ಶತಮಾನದ ಭೀಕರ ಕಾಳ್ಗಿಚ್ಚಿಗೆ ಹಾಲಿವುಡ್​ ಅಂತ್ಯ? ಕಣ್ಣೆದುರೇ ಸೆಲೆಬ್ರಿಟಿಗಳ ಮನೆಗಳು ಧಗಧಗ- ವಿಡಿಯೋಗಳು ವೈರಲ್​

 ಅಮೆರಿಕದ ಲಾಸ್‌ ಏಂಜಲಿಸ್​ನಲ್ಲಿ ನಡೆದ ಭೀಕರ ಕಾಳ್ಗಿಚ್ಚು ಸೆಲೆಬ್ರಿಟಿಗಳ ಮನೆಗಳನ್ನು ಸುಟ್ಟು ಭಸ್ಮ ಮಾಡಿದೆ. ಇದರ ಭಯಾನಕ ವಿಡಿಯೋಗಳು ವೈರಲ್​  ಆಗುತ್ತಿವೆ.
 

A massive wildfire in Los Angeles has destroyed the homes of celebrities  videos viral

 ಅಮೆರಿಕದ ಲಾಸ್‌ ಏಂಜಲಿಸ್​ನ ಹಾಲಿವುಡ್​ ಬೆಟ್ಟದಲ್ಲಿ ನಡೆದ ಅಮೆರಿಕದ ಅತಿ ದೊಡ್ಡ ದುರಂತವಾಗಿರುವ ಕಾಳ್ಗಿಚ್ಚು ಇಡೀ ದೇಶವನ್ನಷ್ಟೇ ಅಲ್ಲದೇ, ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ ಐದು ಜನ ಪ್ರಾಣ ಕಳೆದಕೊಂಡಿದ್ದು, ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಲಾಸ್ ಏಂಜಲೀಸ್ ಮತ್ತು ಸುತ್ತಮುತ್ತ ಉರಿಯುತ್ತಿರುವ ಕಾಳ್ಗಿಚ್ಚು ಹಾಲಿವುಡ್​ ಸೆಲೆಬ್ರಿಟಿಗಳಾದ ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರ್ ಮತ್ತು ಪ್ಯಾರಿಸ್ ಹಿಲ್ಟನ್ ಸೇರಿದಂತೆ ಹಲವಾರು ಮಂದಿಯ ಮನೆಗಳನ್ನು ಕಣ್ಣೆದುರೇ ಸುಟ್ಟು ಭಸ್ಮ ಮಾಡಿದೆ. ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ವಸ್ತುಗಳು ಧಗಧಗನೆ ಹೊತ್ತಿಕೊಂಡು ಉರಿದಿವೆ. ಪ್ರಾಣ ಉಳಿಸಿಕೊಂಡರೆ ಸಾಕು ಎನ್ನುವಷ್ಟರಮಟ್ಟಿಗೆ ಸೆಲೆಬ್ರಿಟಿಗಳು ಸೇರಿದಂತೆ ಜನರು ಸ್ಥಳದಿಂದ ಮಾತ್ರವಲ್ಲದೇ ಊರಿನಿಂದಲೇ ಕಾಲ್ಕಿಳುತ್ತಿದ್ದಾರೆ.

ಅಮೆರಿಕವು 2025ರಲ್ಲಿ ಭಯಾನಕ ಘಟನೆಗಳನ್ನು ಎದುರಿಸಲಿವೆ ಎಂದು ಇದಾಗಲೇ ಕೆಲವು ಕಾಲಜ್ಞಾನಿಗಳು ಹೇಳಿದ್ದರು. ಅದನ್ನೆಲ್ಲಾ ಗಮನಿಸಿದರೆ, ಹಾಲಿವುಡ್​ ಅಂತ್ಯವಾಯಿತಾ ಎನ್ನುವ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ. ಇದಕ್ಕೆ ಕಾರಣ, ಹಾಲಿವುಡ್ ಹಿಲ್​, ವಿಶ್ವಖ್ಯಾತಿಯ ಹಾಲಿವುಡ್ ನಟ, ನಟಿಯರು ಮಾತ್ರವೇವಲ್ಲದೇ,  ವಿಶ್ವದ ಟಾಪ್ ಉದ್ಯಮಿಗಳು, ಕ್ರೀಡಾಪಟುಗಳು ವಾಸಿಸುವ ಸ್ಥಳವಾಗಿದೆ. ಅದೀಗ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಹಾಲಿವುಡ್​ನ ಭವಿಷ್ಯವನ್ನೇ ಕತ್ತಲಲ್ಲಿ ಮುಳುಗಿಸಿದೆ. 7500 ಅಗ್ನಿಶಾಮಕ ದಳ, 1162 ಅಗ್ನಿಶಾಮಕ ವಾಹನ, 23 ನೀರು ಸರಬರಾಜುದಾರರು, 31 ಹೆಲಿಕಾಪ್ಟರ್, 53 ಬುಲ್ಡೋಜರ್‌ಗಳು ಬಂದರೂ ಅಗ್ನಿಯನ್ನು ನಂದಿಸಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗಿತ್ತು. ಈ ಭಾಗದಲ್ಲಿ ಮಳೆಯ ಅಭಾವ ಈ ವರ್ಷ ಉಂಟಾಗಿದ್ದ ಕಾರಣದಿಂದಲೂ ಇದು ಕಷ್ಟಸಾಧ್ಯವಾಯಿತು. 

ಲಾಸ್ ಏಂಜಲಿಸ್ ಕಾಡ್ಗಿಚ್ಚಿಗೆ ಮನೆ ಕಳೆದುಕೊಂಡ ಹಾಲಿವುಡ್ ಸೆಲೆಬ್ರಿಟಿಗಳಿವರು

ಲಾಸ್ ಏಂಜಲಿಸ್‌ನಲ್ಲಿ ನೀರಿನ ಅಭಾವದಿಂದಾಗಿ ಅಗ್ನಿಶಾಮಕ ದಳದವರು ಸಾಕಷ್ಟು ಸವಾಲು ಎದುರಿಸಬೇಕಾಯಿತು.  ಸುತ್ತಲಿನ ಈಜುಕೊಳಗಳು ಮತ್ತು ಕೊಳಗಳಿಂದ ನೀರು ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗಿದೆ. ಫೈರ್ ಎಂದು ಕರೆಯಲ್ಪಡುವ ಅಗ್ನಿ ಹಾಲಿವುಡ್ ಹಿಲ್ಸ್‌ನಲ್ಲಿ ಕಾಣಿಸಿಕೊಂಡಿದೆ.  20ಕ್ಕೂ ಅಧಿಕ ಎಕರೆಗೆ ಆರಂಭದಲ್ಲಿ ವ್ಯಾಪಿಸಿರುವ ಈ ಬೆಂಕಿ, ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾಕ್​ಗಳನ್ನು ಸಂಪೂರ್ಣವಾಗಿ ಆಹುತಿ ಪಡೆದಿದೆ. ಇನ್ನೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹಾಲಿವುಡ್ ಬೌಲೆವಾರ್ಡ್‌ನಿಂದ ಸಮೀಪವೇ ನಡೆದಿರುವ ಈ ಘಟನೆಯಿಂದ  ಹಾಲಿವುಡ್‌ ಹಿಲ್​ನ ಹೃದಯಭಾಗದಲ್ಲಿ ವಾಸಿಸುತ್ತಿರುವ ಮತ್ತಷ್ಟು ಜನರನ್ನು ಜಾಗ ಖಾಲಿ ಮಾಡುವಂತೆ ಸೂಚಿಸಲಾಗಿದೆ.  ಕಾಳ್ಗಿಚ್ಚು ಹಬ್ಬಿರುವ ಪ್ರದೇಶವನ್ನು ಕಾನೂನುಬದ್ಧವಾಗಿ ಸಾರ್ವಜನಿಕ ಪ್ರವೇಶಕ್ಕೆ ಮುಚ್ಚಲಾಗಿದೆ  ಎಂದು ಲಾಸ್ ಏಂಜಲಿಸ್‌ ಅಗ್ನಿಶಾಮಕ ಇಲಾಖೆ ತಿಳಿಸಿದೆ. 
  
 ಅತ್ತ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲೂ ಈ ಕಾಡ್ಗಚ್ಚಿನ ಪ್ರಭಾವ ಕಾಣಿಸಿಕೊಂಡಿದ್ದು, ಹೊಗೆ ಮತ್ತು ಧೂಳು ಪ್ರದೇಶದಾದ್ಯಂತ ಹಬ್ಬಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಕ್ಯಾಲಿಫೋರ್ನಿಯಾದಲ್ಲಿ ವಿದ್ಯುತ್‌ ಸಂಪರ್ಕ ಕಡಿತ ಕೂಡ ಉಂಟಾಗಿದೆ. ಈ ವಿನಾಶವು ಪರಮಾಣು ಬಾಂಬ್‌ ಸ್ಫೋಟದ ನಂತರದ ಪರಿಣಾಮಕ್ಕೆ ಹೋಲಿಸಲಾಗಿದೆ.  ಲಾಸ್ ಏಂಜಲಿಸ್ ಕೌಂಟಿ ಶೆರಿಫ್ ರಾಬರ್ಟ್ ಲೂನಾ ಅವರು ಈ ವಿನಾಶವು  ಪರಮಾಣು ಬಾಂಬ್ ಬಿದ್ದಂತೆ ತೋರುತ್ತಿದೆ ಎಂದಿದ್ದಾರೆ. 
 

Latest Videos
Follow Us:
Download App:
  • android
  • ios