Asianet Suvarna News Asianet Suvarna News

ಪ್ರಭಾಸ್ 'ಆದಿಪುರುಷ್' ಟಿಕೆಟ್ ಬೆಲೆ ಕೇಳಿದ್ರೆ ಹೌಹಾರ್ತೀರಾ: 2000 ರೂಪಾಯಿಗೂ ಅಧಿಕ

ಪ್ರಭಾಸ್ 'ಆದಿಪುರುಷ್' ಟಿಕೆಟ್ ಬೆಲೆ ಕೇಳಿದ್ರೆ ನಿಜಕ್ಕೂ ಹೌಹಾರ್ತೀರಾ. ಒಂದು ಟಿಕೆಟ್‌ನ ಬೆಲೆ 2000 ರೂಪಾಯಿಗೂ ಅಧಿಕ. ಆದರೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. 

prabhas Adipurush tickets sell for Rs 2000 in Delhi and Mumbai sgk
Author
First Published Jun 14, 2023, 12:52 PM IST | Last Updated Jun 14, 2023, 12:52 PM IST

ಟಾಲಿವುಡ್ ಸ್ಟಾರ್ ಪ್ರಭಾಸ್ ಮತ್ತು ಕೃತಿ ಸನೊನ್ ನಟನೆಯ ಆದಿಪುರುಷ್ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಆದಿಪುರುಷ್ ಟಿಕೆಟ್‌ಗಳು ಈಗಾಗಲೇ ವೇಗವಾಗಿ ಮಾರಾಟವಾಗುತ್ತಿವೆ. ಬಹುತೇಕ ಕಡೆ ಫಸ್ಟ್ ಶೋ ಈಗಾಗಲೇ ಹೌಸ್ ಫುಲ್ ಆಗಿದೆ. ದೆಹಲಿ, ಮುಂಬೈ‌ ಅಂತಹ ಮೆಟ್ರೋ ನಗರಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು ಟಿಕೆಟ್ ಬೆಲೆ ಕೂಡ ಗಗನಕ್ಕೇರಿದೆ. ಒಂದು ಟಿಕೆಟ್‌ನ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಹೌದು ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಆದಿಪುರುಷ್ ಟಿಕೆಟ್ ಬೆಲೆ ಬರೋಬ್ಬರಿ 2 ಸಾವಿರ ದಾಟಿದೆ. 

ಆದಿಪುರುಷ್ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾ.  ಬಹುನಿರೀಕ್ಷೆಯ ಸಿನಿಮಾ ಜೂನ್ 16ರಂದು ತೆರೆಗೆ ಬರುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಆದಿಪುರುಷ್ 3ಡಿಯಲ್ಲಿ ಬಿಡುಗಡೆಯಾಗುತ್ತಿದೆ. ಓಂ ರಾವುತ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬಂದಿದೆ. ಸದ್ಯ ಆದಿಪುರುಷ್ ಟಿಕೆಟ್ ಬೆಲೆಯದ್ದೇ ಸುದ್ದಿ. 2ಸಾವಿರ ದಾಟಿದ್ರೂ ಅಭಿಮಾನಿಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ದೆಹಲಿ PVR, ವೇಗಾಸ್ LUXE, ದ್ವಾರಕಾ ಸೇರಿದಂತೆ ಅನೇಕ ಕಡೆ 1800 ರೂಪಾಯಿಯಿಂದ 2000 ರೂಪಾಯಿಗೆ ಮಾರಾಟವಾಗಿವೆ.   
  
ನೋಯ್ಡಾದ ಪಿವಿಆರ್ ಗೋಲ್ಡ್ ಲಾಜಿಕ್ಸ್ ಸಿಟಿ ಸೆಂಟರ್‌ನಲ್ಲಿ ಒಂದು ಟಿಕೆಟ್ ಬೆಲೆ  1650 ಕ್ಕಿಂತ ಹೆಚ್ಚಿದೆ.  ಇನ್ನೂ PVR ಗೋಲ್ಡ್ ಲಾಜಿಕ್ಸ್ ಸಿಟಿ ಸೆಂಟರ್‌ನಲ್ಲಿ ಫ್ಲ್ಯಾಶ್ ಟಿಕೆಟ್‌ಗಳು 1150 ರೂಪಾಯಿ ದರವಿದೆ. ಆದರೂ ಟಿಕೆಟ್‌ಗಳು ವೇಗವಾಗಿ ಬುಕ್ ಆಗುತ್ತಿವೆ. 

ಆದಿಪುರುಷ್ ರಿಲೀಸ್‌ಗೂ ಮೊದಲೇ ಬಾಂಬ್ ಸಿಡಿಸಿದ ವೇಣು ಸ್ವಾಮಿ! : ಪ್ರಭಾಸ್‌ಗೆ ಟೈಮ್‌ ಚೆನ್ನಾಗಿಲ್ಲ ಎಂದ ಸ್ಟಾರ್ ಜ್ಯೋತಿಷಿ

10ಸಾವಿರ ಟಿಕೆಟ್ ಖರೀದಿಸಿದ ರಣಬೀರ್ ಕಪೂರ್ 

ಬಹುನಿರೀಕ್ಷೆಯ ಸಿನಿಮಾ ಆದಿಪುರುಷ್ ಎಲ್ಲಾ ಮಕ್ಕಳು ನೋಡಬೇಕು ಎನ್ನುವುದು ಸಿನಿಮಾತಂಡದ ಬಯಕೆ. ಆದರೆ ಎಲ್ಲಾ ಮಕ್ಕಳಿಗೂ ಸಿನಿಮಾ ಟಿಕೆಟ್ ಖರೀದಿ ಮಾಡಿ ನೋಡಲು ಸಾಧ್ಯವಾಗದ ಕಾರಣ ರಣಬೀರ್ ಕಪೂರ್ ಅಂತ ಮಕ್ಕಳ ಬೆಂಬಲಕ್ಕೆ ನಿಂತಿದ್ದಾರೆ. ಬರೋಬ್ಬರಿ 10 ಸಾವಿರ ಟಿಕೆಟ್ ಖರೀದಿ ಮಾಡಿ ನಿರ್ಗತಿಕ ಮಕ್ಕಳು ನೋಡುವಂತೆ ಮಾಡಿದ್ದಾರೆ. 

ನಾವು ಯಾರನ್ನೂ ತಬ್ಕೊಳಲ್ಲ ಇನ್ನು ಕಿಸ್...; ಕೃತಿನ ತಬ್ಬಿ ಮುತ್ತಿಟ್ಟ ಓಂ ರಾವುತ್‌ ವರ್ತನೆಗೆ ರಾಮಾಯಣದ ಸೀತೆ ಗರಂ

ರಾಮ್ ಚರಣ್ 

ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಕೂಡ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ 10 ಸಾವಿರ ಟಿಕೆಟ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳಿಗಾಗಿ ಹಾಗೂ ಮಕ್ಕಳಿಗಾಗಿ ಟಿಕೆಟ್ ಖರೀದಿಸಿದ್ದಾರೆ ಎನ್ನಲಾಗಿದೆ. ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕೂಡ 10 ಸಾವಿರ ಟಿಕೆಟ್ ಬುಕ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios