Asianet Suvarna News Asianet Suvarna News

ಬಿಡುಗಡೆಯಾಗಿ ತಿಂಗಳೊಳಗೆ OTTಯಲ್ಲಿ ಬರ್ತಿದೆ ಪ್ರಭಾಸ್ 'ರಾಧೆ ಶ್ಯಾಮ್'

ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಗೂ ತಿಂಗಳೊಳಗೆ ಒಟಿಟಿಗೆ ಬರ್ತಿದೆ. ರಾಧ ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. 

Prabhas Radhe Shyam to release on OTT from April 1st
Author
First Published Mar 28, 2022, 5:59 PM IST

ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್(Prabhas) ನಟನೆಯ ರಾಧೆ ಶ್ಯಾಮ್(Radhe Shyam) ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳೊಳಗೆ ಒಟಿಟಿಗೆ(ott) ಎಂಟ್ರಿ ಕೊಡುತ್ತಿದೆ. ರಾಧ ಕೃಷ್ಣ ಸಾರಥ್ಯದಲ್ಲಿ ಬಂದ ಸಿನಿಮಾ ಭಾರಿ ಹೈಪ್ ಕ್ರಿಯೇಟ್ ಮಾಡಿತ್ತು. ಪೋಸ್ಟರ್, ಟೀಸರ್ ಮೂಲಕ ಸಖತ್ ನಿರೀಕ್ಷೆ ಹುಟ್ಟುಹಾಕಿದ್ದ ಸಿನಿಮಾದ ಬಿಡುಗಡೆ ಬಳಿಕ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದರು ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿಲ್ಲ.

ಇದೀಗ ಬಿಡುಗಡೆಯಾಗಿ ಒಂದು ತಿಂಗಳೊಳಗೆ ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತಿದೆ. ಸಿನಿಮಾ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ನಲ್ಲಿ ತೆರೆಗೆ ಬಂದಿತ್ತು. ಇದೀಗ ಈ ಎಲ್ಲಾ ಭಾಷೆಯಲ್ಲೂ ರಾಧೆ ಶ್ಯಾಮ್ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗಲಿದೆ. ಅಂದಹಾಗೆ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಏಪ್ರಿಲ್ 1ರಿಂದ ಸ್ಟ್ರೀಮಿಂಗ್ ಪ್ರಾರಂಭವಾಗಲಿದೆ. ಅತೀ ದೊಡ್ಡ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಒಂದಾಗಿರುವ ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

ಕಾಲಿನ ಸರ್ಜರಿಗಾಗಿ ಸ್ಪೇನ್ ಗೆ ತೆರಳಿದ್ರಾ ಪ್ರಭಾಸ್?

ರಾಧೆ ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ, ಪ್ರಭಾಸ್ ಎದುರು ನಟಿಸಿದ್ದಾರೆ. ಅಂದಹಾಗೆ ಪ್ರಭಾಸ್, ರಾಧೆ ಶ್ಯಾಮ್ ಬಿಡುಗಡೆಯಾದ ಬಳಿಕ ಸ್ಪೇನ್ ಗೆ ಹಾರಿದ್ದಾರೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕ ಕಾರಣ ಪ್ರಭಾಸ್ ಮಾಧ್ಯಮಗಳಿಂದ ದೂರ ಇರಲು ಸ್ಪೇನ್ ಗೆ ಹೋಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಪ್ರಭಾಸ್ ಕಾಲಿನ ಸರ್ಜರಿಗಾಗಿ ಸ್ಪೇನ್ ಗೆ ಹೋಗಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ಪ್ರಭಾಸ್ ಕಡೆಯಿಂದ ಇನ್ನು ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

ಅಂದಹಾಗೆ ಪ್ರಭಾಸ್ ಬಳಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಪ್ರಭಾಸ್ ಸದ್ಯ ಆದಿಪುರುಷ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ.ಈ ಸಿನಿಮಾ ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶ ಸಲಾರ್ ಸಿನಿಮಾ ಕೂಡ ಪ್ರಭಾಸ್ ಬಳಿ ಇದೆ. ಆದಿಪುರುಷ್ ನಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಿಂಚುತ್ತಿದ್ದಾರೆ. ಸೀತೆ ಪಾತ್ರದಲ್ಲಿ ನಟಿ ಕೃತಿ ಸನೂನ್ ಮಿಂಚುತ್ತಿದ್ದಾರೆ.

ಬಾಲಿವುಡ್ ನಲ್ಲಿ ಮುಗ್ಗರಿಸಿದ ಪ್ರಭಾಸ್: 'ರಾಧೆ ಶ್ಯಾಮ್'ಗೆ ಹೀನಾಯ ಸೋಲು

ಇನ್ನು ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಎರಡು ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಈ ಸಿನಿಮಾಗಳ ಜೊತೆಗೆ ಪ್ರಭಾಸ್ ಇನ್ನು ಹೆಸರಿಡದ ನಾಗ್ ಅಶ್ವಿನ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅಮಿತಾಬ್ ಬಚ್ಚನ್ ಸಹ ನಟಿಸುತ್ತಿದ್ದಾರೆ.

Follow Us:
Download App:
  • android
  • ios