ಬಾಲಿವುಡ್‌ನ ಇನ್ನೊಬ್ಬ ಸೆಲೆಬ್ರಿಟಿ ಪ್ರೆಗ್ನೆಂಟ್ ಅಂದರೆ ಅನುಷ್ಕಾ ಶರ್ಮಾ. ಈಕೆ ಕೂಡ ಕರೀನಾ ಕಪೂರ್ ಥರಾ ಸದ್ಯದಲ್ಲೇ ಎಕ್ಸ್‌ಪೆಕ್ಟಿಂಗ್. ಈಕೆ ಕಪ್ಪು ಡಾಟೆಡ್ ಪೋಲ್ಕಾ ಧರಿಸಿ ಗಂಡ ವಿರಾಟ್ ಜೊತೆಗೆ ಬೇಬಿ ಬಂಪ್ ಪ್ರದರ್ಶಿಸಿದ ಫೋಟೋ ವೈರಲ್ ಆಗಿತ್ತು. ಸದ್ಯ ಪ್ರೆಗ್ನೆನ್ಸಿಯ ಖುಷಿ ಅನುಭವಿಸುತ್ತ ಮುಂಬಯಿಯ ತಮ್ಮ ಮನೆಯಲ್ಲಿರುವ ಅನುಷ್ಕಾ, ಗರ್ಭ ಧರಿಸಿರೋರು ಹ್ಯಾಪಿಯೋಗಿರೋಕೆ ಕೆಲವೊಂದು ಸೂತ್ರಗಳನ್ನು ನೀಡಿದ್ದಾರೆ.

- ಗಂಡ ವಿರಾಟ್ ಕೊಹ್ಲಿ ಜೊತೆಯಲ್ಲಿ ಇಲ್ಲ. ಕ್ರಿಕೆಟ್ ಪಂದ್ಯಾಟಕ್ಕೆ ದೇಶದ ನಾನಾ ಕಡೆ ಅಥವಾ ವಿದೇಶದಲ್ಲಿ ಸಂಚರಿಸುತ್ತಾ ಇರುತ್ತಾನೆ. ಆದರೆ ಆಟದಿಂದ ಬಿಡುವು ಸಿಕ್ಕಿದಾಗ, ದೇಶದಲ್ಲಿದ್ದಾಗ ಹೆಚ್ಚಾಗಿ ಮನೆಯಲ್ಲೇ ಇರುತ್ತಾನೆ. ಈ ಸಂದರ್ಭದಲ್ಲಿ ಮಗುವಿನ ತಂದೆ ಅರ್ಥಾತ್ ಗಂಡ ಜೊತೆಗಿರೋದು ತುಂಬಾ ಮುಖ್ಯ. ಅದು ನಿಮ್ಮ ಸ್ಟ್ರೆಸ್ ಅನ್ನು ಎಷ್ಟೋ ಕಡಿಮೆ ಮಾಡುತ್ತೆ. ಬಿಡುವು ಸಿಕ್ಕಾಗ ಅನುಷ್ಕಾಳ ಹೊಟ್ಟೆಯ ಮೇಲೆ ತಲೆ ಇಡೋದು, ಪುಟ್ಟ ಮಗುವಿನ ಲಯಬದ್ಧ ಎದೆ ಬಡಿತ ಆಲಿಸೋದು ವಿರಾಟ್‌ಗೆ ತುಂಬಾ ಇಷ್ಟ. 

ಸೈಫ್,‌ ಶಾಹಿದ್‌ ನಂತರ ಪೆಟರ್ನಿಟಿ ಲೀವ್‌ ತೆಗೆದುಕೊಳ್ಳುತ್ತಿದ್ದಾರೆ ಕೊಹ್ಲಿ! ...

- ಹೆಲ್ದೀ ಡಯಟ್ ತುಬಾ ಇಂಪಾರ್ಟೆಂಟು. ಎಲ್ಲ ಬಗೆಯ ಪೌಷ್ಟಿಕಾಂಶ ಈಗ ಗರ್ಭಿಣಿಗೆ ತುಂಬಾ ಅಗತ್ಯ. ಎಲ್ಲ ಆಹಾರಗಳಿಂದಲೂ ವಿಟಮಿನ್‌ಗಳು ಗರ್ಭ ಸೇರುತ್ತವೆ. ಹೀಗಾಗಿ ಕಾರ್ಬೊಹೈಡ್ರೇಟ್ ಜೊತೆಗೆ ಪ್ರೊಟೀನ್, ಅಪಾಯಕಾರಿ ಅಲ್ಲದ ಕೊಬ್ಬು ಕೂಡ ಅಗತ್ಯ. ಅಕ್ಕಿಯ ಐಟಂಗಳು ಕಾರ್ಬಹೈಡ್ರೇಟ್ ಒದಗಿಸಿದರೆ ತರಕಾರಿ ಪ್ರೊಟೀನನ್ನು ಹಾಗೂ ಹಣ್ಣುಗಳು ವಿಟಮಿನ್‌ಗಳನ್ನು ಒದಗಿಸುತ್ತವೆ. ಮಿತ ಪ್ರಮಾಣದಲ್ಲಿ ಡೇರಿ ಉತ್ಪನ್ನಗಳನ್ನೂ ಸೇವಿಸುತ್ತಾರೆ. ಆದರೆ ಅತಿಯಾದ ಕೊಬ್ಬು ಹಾಗೂ ಮಾಂಸ ಸೇವಿಸುವುದಿಲ್ಲ. ಮೊಟ್ಟೆ ಸೇವಿಸಬೇಕು; ಮೀನು ಓಕೆ. ರೆಡ್ ಮೀಟ್ ಬೇಡ.

- ಟೀ ಅಥವಾ ಕಾಫಿ ದಿನಕ್ಕೆ ಎರಡು ಕಪ್‌ಗಳಿಗಿಂತ ಹೆಚ್ಚು ಸೇವಿಸುವುದು ಬೇಡ.
- ಸ್ಮೋಕಿಂಗ್ ನಿಲ್ಲಿಸಿ. ಆಲ್ಕೋಹಾಲ್ ಬೇಡವೇ ಬೇಡ. ಇದರಿಂದ ಕೆಡುಕೇ ಜಾಸ್ತಿ. ಆಲ್ಕೋಹಾಲ್ ನಿಮ್ಮ ಮೂಡನ್ನು ಚಿಯರಪ್ ಮಾಡುವ ಬದಲು ಇನ್ನಷ್ಟು ಡಿಪ್ರೆಶನ್ ಕಡೆಗೆ ತಳ್ಳುತ್ತೆ.
- ಹೊರಗಿನ ತಿಂಡಿ ಸೇವನೆ ಬೇಡ. ಆದಷ್ಟು ಮನೆಯಲ್ಲೇ ಮಾಡಿದ, ಬಿಸಿಬಿಸಿಯಾದ ಆಹಾರವನ್ನು ಸೇವಿಸಬೇಕು. 

ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್, ಮಡದಿಯ ಪ್ರಧಾನ ಸೇವಕ..ತಪ್ಪೇನಿಲ್ಲ ಬಿಡಿ! ...

- ದಿನಕ್ಕೆ ಮೂರು ಹೊತ್ತು ಹೊಟ್ಟೆ ತುಂಬಾ ಆಹಾರ ಸೇವನೆ ಮಾಡುವವರಾದರೆ ಅದನ್ನು ಬಿಟ್ಟು, ದಿನಕ್ಕೆ ಐದು ಹೊತ್ತು ಸ್ವಲ್ಪಸ್ವಲ್ಪವೇ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು. ಹಾಗಂತ ಸದಾ ಏನನ್ನಾದರೂ ಜಗಿಯುವುದೂ ಒಳ್ಳೆಯದಲ್ಲ. 
- ದೇಹದಲ್ಲಿ ಅತಿಯಾದ ಸುಸ್ತು ಕಂಡು ಬಂದರೆ ವೈದ್ಯರನ್ನು ಕಾಣಬೇಕು. ವೈದ್ಯರು ಹಾಗೂ ಡಯಟಿಶಿಯನ್ ನಂಬರ್ ಪಕ್ಕದಲ್ಲೇ ಇರಲಿ. 
- ಕುಟುಂಬ ಸದಸ್ಯರು ನಿಮಗೆ ಬೆಂಬಲ ನೀಡುವಂತೆ ಹತ್ತಿರದಲ್ಲೇ ಇರಲಿ. ಸಾಧ್ಯವಾದಷ್ಟು ಒಂಟಿಯಾಗಿ ಇರಬೇಡಿ. ಅಪ್ಪ- ಅಮ್ಮ ಅಥವಾ ಗಂಡ ಪಕ್ಕದಲ್ಲಿದ್ದರೆ ಎಷ್ಟೋ ಹಾಯೆನಿಸುತ್ತದೆ. ಏನೋ ಹೇಳಿಕೊಳ್ಳಬೇಕೆನಿಸುತ್ತದೆ. ಆಗ ಹಂಚಿಕೊಳ್ಳಲು ಯಾರಾದರೂ ಇರಬೇಕು.

ಕೆಲಸದಲ್ಲಿ ಫುಲ್‌ ಬ್ಯುಸಿ ಪ್ರೆಗ್ನೆಂಟ್‌ ಅನುಷ್ಕಾ- ನೆಟ್ಟಿಗರಿಂದ ಟ್ರೋಲ್‌! ...

- ಸರಳ ವ್ಯಾಯಾಮಗಳಿರಲಿ. ತುಂಬಾ ಕಷ್ಟದ ಯೋಗಾಸನಗಳನ್ನಾಗಲೀ ಜಿಮ್ ವರ್ಕ್ಔಟ್‌ಗಳನ್ನಾಗಲೀ ಮಾಡಲು ಹೋಗಬೇಡಿ. ಆದರೆ ಮುಂಜಾನೆ ಮತ್ತು ಸಂಜೆ ಮಾಡರೇಟ್ ದೂರದ ವಾಕಿಂಗ್ ಮಾಡುವುದು ಒಳಿತು. 
ರನ್ನಿಂಗ್, ಜಾಗಿಂಗ್ ಬೇಡ. ವಾಕಿಂಗ್ ಕೂಡ ತುಂಬ ಸ್ಪೀಡಾಗಿ ಮಾಡಬೇಡಿ. ಸುಸ್ತು ಆಗದಷ್ಟು ವಾಕಿಂಗ್ ಓಕೆ.
- ಜಾಸ್ತಿ ಪ್ರಯಾಣ ಮಾಡುವುದು ಬೇಡ. ಆರಾಮದಾಯಕವಾದ ವಾಹನದಲ್ಲಾದರೆ ಪ್ರಯಾಣ ಓಕೆ.
- ಸಣ್ಣಪುಟ್ಟ ಮನೆಕೆಲಸ ಮಾಡುವುದು ಓಕೆ. ಭಾರ ಎತ್ತುವುದು ನಾಟ್ ಓಕೆ.
- ಸೆಕ್ಸ್ ಪೂರ್ತಿ ಕೈಬಿಡಬೇಕಿಲ್ಲ. ಹೊಟ್ಟೆಯ ಮೇಲೆ ಒತ್ತಡ ಬೀಳದಂತೆ ಮೃದುವಾಗಿ ಇದರಲ್ಲಿ ತೊಡಗಿಕೊಳ್ಳುವುದು ಲೇಸು. 
- ವಿರಾಮದ ವೇಳೆಯಲ್ಲಿ ಸಂಗೀತ ಕೇಳುವುದು ಒಳ್ಳೆಯ ಅಭ್ಯಾಸ. ಸಂಗೀತ ಕೇಳುವಾಗ ನಿಮ್ಮ ಮೈಮನಗಳೆಲ್ಲ ಶಾಂತವಾಗಿರುತ್ತವೆ. ಮಗು ಕೂಡ ಶಾಂತ ಮನಸ್ಥಿತಿಯನ್ನು ಕಲಿಯುತ್ತದೆ. ಹಾಗೇ ಧ್ಯಾನ ಕೂಡ ಒಳ್ಳೆಯದು.