Asianet Suvarna News Asianet Suvarna News

'ಪಠಾಣ್' ನಿರ್ದೇಶಕರ ಸಿನಿಮಾದಲ್ಲಿ ಪ್ರಭಾಸ್; ಮತ್ತೆ ಹಿಂದಿಯತ್ತ 'ಸಲಾರ್' ಸ್ಟಾರ್

ಟಾಲಿವುಡ್ ಸ್ಟಾರ್ ಪ್ರಭಾಸ್ ಪಠಾಣ್ ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. 

Prabhas signs new Hindi film with Pathaan Director Siddharth Anand sgk
Author
First Published Jan 16, 2023, 4:12 PM IST

ಟಾಲಿವುಡ್ ಸ್ಟಾರ್ ಪ್ರಭಾಸ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಆದಿಪುರುಷ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಪ್ರಭಾಸ್ ಸಲಾರ್ ಚಿತ್ರದಲ್ಲಿ ನಿರತರಾಗಿದ್ದಾರೆ.  ಬಾಹುಬಲಿ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಆದರೆ ಬಾಹುಬಲಿ ಬಳಿಕ ಪ್ರಭಾಸ್ ಅವರ ಯಾರ ಸಿನಿಮಾಗಳು ಹಿಟ್ ಆಗಿಲ್ಲ. ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಹಾಗಾಗಿ ಮುಂದಿನ ಸಿನಿಮಾದ ಗೆಲುವು ಪ್ರಭಾಸ್ ಅವರಿಗೆ ಅನಿವಾರ್ಯವಾಗಿದೆ. ಇದೀಗ ಪ್ರಭಾಸ್ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ. ಅದೂ ಪಠಾಣ್ ಸಿನಿಮಾದ ನಿರ್ದೇಶಕರ ಚಿತ್ರ ಎನ್ನುವುದು ವಿಶೇಷ. 

ಪ್ರಭಾಸ್ ಮತ್ತೆ ಹಿಂದಿ ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ. ಸದ್ಯ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಸಿದ್ಧಾರ್ಥ್ ಆನಂದ್ ಜೊತೆ ಪ್ರಭಾಸ್ ಸಿನಿಮಾ ಮಾಡುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ಸಿನಿಮಾ ಎಂದರೆ ಪಕ್ಕಾ ಮಾಸ್ ಅಂಡ್ ಆಕ್ಷನ್ ಸಿನಿಮಾ. ವಾರ್ ಮತ್ತು ಸದ್ಯ ರಿಲೀಸ್‌ಗೆ ರೆಡಿಯಾಗಿರುವ ಪಠಾಣ್ ಸಿನಿಮಾ ನೋಡಿದ್ರೆ ಗೊತ್ತಾಗುತ್ತದೆ. ಪ್ರಭಾಸ್ ಜೊತೆಯೂ ಹೈ ವೋಲ್ಟೇಜ್ ಆಕ್ಷನ್ ಚಿತ್ರ ಮಾಡಲಿದ್ದಾರೆ ಎನ್ನಲಾಗಿದೆ. 

ಮೈತ್ರಿ ಮೂವಿ ಮೇಕರ್ಸ್​ನ ನವೀನ್ ಯೆರ್ನೇನಿ ಅವರು ಇತ್ತೀಚೆಗೆ ‘ಎನ್​ಬಿಕೆ ಸೀಸನ್ 2’ರಲ್ಲಿ ಭಾಗಿ ಆಗಿದ್ದರು. ಆಗ ಅವರಿಗೆ ಪ್ರಭಾಸ್ ಜತೆಗಿನ ಹೊಸ ಸಿನಿಮಾದ ಬಗ್ಗೆ ಪ್ರಶ್ನೆ ಮಾಡಲಾಯಿತು. ಅದನ್ನು ನವೀನ್ ಒಪ್ಪಿದ್ದಾರೆ. ಬಳಿಕ ಈ ಸಿನಿಮಾಗೆ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್​ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದರು. 

ಪ್ರಭಾಸ್ ಆದ್ಮೇಲೆ ಮದ್ವೆ ಆಗ್ತೀನಿ ಅಂತೇಳಿ ವಿದೇಶಿ ಹುಡುಗಿಯನ್ನು ವರಿಸಲು ಮುಂದಾದ ಶರ್ವಾನಂದ್

ಸಿದ್ಧಾರ್ಥ್ ಆನಂದ್ ಸಿನಿಮಾ ಅಂದ್ಮೇಲೆ ಮಾಸ್ ಅಂಶ ಹೆಚ್ಚಾಗಿ ಇರುತ್ತೆ. ಸದ್ಯ ರಿಲೀಸ್ ಆಗಿರುವ ಪಠಾಣ್ ಟ್ರೈಲರ್ ನಲ್ಲೂ ಹೈಲೆಟ್ ಆಗಿದೆ. ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಮುಂದಿನ ಸಿನಿಮಾ ಕೂಡ ಕುತೂಹಲ ಹೆಚ್ಚಿಸಿದೆ. ಹಾಗಾಗಿ ಪ್ರಭಾಸ್ ಜೊತೆಯೂ ಾಕ್ಷನ್ ಸಿನಿಮಾ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.

ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೂ ಅಲ್ಲ; 'RRR' ನಿರ್ದೇಶಕ ರಾಜಮೌಳಿ ಹಳೆ ವಿಡಿಯೋ ಸಖತ್ ವೈರಲ್

ಈ ಮೂಲಕ ಪ್ರಭಾಸ್ ಮಸ್ ಹೀರೋ ಆಗಿ ಹಿಂದಿಯಲ್ಲಿ ಅಬ್ಬರಿಸುವುದು ಅಧಿಕೃತವಾಗಿದೆ. ಆದರೆ ಇದಕ್ಕೂ ಮೊದಲು ಪ್ರಭಾಸ್ ತನ್ನ ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸಬೇಕಿದೆ. ಈಗಾಗಲೇ ಆದಿಪುರುಷ್ ಮುಗಿಸಿದ್ದು ಸಲಾರ್ ಮತ್ತು ಇನ್ನೂ ಹೆಸರಿಡದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಲು ಮುಗಿದ ಬಳಿಕ ಪ್ರಭಾಸ್ ಸಿದ್ಧಾರ್ಥ್ ಆನಂದ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಪ್ರಭಾಸ್ ಕೊನೆಯದಾಗಿ ರಾಧೆ ಶ್ಯಾಮ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಸಲಾರ್ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದ್ದು ತೆರೆಮೇಲೆ ಪ್ರಭಾಸ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.  

Follow Us:
Download App:
  • android
  • ios