‌ಗೀವಿಂಗ್ ಪಾರ್ಟಿಯನ್ನು ಸಾಮಾನ್ಯವಾಗಿ ಅಮೆರಿಕ ಮತ್ತು ಕೆನಡಾದ ಜನರು ಸಂಭ್ರಮದಿಂದ ಆಚರಿಸುತ್ತಾರೆ. ನವೆಂಬರ್ 26ರಂದು ಆಚರಿಸುವ ಈ ದಿನ ಅಮೆರಿಕದಲ್ಲಿ ರಾಷ್ಟ್ರೀಯ ರಜೆಯೂ ಇರುತ್ತದೆ. ನಮ್ಮ ಹಿತೈಷಿಗಳಿಗೆ, ಜೀವನದಲ್ಲಿ ಸಹಾಯ ಮಾಡಿದವರಿಗೆ ವಿಧ ವಿಧವಾಗಿ ಥ್ಯಾಂಕ್ಸ್ ಹೇಳುವುದು ಈ ದಿನಾಚರಣೆಯ ಉದ್ದೇಶ.

 

 
 
 
 
 
 
 
 
 
 
 
 
 
 
 

A post shared by Kajol Devgan (@kajol)