ಅಗ್ನಿ ದುರಂತದಲ್ಲಿ ನಾನು ಬದುಕಿದ್ದೇ ಪವಾಡ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಭಾವುಕ ನುಡಿ ಕೇಳಿ...
ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ನಾನು ಬದುಕಿದ್ದೇ ಪವಾಡ ಎಂದಿದ್ದಾರೆ ಬಾಲಿವುಡ್ ನಟಿ ಪ್ರೀತಿ ಜಿಂಟಾ. ನಟಿ ಹೇಳಿದ್ದೇನು?
ಇದೇ 9ರಂದು ಅಮೆರಿಕದ ಲಾಸ್ ಏಂಜಲಿಸ್ನ ಹಾಲಿವುಡ್ ಬೆಟ್ಟದಲ್ಲಿ ನಡೆದ ಶತಮಾನದ ಭೀಕರ ಕಾಳ್ಗಿಚ್ಚು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. . 7500 ಅಗ್ನಿಶಾಮಕ ದಳ, 1162 ಅಗ್ನಿಶಾಮಕ ವಾಹನ, 23 ನೀರು ಸರಬರಾಜುದಾರರು, 31 ಹೆಲಿಕಾಪ್ಟರ್, 53 ಬುಲ್ಡೋಜರ್‌ಗಳು ಬಂದರೂ ಅಗ್ನಿಯನ್ನು ನಂದಿಸಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಅದರ ಭಯಾನಕತೆ ಅರ್ಥವಾದೀತು. ಈ ಭಾಗದಲ್ಲಿ ಮಳೆಯ ಅಭಾವ ಈ ವರ್ಷ ಉಂಟಾಗಿದ್ದ ಕಾರಣದಿಂದಲೂ ಇದು ಕಷ್ಟಸಾಧ್ಯವಾಯಿತು. ಲಾಸ್ ಏಂಜಲಿಸ್‌ನಲ್ಲಿ ನೀರಿನ ಅಭಾವದಿಂದಾಗಿ ಅಗ್ನಿಶಾಮಕ ದಳದವರು ಸಾಕಷ್ಟು ಸವಾಲು ಎದುರಿಸಬೇಕಾಗುತ್ತಿದೆ. ಸುತ್ತಲಿನ ಈಜುಕೊಳಗಳು ಮತ್ತು ಕೊಳಗಳಿಂದ ನೀರು ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗಿದೆ. ಫೈರ್ ಎಂದು ಕರೆಯಲ್ಪಡುವ ಅಗ್ನಿ ಹಾಲಿವುಡ್ ಹಿಲ್ಸ್‌ನಲ್ಲಿ ಕಾಣಿಸಿಕೊಂಡಿದೆ. 20ಕ್ಕೂ ಅಧಿಕ ಎಕರೆಗೆ ಆರಂಭದಲ್ಲಿ ವ್ಯಾಪಿಸಿರುವ ಈ ಬೆಂಕಿ, ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾಕ್ಗಳನ್ನು ಸಂಪೂರ್ಣವಾಗಿ ಆಹುತಿ ಪಡೆದಿದೆ.
ಹಲವಾರು ಹಾಲಿವುಡ್, ಬಾಲಿವುಡ್ ತಾರೆಯರ ಮನೆಗಳೂ ಸುಟ್ಟು ಭಸ್ಮವಾಗಿವೆ. ಪ್ರಾಣ ಉಳಿಸಿಕೊಳ್ಳಲು ಎಲ್ಲರೂ ಕಾಲ್ಕಿಳುತ್ತಿದ್ದಾರೆ. ಇದರ ನಡುವೆಯೇ, ತಾವು ಈ ಅಗ್ನಿ ದುರಂತದಲ್ಲಿ ಬದುಕಿದ್ದೇ ಪವಾಡ ಎಂದಿದ್ದಾರೆ ಬಾಲಿವುಡ್ ನಟಿ ಪ್ರೀತಿ ಜಿಂಟಾ. ಇವರು ಕೂಡ ಅಗ್ನಿ ಅನಾಹುತ ನಡೆದಿರುವ ಹಾಲಿವುಡ್ ಬೆಟ್ಟದಲ್ಲಿ ಮನೆಯನ್ನು ಹೊಂದಿದ್ದಾರೆ. ಈಗ ಭಾವುಕ ಪೋಸ್ಟ್ ಮಾಡಿರುವ ನಟಿ, ಇಂಥ ಭೀಕರ ದಿನ ಬರುತ್ತೆ ಅಂತ ಕನಸು ಮನಸಿನಲ್ಲಿಯೂ ಯೋಚನೆ ಮಾಡಿಯೇ ಇರಲಿಲ್ಲ. ನನ್ನ ಅಕ್ಕಪಕ್ಕದವರು ಈ ಪರಿಯ ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುವುದು ನೆನೆಸಿಕೊಳ್ಳಲೂ ಆಗುವುದಿಲ್ಲ. ಇಂಥ ಅಗ್ನಿ ದುರಂತದಿಂದ ನಾನು ಕೂಡ ಬದುಕಿರುವುದೇ ಪವಾಡ. ಆ ದೇವರೇ ನಮ್ಮನ್ನು ಕಾಪಾಡಿದ್ದಾನೆ. ಪ್ರತಿಯೊಬ್ಬರೂ ಸುರಕ್ಷಿತವಾಗಿರಲಿ ಎನ್ನುವುದೇ ನನ್ನ ಆಶಯ ಎಂದಿದ್ದಾರೆ.
ಭೀಕರ ಕಾಳ್ಗಿಚ್ಚಿನ ನಡುವೆಯೇ ಮೊಲದ ರಕ್ಷಣೆ ಮಾಡಿದ 'ಹೀರೋ': ಮನಕಲಕುವ ವಿಡಿಯೋ ವೈರಲ್
ನನ್ನ ಜೀವನದಲ್ಲೇ ಇಂತಹ ದುರಂತವನ್ನು ನೋಡುತ್ತೇನೆ ಎಂದು ಭಾವಿಸಿರಲಿಲ್ಲ. ನನ್ನ ಅನೇಕ ಸ್ನೇಹಿತರು ಮತ್ತು ಕುಟುಂಬದವರು ನಿರಾಶ್ರಿತರಾಗಿದ್ದಾರೆ. ಎಲ್ಲರ ಸ್ಥಿತಿಯನ್ನು ನೋಡಿರುವ ನನ್ನ ಹೃದಯ ಛಿದ್ರವಾಗಿದೆ. ಇಂಥ ವಿಪತ್ತಿನಿಂದ ಆ ದೇವರು ನನ್ನನ್ನು ಕಾಪಾಡಿದ್ದಾನೆ. ಅವನಿಗೆ ಧನ್ಯವಾದಗಳು. ಜೊತೆಗೆ, ಅಗ್ನಿಶಾಮಕ ದಳಕ್ಕೂ ಧನ್ಯವಾದ ಸಲ್ಲಿಸುತ್ತೇನೆ. ಎಲ್ಲವನ್ನೂ ಕಳೆದುಕೊಂಡ ನಿರಾಶ್ರಿತರು ಶೀಘ್ರ ಚೇತರಿಸಿಕೊಳ್ಳಲಿ ಎನ್ನುವುದೇ ನನ್ನ ಪ್ರಾರ್ಥನೆ. ಶೀಘ್ರದಲ್ಲೇ ಬೆಂಕಿ ನಿಯಂತ್ರಣಕ್ಕೆ ಬರಲಿ. ನನ್ನ ಜೀವ ಉಳಿಸಿದ ಅಗ್ನಿಶಾಮಕ ದಳ ಮತ್ತು ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳು. ಎಲ್ಲರೂ ಸುರಕ್ಷಿತವಾಗಿರಿ ಎಂದಿದ್ದಾರೆ ನಟಿ.
ಅಂದಹಾಗೆ,, ಬಾಲಿವುಡ್ನಲ್ಲಿ ಉತ್ತುಂಗದಲ್ಲಿ ಇರುವಾಗಲೇ ಪ್ರೀತಿ ಜಿಂಟಾ 2016ರಲ್ಲಿ ಅಮೆರಿಕದ ಜೀನ್ ಗುಡೆನಫ್ ಅವರ ಜೊತೆ ಮದುವೆಯಾದರು. ಹಲವು ವರ್ಷ ಡೇಟಿಂಗ್ನಲ್ಲಿದ್ದ ಈ ಜೋಡಿ, ಯಾರಿಗೂ ಹೇಳದೇ ಮದುವೆಯಾಗಿತ್ತು. ಹೇಳದೇ ಕೇಳದೇ ಅಮೆರಿಕಕ್ಕೆ ಹಾರಿದ್ದರು ನಟಿ. ಬಾಡಿಗೆ ತಾಯ್ತನದ ಮೂಲಕ ಇಬ್ಬರು ಅವಳಿ ಮಕ್ಕಳನ್ನು ನಟಿ ಪಡೆದುಕೊಂಡಿದ್ದಾರೆ. ಸದ್ಯ ಲಾಸ್ ಏಂಜಲಿಸ್‌ನಲ್ಲಿ ಪತಿ ಮತ್ತು ಮಕ್ಕಳ ಜೊತೆ ನಟಿ ಪ್ರೀತಿ ಜಿಂಟಾ ಲಾಸ್ ಏಂಜಲೀಸ್ ನಲ್ಲಿ ನೆಲೆಸಿದ್ದರು. ಅವರು ಇರುವ ಪ್ರದೇಶ ಸುಟ್ಟು ಕರಕಲಾಗಿದೆ.
ಶತಮಾನದ ಭೀಕರ ಕಾಳ್ಗಿಚ್ಚಿಗೆ ಹಾಲಿವುಡ್ ಅಂತ್ಯ? ಕಣ್ಣೆದುರೇ ಸೆಲೆಬ್ರಿಟಿಗಳ ಮನೆಗಳು ಧಗಧಗ- ವಿಡಿಯೋಗಳು ವೈರಲ್