Asianet Suvarna News Asianet Suvarna News

ಬೇಬಿ ಬಂಪ್ ತೋರಿಸುತ್ತಾ ಡ್ರೈವ್ ಹೊರಟ ನಟಿ ಇಲಿಯಾನಾ; ವಿಡಿಯೋ ಶೇರ್ ಮಾಡಿ ಹೇಳಿದ್ದೇನು?

ಬೇಬಿ ಬಂಪ್ ತೋರಿಸುತ್ತಾ ಡ್ರೈವ್ ಹೊರಟ ವಿಡಿಯೋವನ್ನು ನಟಿ ಇಲಿಯಾನಾ ಶೇರ್ ಮಾಡಿದ್ದಾರೆ. 

Pregnant Ileana shares video and says sun is out bump is out sgk
Author
First Published May 20, 2023, 3:33 PM IST

ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ ತಾಯಿಯಾಗುತ್ತಿರುವ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದಾರೆ. ಮದುವೆಯಾಗದೆ, ಮಗುವಿನ ತಂದೆ ಯಾರೆಂದು ರಿವೀಲ್ ಮಾಡದೆ ತಾಯಿ ಆಗುತ್ತಿರುವ ವಿಚಾರ ಬಹಿರಂಗ ಪಡಿಸಿದ್ದ ನಟಿ ಇತ್ತೀಚಿಗಷ್ಟೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದರು. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಇಲಿಯಾನಾ ಬೇಬಿ ಬಂಪ್ ತೋರಿಸಿದ್ದಾರೆ. ಫೋಟೋ ಶೇರ್ ಮಾಡಿ ಬಂಪ್ ಅಲರ್ಟ್ ಎಂದು ಶೇರ್ ಮಾಡಿದ್ದರು. ಇದೀಗ ಇಲಿಯಾನಾ ಮತ್ತೊಂದು ಬೇಬಿ ಬಂಪ್ ವಿಡಿಯೋ ಶೇರ್ ಮಾಡಿದ್ದಾರೆ. 

ಇಲಿಯಾನಾ ಬೇಬಿ ಬಂಪ್ ತೋರಿಸುತ್ತಾ ಡ್ರೈವ್ ಹೋಗಿದ್ದಾರೆ. ಡ್ರೈವ್ ಹೊರಟಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋಗೆ 'ಸೂರ್ಯ ಕೂಡ ಬಂದಿದ್ದಾನೆ, ಬೇಬಿ ಬಂಪ್ ಕೂಡ ಬಂದಿದೆ' ಎಂದು ಹೇಳಿದ್ದಾರೆ. ಇಲಿಯಾನಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇಲಿಯಾನಾ ಯಾವುದೇ ಪೋಸ್ಟ್ ಹಂಚಿಕೊಂಡರೂ ಮುಗುವಿನ ತಂದೆ ಯಾರು ಎನ್ನುವ ಪ್ರಶ್ನೆ ಎದುರಾಗುತ್ತಿದೆ. ನೆಟ್ಟಿಗರು ತಂದೆ ಯಾರೆಂದು ರಿವೀಲ್ ಮಾಡಿ ಎನ್ನುತ್ತಿದ್ದಾರೆ. 

ನಿನ್ನನ್ನು ಭೇಟಿಯಾಗಲು ಕಾಯುತ್ತಿದ್ದೀನಿ ಎಂದ ನಟಿ

ತಾಯಿಯಾಗುತ್ತಿರುವ ವಿಚಾರವನ್ನು ಇಲಿಯಾನಾ ಕಳೆದ ಕೆಲವು ದಿನಗಳ ಹಿಂದೆ ಬಹಿರಂಗ ಪಡಿಸಿದ್ದರು. ಇಲಿಯಾನಾ ಎರಡು ಪೋಟೋ ಶೇರ್ ಮಾಡಿ, ಒಂದು ಫೋಟೋದಲ್ಲಿ ಅಡ್ವೆಂಚರ್ ಆರಂಭವಾಗುತ್ತಿದೆ ಎಂದು ಮಗುವಿನ ಬಟ್ಟೆ ಹಂಚಿಕೊಂಡಿದ್ದರು ಮತ್ತೊಂದು ಫೋಟೋದಲ್ಲಿ ಅಮ್ಮ ಎನ್ನುವ ಪೆಂಡೆಂಟ್ ಧರಿಸಿರುವ ಫೋಟೋ ಹಂಚಿಕೊಂಡಿದ್ದರು. ಜೊತೆಗೆ 'ನನ್ನ ಪುಟ್ಟ ಡಾರ್ಲಿಂಗ್ ಭೇಟಿಯಾಗಲು ಕಾಯಲು ಸಾಧ್ಯವಿಲ್ಲ, ಶೀಘ್ರದಲ್ಲೇ' ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದರು.

ಇಲಿಯಾನಾ ಮದುವೆಯಾಗಿದ್ದಾರಾ ಅಥವಾ ಲಿವಿಂಗ್ ಟುಗೆದರ್‌ನಲ್ಲಿದ್ದಾ, ಮಗುವಿನ ತಂದೆಯಾರು ಎನ್ನುವ ಯಾವುದೇ ಮಾಹಿತಿ ಪಡಿಸಿಲಿಲ್ಲ. ಇಲಿಯಾನಾ, ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅನೇಕ ಬಾರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರವಾಸಕ್ಕೆ ಹೋದ ಸಮಯದಲ್ಲೂ ಕತ್ರಿನಾ ಗ್ಯಾಂಗ್ ಜೊತೆ ಇಲಿಯಾನಾ ಕಾಣಿಸಿಕೊಂಡಿದ್ದರು. 

ಮೊದಲ ಬೇಬಿ ಬಂಪ್ ಫೋಟೋ ವೈರಲ್ 

ಇಲಿಯಾನಾ ಇತ್ತೀಚಿಗಷ್ಟೆ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಬೇಬಿ ಬಂಪ್ ತೋರಿಸಿದ್ದರು. ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದರು. ಫೋಟೋ ಶೇರ್ ಮಾಡಿ ಇಲಿಯಾನಾ ಬಂಪ್ ಅಲರ್ಟ್ ಎಂದು ಶೇರ್ ಮಾಡಿದ್ದಾರೆ. ಇಲಿಯಾನಾ ಶೇರ್ ಮಾಡಿರುವ ಫೋಟೋಗೆ ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದರು. 
 

Follow Us:
Download App:
  • android
  • ios