ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೂ ಅಲ್ಲ ಎಂದು 'RRR' ನಿರ್ದೇಶಕ ರಾಜಮೌಳಿ ಹೇಳಿದ್ದ ಹಳೆಯ ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಪ್ರಭಾಸ್ ಮುಂದೆ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಏನೇನು ಅಲ್ಲ ಎಂದು ಆರ್ ಆರ್ ಆರ್ ನಿರ್ದೇಶಕ ರಾಜಮೌಳಿ ಹೇಳಿದ್ದ ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೇದಿಕೆಯ ಮೇಲೆ ಹೃತಿಕ್ ರೋಷನ್ ಅವರನ್ನು ತೆಗಳಿದ್ದ ರಾಜಮೌಳಿ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಂದಹಾಗೆ ಇದು 2008ರ ವಿಡಿಯೋ. ಪ್ರಭಾಸ್ ನಟನೆಯ 'ಬಿಲ್ಲಾ' ಸಿನಿಮಾದ ಟ್ರೈಲರ್ ಲಾಂಚ್ ಈವೆಂಟ್ ನಲ್ಲಿ ರಾಜಮೌಳಿ ಭಾಗಿಯಾಗಿದ್ದರು. ಆಗ ಟ್ರೈಲರ್ ನೋಡಿ ರಾಜಮೌಳಿ ಪ್ರಭಾಸ್ ಅವರನ್ನು ಹೊಗಳುವ ಭರದಲ್ಲಿ ಹೃತಿಕ್ ಅವರನ್ನು ತೆಗಳಿದ್ದರು. 

ಹಳೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಾಹುಬಲಿ, ಆರ್ ಆರ್ ಆರ್ ಅಂಥ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಾಜಮೌಳಿಯ ಹಳೆಯ ವಿಡಿಯೋ ನೋಡಿ ಅನೇಕರು ಅಚ್ಚರಿ ಪಡುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ರಾಜಮೌಳಿ, 'ಎರಡು ವರ್ಷಗಳ ಹಿಂದೆ ಧೂಮ್ 2 ಬಿಡುಗಡೆಯಾದಾಗ, ಬಾಲಿವುಡ್‌ನಲ್ಲಿ ಮಾತ್ರ ಏಕೆ ಅಂತಹ ಗುಣಮಟ್ಟದ ಚಲನಚಿತ್ರಗಳನ್ನು ಮಾಡಲು ಸಾಧ್ಯ ಎಂದು ನಾನು ಆಶ್ಚರ್ಯಪಟ್ಟೆ. ಹೃತಿಕ್ ರೋಷನ್ ಅವರಂತಹ ಹೀರೋಗಳು ನಮ್ಮಲ್ಲಿ ಇಲ್ಲವೇ? ಅಂದಿಕೊಂಡಿದ್ದೆ. ಬಿಲ್ಲಾ ಚಿತ್ರದ ಹಾಡುಗಳು, ಪೋಸ್ಟರ್ ಮತ್ತು ಟ್ರೇಲರ್ ಅನ್ನು ನಾನು ಈಗಷ್ಟೇ ನೋಡಿದೆ. ನಾನು ಒಂದೇ ಒಂದು ವಿಷಯವನ್ನು ಹೇಳುತ್ತೇನೆ. ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೂ ಅಲ್ಲ. ತೆಲುಗು ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ಮೆಹರ್ ರಮೇಶ್ (ನಿರ್ದೇಶಕ) ಅವರಿಗೆ ನಾನು ಧನ್ಯವಾದ ಹೇಳುತ್ತೇನೆ' ಎಂದು ಹೇಳಿದ್ದರು. 

ರಾಜಮೌಳಿ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ರಾಜಮೌಳಿ ಪರ ಮಾತನಾಡಿದ್ರೆ ಇನ್ನು ಕೆಲವರು ಬೇಸರ ಹೊರಹಾಕುತ್ತಿದ್ದಾರೆ. ರಾಜಮೌಳಿ ಹೇಳಿದ್ದು 'ಪ್ರಭಾಸ್ ಮುಂದೆ ಹೃತಿಕ್ ಏನೂ ಅಲ್ಲ' ಎನ್ನುವುದು ನಿಖರವಾದ ಅನುವಾದವಲ್ಲ. ತೆಲುಗು ಸಿನಿಮಾರಂಗದಲ್ಲಿ ಹೃತಿಕ್ ಅಂತ ಸುಂದರ ನಟ ಇಲ್ಲ ಎನ್ನುತ್ತಾರೆ. ಟ್ರೈಲರ್ ನೋಡಿದ ಮೌಳಿ ಹೃತಿಕ್ ಅಷ್ಟೆ ಸುಂದರ ನಟ ನಮ್ಮಲ್ಲೂ ಇದ್ದಾರೆ ಎಂದು ಹೇಳಿರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಹೃತಿಕ್ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.

ನಟರಿಗೆ ಕೋಟಿ ಕೋಟಿ ಹಣ ಕೊಟ್ರೆ ಹೆಸರು ಮಾಡೋ ಆಸೆ ಇರಲ್ಲ: ಬಿ-ಟೌನ್‌ ಮಂದಿಗೆ ರಾಜಮೌಳಿ ಟಾಂಗ್

ಅಂದಹಾಗೆ ಮೆಹರ್ ರಮೇಶ್ ನಿರ್ದೇಶನದ ಬಿಲ್ಲಾ ಸಿನಿಮಾ ಅಮಿತಾಬ್ ಬಚ್ಚನ್ ಅವರ ಡಾನ್ ಚಿತ್ರದ ರಿಮೇಕ್ ಆಗಿತ್ತು. ಅನುಷ್ಕಾ ಶೆಟ್ಟಿ ಜೊತೆಗೆ ಪ್ರಭಾಸ್ ನಟಿಸಿದ್ದರು. ಈ ಸಿನಿಮಾ 2009 ರಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ಹಿಟ್ ಆಯಿತು. ಇದು ಪ್ರಭಾಸ್ ಅವರ ಬ್ಲಾಕ್ಬಸ್ಟರ್ ಬಾಹುಬಲಿ ಸರಣಿಗೂ ಮುಂಚೆ ಹಿಟ್ ತೆಲುಗು ಚಲನಚಿತ್ರಗಳಲ್ಲಿ ಒಂದಾಗಿದೆ.

Scroll to load tweet…

ಬಿಲ್ಲಾ ಬಿಡುಗಡೆಯಾದ ಸಮಯದಲ್ಲಿ ಪ್ರಭಾಸ್ ತೆಲುಗು ಚಲನಚಿತ್ರೋದ್ಯಮದ ಅತ್ಯಂತ ಭರವಸೆಯ ನಟರಲ್ಲಿ ಒಬ್ಬರಾಗಿದ್ದರು. ಹೃತಿಕ್ ಆಗಲೇ ಸ್ಟಾರ್ ಆಗಿದ್ದರು. ಜೋಧಾ ಅಕ್ಬರ್ ಅಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದರು. ಹೃತಿಕ್ ಕೂಡ ಬಾಲಿವುಡ್‌ನ ಸ್ಟಾರ್ ನಟರಲ್ಲಿ ಒಬ್ಬರು. ನಟನೆ ಜೊತೆಗೆ ಹ್ಯಾಂಡ್ ಸಮ್ ಹಂಕ್ ಕೂಡ. ಹೃತಿಕ್ ಸದ್ಯ ವಿಕ್ರಮ್ ವೇದ ಬಳಿಕ ಮತ್ತೆ ತೆರೆಮೇಲೆ ಬಂದಿಲ್ಲ. ದೀಪಿಕಾ ಪಡುಕೋಣೆ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

RRR; 'ಗೋಲ್ಡನ್ ಗ್ಲೋಬ್' ಪ್ರಶಸ್ತಿಯ 2 ವಿಭಾಗಗಳಿಗೆ ನಾಮಿನೇಟ್ ಆದ ರಾಜಮೌಳಿ ಸಿನಿಮಾ

 ಇನ್ನು ಪ್ರಭಾಸ್ ಬಾಹುಬಲಿ ಸಿನಿಮಾ ಬಳಿಕ ಮತ್ತೊಂದು ಹಿಟ್ ಗಾಗಿ ಕಾಯುತ್ತಿದ್ದಾರೆ. ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾಗಳು ಸೋಲು ಕಂಡಿತು. ಸದ್ಯ ಪ್ರಭಾಸ್ ಆದಿಪುರುಷ್, ಸಲಾರ್ ಸೇರಿದಂತೆ ಇನ್ನೂ ಹೆಸಡಿದ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.