Aadipurush; ಚಿತ್ರಮಂದಿರ ಅಲ್ಲ, ಕಾರ್ಟೂನ್ ನೆಟ್‌ವರ್ಕ್‌ಲ್ಲಿ ರಿಲೀಸ್ ಆಗಲಿ, ಪ್ರಭಾಸ್ ಸಿನಿಮಾ ಹಿಗ್ಗಾಮುಗ್ಗ ಟ್ರೋಲ್

ತೆಲುಗು ಸ್ಟಾರ್ ಪ್ರಭಾಸ್ ಸದ್ಯ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ಟೀಸರ್ ರಿಲೀಸ್ ಆಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. 

prabhas starrer Aadipurush teaser Brutally Trolling For VFX sgk

ತೆಲುಗು ಸ್ಟಾರ್ ಪ್ರಭಾಸ್ ಸದ್ಯ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಆದಿಪುರುಷ್ ರಾಮಾಯಣ ಆಧಾರಿತ ಸಿನಿಮಾವಾಗಿದ್ದು ರಾಮ ಸೀತೆಯ ಪೌರಾಣಿಕ ಕಥೆಯ ಜೊತೆಗೆ ಫ್ಯಾಂಟಸಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಬಾಲಿವುಡ್ ನಿರ್ದೇಶಕ ಓಂ ರಾವುತ್ ಅವರ ಆದಿಪುರುಷ್ ಟೀಸರ್ ಭಾರಿ ನಿರೀಕ್ಷೆ ಮೂಡಿಸಿತ್ತು. ಆದರೆ ಟೀಸರ್ ರಿಲೀಸ್ ಆದ ಬಳಿಕ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ವಿಎಫ್‌ಎಕ್ಸ್ ವಿಚಾರದಲ್ಲಿ ಆದಿಪುರುಷ್ ಸಿನಿಮಾ ಭಾರಿ ನಿರಾಸೆ ಮೂಡಿಸಿದೆ. 

ಆದಿಪುರುಷ್ ಸಿನಿಮಾದ ಟೀಸರ್ ನೋಡಿದ ಅಭಿಮಾನಿಗಳು ಪ್ರಭಾಸ್ ಅವರ ಬಾಹುಬಲಿ ಸಿನಿಮಾಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳನ್ನು ನೋಡಿದ ಅಭಿಮಾನಿಗಳಿಗೆ ಆದಿಪುರುಷ್ ಭಾರಿ ನಿರಾಸೆ ಮೂಡಿಸಿದೆ. ಬಾಹುಬಲಿ ಅಂತ ದೊಡ್ಡ ಸಿನಿಮಾ ನೀಡಿದ ಪ್ರಭಾಸ್ ಅವರ ಆದಿಪುರುಷ್ ಕೂಡ ಅಷ್ಟೇ ಅದ್ದೂರಿಯಾಗಿ ಬರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಟೀಸರ್ ಅಷ್ಟೇ ನಿರಾಸೆ ಮೂಡಿಸಿದೆ. 

Kantara; ರಿಷಬ್ ಶೆಟ್ಟಿ ಸಿನಿಮಾಗೆ ಪ್ರಭಾಸ್ ಫಿದಾ, ಕ್ಲೈಮ್ಯಾಕ್ಸ್ ಬಗ್ಗೆ ಹೇಳಿದ್ದೇನು?

ಟೀಸರ್ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲ್ಲ, ಕಾರ್ಟೂನ್ ನೆಟ್‌ವರ್ಕ್ ನಲ್ಲಿ ರಿಲೀಸ್ ಆಗಲಿದೆ ಎಂದು ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಟೀಸರ್‌ನ ಪ್ರಾರಂಭದಲ್ಲಿ ಪ್ರಭಾಸ್ (ರಾಮ)  ರಾಕ್ಷಸರನ್ನು ಬಾಣದಿಂದ ಕೊಲ್ಲುವುದರಿಂದ ಹಿಡಿದು ಸೈಫ್ ಅಲಿ ಖಾನ್ (ರಾವಣ) ಸವಾರಿ ಮಾಡುವ ಡ್ರ್ಯಾಗನ್, ಲಂಕಾ ಮಾರ್ಗದ ಕಲ್ಲಿನ ಸೇತುವೆಯ ಮೇಲೆ ಶ್ರೀರಾಮನ ಪಕ್ಕದಲ್ಲಿ ಇಳಿಯುವ ಹನುಮಾನ್-ಮನುಷ್ಯರು. ಕೃತಿ ಸನೋನ್ (ಸೀತಾ) ಹಾಗೂ ಸುತ್ತಲಿನ ಕೃತಕ ಹೂವಿನ ಉದ್ಯಾನವನದ ದೃಶ್ಗಳು ದಶಕದ ಹಿಂದೆ ಮಾಡಿದ ಕಡಿಮೆ-ಬಜೆಟ್‌ನ ವೀಡಿಯೊ ಗೇಮ್‌ನಂತೆ ಕಾಣುತ್ತಿವೆ ಎನ್ನುತ್ತಿದ್ದಾರೆ.

ಅಂದಹಾಗೆ ಆದಿಪುರುಷ್ ಸಿನಿಮಾ ಕೋಟಿ ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ. ಈಗಾಗಲೇ 500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇಷ್ಟಾದರೂ ಚಿತ್ರದ ವಿಎಫ್‌ಎಕ್ಸ್ ಇಷ್ಟ ಕಳಪೆಯಾಗಿ ಬಂದಿರುವುದು ಅಚ್ಚರಿ ಮೂಡಿಸಿದೆ. ನಿರ್ದೇಶಕ ಓಂ ರಾವುತ್ ಅವರನ್ನು ನೆಟ್ಟಿಗರು, ಪ್ರಭಾಸ್ ಅಭಿಮಾನಿಗಳು ದೂರುತ್ತಿದ್ದಾರೆ. ದಯವಿಟ್ಟು ಸಿನಿಮಾದ ಗುಣಮಟ್ಟ ಹೆಚ್ಚಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.  

Prabhas; ಸಲಾರ್ ವಿಡಿಯೋ ಲೀಕ್, ಅಪ್‌ಸೆಟ್ ಆದ ಪ್ರಶಾಂತ್ ನೀಲ್ ಕಟ್ಟುನಿಟ್ಟಿನ ಕ್ರಮ ಜಾರಿ

ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್ ನಟಿಸಿದ್ರೆ, ಸೀತೆಯಾಗಿ ಬಾಲಿವುಡ್ ನಟಿ ಕೃತಿ ಸನೂನ್ ಕಾಣಿಸಿಕೊಂಡಿದ್ದಾರೆ. ರಾವಣ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ದೊಡ್ಡ ತಾರಾಬಳಗ ಇರುವ ಆದಿಪುರುಷ್ ಸಿನಿಮಾದಿಂದ ಒಂದಿಷ್ಟು ಪೋಸ್ಟಗಳು ಮಾತ್ರ ರಿಲೀಸ್ ಆಗಿದ್ದವು. ಇದೀಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಮುಂದಿನ ವರ್ಷ 2023ರಲ್ಲಿ ಆದಿಪುರುಷ್ ರಿಲೀಸ್ ಆಗುತ್ತಿದೆ.   

Latest Videos
Follow Us:
Download App:
  • android
  • ios