Chandrayaan- 3: ಇಸ್ರೋ ಮಾಜಿ ಮುಖ್ಯಸ್ಥರಿಗೆ ಪ್ರಕಾಶ್ ರೈ ಲೇವಡಿ: ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಾ ಎಂದು ನೆಟ್ಟಿಗರ ಟೀಕೆ
ಮೋದಿ ವಿರೋಧಿಯಾಗಿ ಹೆಚ್ಚು ಟೀಕೆಗೊಳಗಾಗುವ ಪ್ರಕಾಶ್ ರಾಜ್, ಈಗ ಚಂದ್ರಯಾನ-3 ಲ್ಯಾಂಡಿಂಗ್‌ಗೆ ಮುನ್ನ ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಅವರನ್ನು ಅಪಹಾಸ್ಯ ಮಾಡಿ ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.
ನವದೆಹಲಿ ( ಆಗಸ್ಟ್ 21, 2023): ಭಾರತೀಯ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾದ ನಟ ಪ್ರಕಾಶ್ ರಾಜ್ ಅವರು ಸ್ಯಾಂಡಲ್‌ವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ತಮ್ಮ ಹೆಸರನ್ನು ಗಳಿಸಿದ್ದಾರೆ. 'ವಾಂಟೆಡ್', 'ಸಿಂಗಮ್', 'ದಬಾಂಗ್ 2' ಮತ್ತು ಪೊಲೀಸ್‌ಗಿರಿ ಚಿತ್ರಗಳಲ್ಲಿ ವಿಲನ್ ಪಾತ್ರ ನಿರ್ವಹಿಸುವುದಕ್ಕಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಇಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ವಿಚಾರದ ಬಗ್ಗೆ ಟ್ವೀಟ್ ಹಾಗೂ ಪೋಸ್ಟ್‌ಮಾಡುತ್ತಿರುತ್ತಾರೆ.
ಮೋದಿ ವಿರೋಧಿಯಾಗಿ ಹೆಚ್ಚು ಟೀಕೆಗೊಳಗಾಗುವ ಪ್ರಕಾಶ್ ರಾಜ್, ಈಗ ಚಂದ್ರಯಾನ-3 ಲ್ಯಾಂಡಿಂಗ್‌ಗೆ ಮುನ್ನ ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಅವರನ್ನು ಅಪಹಾಸ್ಯ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ. ಒಂದೆಡೆ, ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ವಿಶೇಷ ಪ್ರಾರ್ಥನೆಗಳು ಹಾಗೂ ಚಂದ್ರಯಾನ ಯೋಜನೆಯಲ್ಲಿ ಈವರೆಗಿನ ಯಶಸ್ಸಿಗೆ ಸಾಕಷ್ಟು ಪ್ರಶಂಸೆಗೆ ಒಳಗಾಗ್ತಿದ್ದಾರೆ.
ಇದನ್ನು ಓದಿ: Gadar - 2 ಗೂ ಮುನ್ನ ಅಮೀಷಾ ಪಟೇಲ್ ನೀಡಿದ್ದ ಹಿಟ್ ಚಿತ್ರಗಳ ವಿವರ ಹೀಗಿದೆ..
ಅದರೆ, ಪ್ರಕಾಶ್ ರಾಜ್ ಎಕ್ಸ್ ಅಂದರೆ ಈ ಹಿಂದಿನ ಟ್ವಿಟ್ಟರ್‌ನಲ್ಲಿ ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಚಹಾವನ್ನು ಸುರಿಯುತ್ತಿರುವ ವ್ಯಂಗ್ಯಚಿತ್ರವನ್ನು ಒಳಗೊಂಡ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, "BREAKING NEWS:- #VikramLander Wowww #justasking ಮೂಲಕ ಚಂದ್ರನಿಂದ ಬಂದ ಮೊದಲ ಫೋಟೋ" ಎಂಬ ಕ್ಯಾಪ್ಷನ್ ಅನ್ನೂ ಬರೆದುಕೊಂಡಿದ್ದಾರೆ.
ಅವರ ಈ ಟ್ವೀಟ್ ವೈರಲ್ ಆಗಿದ್ದು, ಈ ಪೋಸ್ಟ್‌ಗೆ ನೆಟ್ಟಿಗರು ಪ್ರಕಾಶ್ ರಾಜ್ ವಿರುದ್ಧ ತೀವ್ರ ಟೀಕೆ ಮಾಡ್ತಿದ್ದಾರೆ. ಅಲ್ಲದೆ, ಹಲವರು ನಟನ ವಿರುದ್ಧ ಟ್ರೋಲ್ ಮಾಡ್ತಿದ್ದಾರೆ. ‘’ನಿಮ್ಮ ದೇಶ ಮತ್ತು ನಿಮ್ಮ ಸ್ವಂತ ಜನರ ಪ್ರಗತಿ, ಸಾಧನೆಗಳು ಮತ್ತು ಪ್ರಯತ್ನಗಳನ್ನು ನೀವು ದ್ವೇಷಿಸಲು ಪ್ರಾರಂಭಿಸುವಷ್ಟು ದ್ವೇಷವು ನಿಮ್ಮನ್ನು ಎಂದಿಗೂ ಸೇವಿಸಲು ಬಿಡಬೇಡಿ. ಇದು ಜೀವನದ ದುಃಖದ ವ್ಯರ್ಥವಾಗಿದೆ. ಇಸ್ರೋ ಭಾರತದ ಅತ್ಯುತ್ತಮವನ್ನು ಪ್ರತಿನಿಧಿಸುತ್ತದೆ. ಇದು ಅತ್ಯಲ್ಪ ಸಂಪನ್ಮೂಲಗಳು ಮತ್ತು ನಿರಾಶಾವಾದಿ ವಾತಾವರಣದ ನಡುವೆಯೂ ಶ್ರೇಷ್ಠತೆಯನ್ನು ಸಾಧಿಸಿತು. ಬೆರಳೆಣಿಕೆಯ ರಾಷ್ಟ್ರಗಳು ಮಾತ್ರ ಸಾಧಿಸಿದ್ದನ್ನು ಪ್ರಯತ್ನಿಸುತ್ತಿರುವ ಇಸ್ರೋ ಇದೀಗ ಅತ್ಯುತ್ತಮ ಸ್ಥಾನದಲ್ಲಿದೆ. ಈ ಮನುಷ್ಯ ಭಾರತದ ಕೆಟ್ಟದ್ದನ್ನು ಪ್ರತಿನಿಧಿಸುತ್ತಾನೆ. ತನಗೆ ತುಂಬಾ ಕೊಟ್ಟ ಆ ರಾಷ್ಟ್ರವನ್ನು ದ್ವೇಷಿಸುತ್ತಾನೆ’’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹೇಗಿದೆ ನೋಡಿ ಅಲ್ಲು ಅರ್ಜುನ್ ಮಾವನ ‘ಪಾಲಿಟ್ರಿಕ್ಸ್’: RSS ಅಲ್ಲ, ಎಡ ಪಕ್ಷದ ಸಿದ್ಧಾಂತ ಫಾಲೋ ಮಾಡ್ತಿದ್ದ ಸಾವರ್ಕರ್?
ಇನ್ನೊಬ್ಬ ವ್ಯಕ್ತಿ “ನೀವು ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಿ.. ನೀವು ಸಹ ದೇಶವಾಸಿ ಎಂದು ಹೇಳಲು ನಾಚಿಕೆಯಾಗುತ್ತದೆ. ಇಸ್ರೋ ಬಗ್ಗೆ ನನಗೆ ಹೆಮ್ಮೆ ಇದೆ!! ಜೈ ಹಿಂದ್’’ ಎಂದು ಪೋಸ್ಟ್ ಮಾಡಿದ್ದಾರೆ.
ಚಂದ್ರಯಾನ-3 ಆಗಸ್ಟ್ 23, 2023 ರಂದು (ಬುಧವಾರ), ಸುಮಾರು 18:04 IST ರಂದು ಚಂದ್ರನ ಮೇಲೆ ಇಳಿಯಲಿದೆ. ಇಸ್ರೋ ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸ್ತಿದೆ.
ಇದನ್ನೂ ಓದಿ: ಬ್ರೇಕಪ್ ಆಗ್ತಿದ್ದಾರಾ ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ - ಅರ್ಜುನ್ ಕಪೂರ್? 5 ವರ್ಷದ ಸಂಬಂಧಕ್ಕೆ ಫುಲ್‌ಸ್ಟಾಪ್?