ಸೋಷಿಯಲ್ ಮೀಡಿಯಾದಲ್ಲಿ ಪ್ರೆಗ್ನೆಂನ್ಸಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಅನುಷ್ಕಾ ಈ ಸಲ ತುಂಬಾನೇ ಡಿಫರೆಂಟ್ ಆಗಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ #CoupleGoals ಅಂತ ಕೆಲವರು ಹೇಳಿದರೆ, ಮತ್ತೆ ಕೆಲವರು ಜೀವ ಬಾಯಿಗೆ ಬಂದಂಗಾಯ್ತು ಎಂದಿದ್ದಾರೆ. 

ಕೆಲಸದಲ್ಲಿ ಫುಲ್‌ ಬ್ಯುಸಿ ಪ್ರೆಗ್ನೆಂಟ್‌ ಅನುಷ್ಕಾ- ನೆಟ್ಟಿಗರಿಂದ ಟ್ರೋಲ್‌! 

ಅನುಷ್ಕಾ ಹೇಳಿದ ಮಾತಿದು:
'ಇದು ತಲೆ ಕೆಳಗಿ ಕಾಲು ಮೇಲೆ ಮಾಡುವ 'ಹ್ಯಾಂಡ್ಸ್‌  ಡೌನ್' ವ್ಯಾಯಾಮ. ನನ್ನ ಜೀವನದಲ್ಲಿ ಯೋಗ ಮುಖ್ಯ ಪಾತ್ರ ವಹಿಸುತ್ತದೆ. ಪ್ರೆಗ್ನೆಂನ್ಸಿ ಮುನ್ನ ಮಾಡಬಹುದಾದ ಆಸನಗಳನ್ನು ನಾನು ಈಗಲೂ ಮಾಡಬಹುದು ಎಂದು ನನ್ನ ವೈದ್ಯರೇ ಹೇಳಿದ್ದು. ಆದರೆ ಸರಿಯಾದ ಸಪೋರ್ಟ್‌ ಇರಲೇಬೇಕು ಎಂದು ಹೇಳಿದ್ದಾರೆ. ನಾನು ಹಲವು ವರ್ಷಗಳಿಂದ ಶಿರ್ಸಾಸನ ಮಾಡುತ್ತಿರುವೆ. ಈ ಸಲ ಮಾಡುವಾಗ ಗೋಡೆ ಮಾತ್ರವಲ್ಲ, ನನ್ನ ಗಂಡನ ಸಹಾಯವನ್ನೂ ತೆಗೆದುಕೊಂಡಿರುವೆ.  ನನ್ನ ಯೋಗ ಗುರುಗಳು ವಿಡಿಯೋ ಕಾಲ್‌ನಲ್ಲಿದ್ದು, ಮಾರ್ಗದರ್ಶನ ನೀಡುತ್ತಿದ್ದರು. ಯೋಗ ಮಿಸ್ ಮಾಡಲು ಸಾಧ್ಯವೇ ಇಲ್ಲ. ಪ್ರೆಗ್ನೆಂನ್ಸಿ ಸಮಯದಲ್ಲಿ ಮಾಡುವುದಕ್ಕೆ ತುಂಬಾನೇ ಸಂತೋಷವಾಗುತ್ತಿದೆ,' ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

 

ಅನುಷ್ಕಾ ಶೇರ್ ಮಾಡಿಕೊಂಡ ಫೋಟೋಗೆ ಪ್ರೀತಿ ಝಿಂಟಾ, ರಕುಲ್ ಪ್ರೀತ್,  ಮೌನಿ ರಾಯ್,  ಡಯಾನ ಪೆಂಟಿ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದರೆ ಫೋಟೋ ನೋಡಿ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ. ಹೊಟ್ಟೆಯಲ್ಲಿ ಮಗು ಇಟ್ಟುಕೊಂಡು ಹೀಗೆ ಮಾಡಿದರೆ ಮಗುವಿಗೆ ಏನಾಗುತ್ತದೆ ಎಂಬ ಕಲ್ಪನೆ ಮಾಡಿಕೊಂಡು ಆಶ್ಚರ್ಯ ಚಕಿತರಾಗಿದ್ದಾರೆ. ಯೋಗ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೇ ಹೌದು. ಆದರೆ ಗರ್ಭಿಣಿಯಾಗಿ ಕೆಲವು ಕ್ಲಿಷ್ಟ ಆಸನಗಳನ್ನು ಮಾಡುವುದು ಕೊಂಚ ರಿಸ್ಕೇ. ಈ ಫೋಟೋ ನೋಡಿ ನೀವೇನು ಹೇಳುತ್ತೀರಾ?

ಪತ್ನಿ ಜೊತೆ ಆ ಮೊಮೆಂಟ್ ಅನುಭವಿಸ್ಬೇಕು: ಪೆಟರ್ನಿಟಿ ಲೀವ್ ತಗೊಳ್ತಿದ್ದಾರೆ ಕೊಹ್ಲಿ..!