Asianet Suvarna News Asianet Suvarna News

'ಮ್ಯಾಕ್ಸ್‌' ಸಿನಿಮಾದಲ್ಲಿ ಇವರೇ ವಿಲನ್: ಕಿಚ್ಚನ ಮುಂದೆ ಅಬ್ಬರಿಸುವವರು ಇವರೇ!

ಯಾವ್ದೇ ಸಿನಿಮಾ ಆಗ್ಲಿ ಅಲ್ಲಿ ವಿಲನ್ಗಳು ಸ್ಟ್ರಾಂಗ್ ಇದ್ರೆ ಹೀರೋಗಳು ಮತ್ತಷ್ಟು ಮೊಗದಷ್ಟು ವಿಜೃಂಭಿಸಬಹುದು. ಇದನ್ನ ಪ್ರತಿ ಸಿನಿಮಾದಲ್ಲೂ ಪ್ರೂ ಮಾಡ್ತಾರೆ ಎಸ್ಎಸ್ ರಾಜಮೌಳಿ..ಮೌಳಿಯ ಯಾವ್ದೇ ಸಿನಿಮಾ ಇರಲಿ ಅಲ್ಲಿ ವಿಲನ್ಗಳ ಆರ್ಭಟವೇ ಹೆಚ್ಚಿರುತ್ತೆ. 

kichcha sudeep starrer max movie villain latest news viral gvd
Author
First Published Nov 23, 2023, 8:04 PM IST

ಯಾವ್ದೇ ಸಿನಿಮಾ ಆಗ್ಲಿ ಅಲ್ಲಿ ವಿಲನ್ಗಳು ಸ್ಟ್ರಾಂಗ್ ಇದ್ರೆ ಹೀರೋಗಳು ಮತ್ತಷ್ಟು ಮೊಗದಷ್ಟು ವಿಜೃಂಭಿಸಬಹುದು. ಇದನ್ನ ಪ್ರತಿ ಸಿನಿಮಾದಲ್ಲೂ ಪ್ರೂ ಮಾಡ್ತಾರೆ ಎಸ್ಎಸ್ ರಾಜಮೌಳಿ..ಮೌಳಿಯ ಯಾವ್ದೇ ಸಿನಿಮಾ ಇರಲಿ ಅಲ್ಲಿ ವಿಲನ್ಗಳ ಆರ್ಭಟವೇ ಹೆಚ್ಚಿರುತ್ತೆ. ಇದೇ ಫಾರ್ಮಲಾ ಬಳಸಿಕೊಂಡವ್ರು. 

ಅಷ್ಟೆ ಯಾಕೆ ನಮ್ ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ಏನ್ ಕಮ್ಮಿನಾ.. ನೀಲ್ ನಿರ್ದೇಶಿಸಿರೋ ಕೆಜಿಎಫ್ ಸಿನಿಮಾಗಳಲ್ಲಿ ಹೀರೋಗಿಂತ ವಿಲನ್ ಎಷ್ಟು ಸ್ಟ್ರಾಂಗ್ ಅಂತ ನೀವೆಲ್ಲಾ ನೋಡಿದ್ದೀರಾ. ಕೆಜಿಎಫ್ನಲ್ಲಿ ವಿಲನ್ಗಳೇ ಅಬ್ಬರಿಸಿ ಬೊಬ್ಬಿರಿದಿದ್ರು. ಬಾದ್ ಷಾ ಸುದೀಪ್ ತನ್ನ ಸಿನಿಮಾದಿಂದ ಹಲವು ವಿಲನ್ಗಳನ್ನ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ಲೇ ಆರುಮುಗಂ ರವಿಶಂಕರ್. ಕಿಚ್ಚನ ಕೆಂಪೇಗೌಡ ಸಿನಿಮಾದಲ್ಲಿ ರವಿಶಂಕರ್ ಹೇಗೆ ವಿಜೃಂಭಿಸಿದ್ರು, ಆ ಸಿನಿಮಾ ನಂತರ ರವಿಶಂಕರ್ ಇಮೇಜ್ ಯಾವ್ ಮಟ್ಟಕ್ಕೆ ಹೆಚ್ಚಾಗಿ ರೀಚ್ ಆಯ್ತು ಅಂತ ನಿಮ್ಗೆಲ್ಲಾ ಗೊತ್ತೇ ಇದೆ. ಸುದೀಪ್ ಈಗ ಮ್ಯಾಕ್ಸ್ ಮೂಡ್ನಲ್ಲಿದ್ದಾರೆ. 

ರಾ ಲುಕ್, ಖಡಕ್ ಡೈಲಾಗ್ ಅಬ್ಬಬ್ಬ ಅನ್ನಿಸೋ ಕಿಚ್ಚನ ಅಭಿನಯವನ್ನ ಜೆಸ್ಟ್ ಒಂದೇ ಒಂದು ಟೀಸರ್ನಲ್ಲಿ ನೋಡಿ ನೀವೆಲ್ಲಾ ವಾವ್ ಎಂದಿದ್ದೀರಾ.. ಈಗ ಈ ಮ್ಯಾಕ್ಸ್ಗೆ ಅಜಾನಬಾಹು ವಿಲನ್ ಎಂಟ್ರಿ ಆಗಿದೆ. ಮ್ಯಾಕ್ಸ್ ಪಕ್ಕಾ ಮಾಸ್ ಸಿನಿಮಾ. ಮ್ಯಾಕ್ಸ್ ಶೂಟಿಂಗ್ ಮುಗಿಯೋ ಹಂತಕ್ಕೆ ಬಂದಿದೆ. ಚೆನ್ನೈನಲ್ಲಿ ಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಈಗ ಈ ಮ್ಯಾಕ್ಸ್ ನಲ್ಲಿ ವಿಲನ್ ಆಗಿ ಸುದೀಪ್ ಎದುರು ತೊಡೆ ತಟ್ಟೋದು ಯಾರು ಅನ್ನೋ ಗುಟ್ಟು ರಟ್ಟಾಗಿದೆ.  ಅವ್ರೇ ಕಬ್ಜ ಸಿನಿಮಾದಲ್ಲಿ ಅಬ್ಬರಿಸಿದ್ದ, ಘೋಸ್ಟ್ ಸಿನಿಮಾದಲ್ಲಿ ಶಿವಣ್ಣನ ಬಲಗೈ ಬಂಟನಂತೆ ನಟಿಸಿದ್ದ ಅಜಾನಬಾಹು ನಟ ಕಾಮರಾಜು. ಕೆ ಕಾಮರಾಜು ತೆಲುಗು ಚಿತ್ರರಂಗದ ವಿಲನ್. 

ಬಿಳಿ ಕುದುರೆ ಏರಿ ಬಂದ ಕಿಚ್ಚ: ಬಾದ್‌ ಷಾ ಸುದೀಪ್‌ ಕುದುರೆ ಸವಾರಿ ಸಿನಿಮಾಗಾ.? ಜಾಹೀರಾತಿಗಾ.?

ಕಬ್ಜ ಸಿನಿಮಾ ಮೂಲಕ ಕನ್ನಡಕ್ಕೂ ಬಂದ್ರು. ಇವರ ಕನಸಿದ್ದಿದ್ದು ಶಿವಣ್ಣನ ಜೊತೆ ಒಂದ್ ಸಿನಿಮಾ ಮಾಡ್ಬೇಕು ಅನ್ನೋದು ಅದು ಘೋಸ್ಟ್ನಲ್ಲಿ ಈಡೇರ್ತು. ಈಗ ಸುದೀಪ್ಗೂ ಇವರೇ ಖಳನಟ ಆಗಿದ್ದಾರೆ. ಮ್ಯಾಕ್ಸ್ ನಲ್ಲಿ ಸುದೀಪ್ ಪೊಲೀಸ್ ಆಫೀರ್ ರೋಲ್ ಅಂತ ಹೇಳಲಾಗ್ತಿದೆ. ಕಿಚ್ಚ ಈ ಸಿನಿಮಾದಲ್ಲಿ ಭರ್ಜರಿ ಆಕ್ಷನ್  ಮಾಡ್ತಾರಂತೆ. ಮ್ಯಾಕ್ಸ್ನಲ್ಲಿ ಸಖತ್ ಆ್ಯಕ್ಷನ್ ಕೂಡ ಇರಲಿದೆ  ಅನ್ನೋದನ್ನ ಸಿನಿಮಾದ ಫಸ್ಟ್ ಟೀಸರ್ ರಿವೀಲ್ ಮಾಡಿದೆ. ವಿಜಯ್ ಕಾರ್ತಿಕೇಯ ಮ್ಯಾಕ್ಸ್ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ನಟಿ ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಕೂಡ ಮ್ಯಾಕ್ಸ್ನಲ್ಲಿದ್ದಾರೆ. ಮಾಣಿಕ್ಯ ಸಿನಿಮಾದಲ್ಲಿ ಸುದೀಪ್ಗೆ ಪೇರ್ ಆಗಿದ್ದ ವರಲಕ್ಷ್ಮಿ ಶರತ್ ಕುಮಾರ್ ಮ್ಯಾಕ್ಸ್ನಲ್ಲಿ ಹೀರೋಯಿನ್ ಆಗಿದ್ದಾರೆ.

Follow Us:
Download App:
  • android
  • ios